ಬೆಂಗಳೂರು ಎಲೆಕ್ಟ್ರಿಕ್ ಶೋರೂಮಲ್ಲಿ ಅಗ್ನಿ ಅವಘಡಕ್ಕೆ ಯುವತಿ ಬಲಿ, ಪ್ರತ್ಯಕ್ಷದರ್ಶಿಗಳು ಹೇಳೋದೇನು?
ಶೋರೂಮಲ್ಲಿದ್ದ ಬ್ಯಾಟರಿಗಳು ಸ್ಫೋಟಗೊಂಡ ಕಾರಣ ಬೆಂಕಿಯ ಪ್ರಮಾಣ ಹೆಚ್ಚಿದೆ ಮತ್ತು ಹೊರಗಿದ್ದವರು ಹತ್ತಿರ ಹೋಗಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿ ಪ್ರವೀಣ್ ಹೇಳುತ್ತಾರೆ. ಪ್ರಿಯಾ ಇದ್ದ ಸ್ಥಳದಲ್ಲಿ ದಟ್ಟವಾದ ಹೊಗೆಯ ಜೊತೆ ಬೆಂಕಿಯೂ ಆವರಿಸಿದ್ದ ಕಾರಣ ಆಕೆಯನ್ನು ರಕ್ಷಿಸಲಾಗಲಿಲ್ಲ ಎಂದು ಅವರು ಹೇಳುತ್ತಾರೆ.
ಬೆಂಗಳೂರು: ನಿನ್ನೆ ಸಾಯಂಕಾಲ 5:30ರ ಸುಮಾರಿಗೆ ರಾಜ್ ಕುಮಾರ್ ರಸ್ತೆಯಲ್ಲಿರುವ ಮೈ ಈವಿ ಎಲೆಕ್ಟ್ರಿಕ್ ಬೈಕ್ ಶೋ ರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಮತ್ತು ಪ್ರಿಯಾ ಹೆಸರಿನ 20-ವರ್ಷ ವಯಸ್ಸಿನ ಯುವತಿ ಅಗ್ನಿಗಾಹುತಿಯಾಗಿದ್ದು ಈಗಾಗಲೇ ವರದಿಯಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಶೋರೂಮಿಗೆ ಬೆಂಕಿ ಹೊತ್ತಿಕೊಂಡಾಗ ಒಳಗಡೆ 7-8 ಜನ ಕೆಲಸ ಮಾಡುತ್ತಿದ್ದರು. ಆದರೆ ಕೊನೆಯಲ್ಲಿ ಉಳಿದಿದ್ದು ಮೂರು ಜನ ಮತ್ತು ಶೋರೂಮಿನ ಗ್ಲಾಸ್ಗಳನ್ನು ಒಡೆದು ಅವರಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದರೂ ಅವರ ದೇಹ ಕನಿಷ್ಠ ಶೇಕಡ 50ರಷ್ಟು ಸುಟ್ಟಿದೆ. ಅವರನ್ನು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತಮಿಳುನಾಡು: ಹೊಸೂರಿನ ಟಾಟಾ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕದಲ್ಲಿ ಭಾರೀ ಅಗ್ನಿ ಅವಘಡ