ನಕ್ಸಲ್​ ನಾಯಕ ವಿಕ್ರಂಗೌಡನ ಹೃದಯದಲ್ಲಿ ಅರಳಿತ್ತು ಪ್ರೇಮ, ಪ್ರೇಯಸಿ ಯಾರು, ಮುಂದೇನಾಯ್ತು?

ಚಿಕ್ಕಮಗಳೂರಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ವಿಕ್ರಂಗೌಡ ಮೃತಪಟ್ಟಿದ್ದಾನೆ. ಅವನ ಪ್ರೇಮಕಥೆ ಮತ್ತು ನಂತರದ ಬೇರ್ಪಾಟು ಕೂಡ ಈ ಘಟನೆಯಲ್ಲಿ ಮುಖ್ಯ ಅಂಶವಾಗಿದೆ. ನಕ್ಸಲ್ ನಾಯಕಿ ಸಾವಿತ್ರಿಯನ್ನು ವಿಕ್ರಂಗೌಡ ಪ್ರೀತಿಸಿ ಮದುವೆಯಾಗಿದ್ದನು. ನಂತರ ಇವರಿಬ್ಬರು ಬೇರೆಯಾದರು. ಕಾರಣವೇನು? ಇಲ್ಲಿದೆ ಓದಿ

ನಕ್ಸಲ್​ ನಾಯಕ ವಿಕ್ರಂಗೌಡನ ಹೃದಯದಲ್ಲಿ ಅರಳಿತ್ತು ಪ್ರೇಮ, ಪ್ರೇಯಸಿ ಯಾರು, ಮುಂದೇನಾಯ್ತು?
ನಕ್ಸಲ್​ ನಾಯಕ ವಿಕ್ರಂಗೌಡ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ವಿವೇಕ ಬಿರಾದಾರ

Updated on:Nov 20, 2024 | 10:18 AM

ಚಿಕ್ಕಮಗಳೂರು, ನವೆಂಬರ್​ 20: ಪಶ್ಚಿಮ ಘಟ್ಟಗಳ ಸಾಲಿನ ‌ದಟ್ಟ ಕಾಡಿನಲ್ಲಿ 13 ವರ್ಷಗಳ ಬಳಿಕ ಸೋಮವಾರ (ನ.18) ರಂದು ಗುಂಡಿನ ‌ಸದ್ದು ಕೇಳಿಸಿತ್ತು. 20 ವರ್ಷಗಳ ಕಾಲ ಉಡುಪಿ ಮತ್ತು ಚಿಕ್ಕಮಗಳೂರು (Chikkamagaluru) ಜಿಲ್ಲಾ ಪೊಲೀಸರ ಹಾಗೂ ಎನ್​ಎಫ್​ (ANF) ಸಿಬ್ಬಂದಿಗಳ ನಿದ್ದೆಗೆಡಿಸಿದ್ದ ನೇತ್ರಾವತಿ ದಳದ ನಕ್ಸಲ್ ನಾಯಕ ವಿಕ್ರಂಗೌಡ ಎನ್​ಕೌಂಟರ್​​ನಲ್ಲಿ ಮೃತಪಟ್ಟಿದ್ದಾನೆ.

ಗುಂಡೇಟಿಗೆ ಬಲಿಯಾದ ವಿಕ್ರಂಗೌಡ ಹಿಂದೆ ಇದೆ ಒಂದು ಪ್ರೇಮ ಕಹಾನಿ. ಕಳೆದ 20 ವರ್ಷಗಳಿಂದ ನಕ್ಸಲ್​ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ವಿಕ್ರಂಗೌಡನಿಗೂ ಪ್ರೇಮಾಂಕುರವಾಗಿತ್ತು. ಕರ್ನಾಟಕದ ನಕ್ಸಲ್ ನಾಯಕಿ ಸಾವಿತ್ರಿ ಮೇಲೆ ವಿಕ್ರಂಗೌಡನಿಗೆ ಲವ್​ ಆಗಿತ್ತು. ಇವರಿಬ್ಬರಿಗೂ ನಕ್ಸಲರು ಮುಖಂಡರು ಕಾಡಿನಲ್ಲೇ ವಿವಾಹ ಮಾಡಿಸಿದ್ದರು.

