ಇಪ್ಪತ್ತು ವರ್ಷದ ಹಿಂದೆಯೇ ಮನೆಬಿಟ್ಟಿದ್ದ ವಿಕ್ರಂಗೌಡ ಮನೆಯವರೊಂದಿಗೆ ಸಂಪರ್ಕ ಕಡಿದುಕೊಂಡಿದ್ದ: ಸಹೋದರಿ
ಅಣ್ಣನ ಬಗ್ಗೆ ಮಾತಾಡುವಾಗ ಸುಗುಣ ಸಹಜವಾಗೇ ಭಾವುಕರಾಗುತ್ತಾರೆ. ಹೆಚ್ಚಿನ ಪ್ರಶ್ನೆಗಳಿಗೆ ಅವರು ಒಂದೆರಡು ಪದಗಳಲ್ಲಿ ಚುಟುಕಾದ ಉತ್ತರ ನೀಡಿದ್ದಾರೆ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರಿಂದ ಮನೆಯ ಜವಾಬ್ದಾರಿ ವಿಕ್ರಂಗೌಡನ ಮೇಲಿತ್ತು. ಅದರೆ ನಕ್ಸಲ್ ವಾದದ ಬಗ್ಗೆ ಒಲವು ಬೆಳೆಸಿಕೊಂಡವರಿಗೆ ಸಂಸಾರ, ಬಾಂಧವ್ಯ ಗೌಣವಾಗಿಬಿಡುತ್ತವೆ.
ಉಡುಪಿ: ಮೊನ್ನೆ ರಾತ್ರಿ ನಡೆದ ಪೊಲೀಸ್ ಮತ್ತು ಎಎನ್ಎಫ್ ಸಿಬ್ಬಂದಿಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂಗೌಡನ ತಂಗಿ ಸುಗುಣ ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ. ಸುಗುಣಗೆ ಇಬ್ಬರು ಅಣ್ಣಂದಿರು ಮತ್ತು ವಿಕ್ರಮಗೌಡ ಹಿರಿಯ. ಬಾಲ್ಯದಲ್ಲೇ ಹೋರಾಟದ ಬಗ್ಗೆ ಆಸಕ್ತಿ ಹೊಂದಿದ್ದ ಅವನು ಕೇವಲ ಹತ್ತನೇ ಕ್ಲಾಸ್ ವರೆಗೆ ಮಾತ್ರ ಓದಿದ್ದ. ಅವನು ಮನೆಬಿಟ್ಟು 20 ವರ್ಷ ಮೇಲಾಗಿತ್ತು ಮತ್ತು ಮನೆಯವರೊಂದಿಗೆ ಸಂಪರ್ಕ ಇಟ್ಟುಕೊಂಡಿರಲಿಲ್ಲ ಅಂತ ಸುಗುಣ ಹೇಳುತ್ತಾರಾದರೂ, 8 ವರ್ಷದ ಹಿಂದೆ ಹಿರಿಯಣ್ಣನೇ ತನ್ನ ಮದುವೆ ಮಾಡಿಸಿದ್ದ ಎನ್ನುತ್ತಾರೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಕ್ಸಲ್ ನಾಯಕ ವಿಕ್ರಂಗೌಡನ ಹೃದಯದಲ್ಲಿ ಅರಳಿತ್ತು ಪ್ರೇಮ, ಪ್ರೇಯಸಿ ಯಾರು, ಮುಂದೇನಾಯ್ತು?
Latest Videos