ಮದೆಯಾದ ಬಳಿಕ ಸಾವಿತ್ರಿ, ವಿಕ್ರಂಗೌಡಗೆ ಪೊಲೀಸರ ಮುಂದೆ ಶರಣಾಗೋಣ ಎಂದು ಹೇಳಿದ್ದಾಳೆ. ಆದರೆ, ವಿಕ್ರಂಗೌಡ ಶರಣಾಗಲು ಒಪ್ಪದೆ ಮತ್ತು ನಕ್ಸಲ್​ ಚಟುವಟಿಕೆ ಸಲುವಾಗಿ ಸಾವಿತ್ರಿಯಿಂದ ದೂರವಾಗಿದ್ದನು. ಬಳಿಕ, ಸಾವಿತ್ರಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿಯನ್ನು ವಿವಾಹವಾದಳು. ಸಾವಿತ್ರಿ ಮತ್ತು ಬಿ.ಜಿ‌.ಕೃಷ್ಣಮೂರ್ತಿ ದಂಪತಿ ಕೇರಳ ಪೊಲೀಸರ ಮುಂದೆ ಶರಣಾಗಿದರು. ಸಾವಿತ್ರಿ ಮತ್ತು ಬಿ.ಜಿ.ಕೃಷ್ಣಮೂರ್ತಿ ಮೋಸ್ಟ್ ವಾಂಟೆಡ್​ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: ನಕ್ಸಲ್ ವಿಕ್ರಂ ಗೌಡ ಪೊಲೀಸ್ ಬಲೆಗೆ ಬಿದ್ದಿದ್ಹೇಗೆ? ರೋಚಕ ಕಾರ್ಯಾಚರಣೆಯ ರಹಸ್ಯ ಇಲ್ಲಿದೆ

ಹೋರಾಟದ ಕಿಚ್ಚು ಸಣ್ಣದಿಂದಲೇ ಅವನಿಗೆ ಇತ್ತು: ಸುಗುಣ

ವಿಕ್ರಂಗೌಡ ತಂಗಿ ಸುಗಣ ಮಾತನಾಡಿ, ಅಣ್ಣನ ಸಾವಿನಿಂದ ನೋವಾಗಿದೆ. 20ಕ್ಕಿಂತ ಅಧಿಕ ವರ್ಷ ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿ ಆಗಿರುವ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಹೋರಾಟದ ಕಿಚ್ಚು ಸಣ್ಣದಿಂದಲೇ ಅವನಿಗೆ ಇತ್ತು ಎಂದು ಹೇಳಿದರು.

ಆಹಾರ ಸಂಗ್ರಹಕ್ಕೆ ಬಂದಾಗ ಗುಂಡಿನ ಕಾಳಗ

ಸೋಮವಾರ (ನ.18)ರ ಕರ್ನಾಟಕಕ್ಕೆ ವಾಪಸ್ ಆಗಿರುವ ನೇತ್ರಾವತಿ ತಂಡ ‌ಮತ್ತು ತುಂಗಾ ತಂಡ ರಾತ್ರಿ ಆಹಾರ ಸಾಮಾಗ್ರಿಗಳ ಸಂಗ್ರಹಕ್ಕೆ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಕಬ್ಬಿನಾಲೆ ಅರಣ್ಯದ ಕಾಡಂಚಿನ ಸೀತಂಬೈಲು ಗ್ರಾಮದ ಒಂಟಿ ಮನೆಗೆ ಬಂದಿದ್ದವು. ಈ ವಿಚಾರ ಮೊದಲೆ ತಿಳಿದಿದ್ದ ಎನ್​ಎಫ್​​ ಸಿಬ್ಬಂದಿಗಳು ಮನೆಯನ್ನು ಸುತ್ತುವರೆದಿದ್ದರು. ನಕ್ಸಲ್​ರು ಬರುತ್ತಿದ್ದಂತೆ, ಗುಂಡಿನ ಸುರಿಮಳೆ ಗೈದರು. ನಕ್ಸಲರು ಕೂಡ ಎಎನ್​ಎಫ್​ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು.

ಈ ಗುಂಡಿನ ಚಕಮಕಿಯಲ್ಲಿ ವಿಕ್ರಂಗೌಡ ಬಲಿಯಾದನು. ವನಜಾಕ್ಷಿ, ಸುಂದರಿ ಸೇರಿದಂತೆ ಮೂವರು ಪರಾರಿಯಾಗಿದ್ದಾರೆ. ಇವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಚಿಕ್ಕಮಗಳೂರು ಉಡುಪಿ, ಮಂಗಳೂರು, ಶಿವಮೊಗ್ಗ ಭಾಗದಲ್ಲಿ ಕೂಂಬಿಂಗ್ ಕಾರ್ಯಚರಣೆ ಚುರುಕುಗೊಂಡಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:55 am, Wed, 20 November 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