Train Cancel: ಈ ವಾರಾಂತ್ಯದಲ್ಲಿ ರಾಜ್ಯದ ಕೆಲ ರೈಲುಗಳ ಸಂಚಾರ ರದ್ದು
ಬೆಂಗಳೂರಿನಿಂದ ವಾರಾಂತ್ಯದಲ್ಲಿ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ನಿರಾಶೆ ಕಾದಿದೆ. ನವೆಂಬರ್ 23 ಮತ್ತು 24 ರಂದು ಹಲವು ರೈಲುಗಳ ಸಂಚಾರ ರದ್ದು ಅಥವಾ ಭಾಗಶಃ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳು ತಡವಾಗಿ ಹೊರಡಲಿವೆ. ನಿರ್ವಹಣಾ ಕಾರ್ಯಗಳಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಬೆಂಗಳೂರು, ನವೆಂಬರ್ 20: ವಾರಾಂತ್ಯದಲ್ಲಿ ಬೆಂಗಳೂರಿನಿಂದ (Bengaluru) ತಮ್ಮ ಊರುಗಳಿಗೆ ತೆರಳುವವರಿಗೆ ನಿರಾಶೆ ಕಾದಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಕೆಲ ರೈಲುಗಳ ಸಂಚಾರ ರದ್ದು (Train Cancel) ಮಾಡಲಾಗಿದೆ. ಹಾಗೇ ಕೆಲ ರೈಲುಗಳು ತಡವಾಗಿ ಆರಂಭವಾಗಲಿವೆ. ಈ ಕುರಿತು ನೈಋತ್ಯ ರೈಲ್ವೆ (South Western Railway) ಸಾಮಾಜಿಕ ಮಾಧ್ಯಮ ಎಕ್ಸ್ ಮುಖಾಂತರ ತಿಳಿಸಿದೆ.
ನಿಡವಂದ ಯಾರ್ಡ್ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ನಡೆಯಲಿದೆ. ಹೀಗಾಗಿ ತುಮಕೂರು-ಬಾಣಸವಾಡಿ ಮೆಮು ವಿಶೇಷ ರೈಲು ಮತ್ತು ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು ರದ್ದಾಗಲಿದೆ
ರೈಲು ಸಂಚಾರ ರದ್ದು
ನವೆಂಬರ್ 23 ರಂದು ತುಮಕೂರು-ಬಾಣಸವಾಡಿ ಮೆಮು ವಿಶೇಷ ರೈಲು (06512), ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು (16239) ಮತ್ತು ಯಶವಂತಪುರ- ಚಿಕ್ಕಮಗಳೂರು ಡೈಲಿ ಎಕ್ಸ್ ಪ್ರೆಸ್ (16240) ರೈಲುಗಳ ಸಂಚಾರ ರದ್ದಾಗಲಿದೆ.
ಇದನ್ನೂ ಓದಿ: ಇನ್ಮುಂದೆ ರೈಲು ನಿಲ್ದಾಣದಲ್ಲಿ ಟಿಕೆಟ್ಗಾಗಿ ನಿಲ್ಲಬೇಕಿಲ್ಲ ಕ್ಯೂ: ನಿಂತಿದ್ದಲ್ಲೇ ಸಿಗಲಿದೆ ಟಿಕೆಟ್!
ಭಾಗಶಃ ರದ್ದು
ನವೆಂಬರ್ 23 ಮತ್ತು 24 ರಂದು ಕೆಎಸ್‌ಆರ್ ಬೆಂಗಳೂರು-ತುಮಕೂರು ಮಮು ವಿಶೇಷ (06571) ರೈಲು ಸೇವೆಯನ್ನು ದೊಡ್ಡಬೆಲೆ-ತುಮಕೂರು ನಡುವೆ ಮತ್ತು ತುಮಕೂರು-ಕೆಎಸ್‌ಆರ್ ಬೆಂಗಳೂರು ಮಮು ವಿಶೇಷ (06576) ರೈಲು ಸೇವೆಯನ್ನು ತುಮಕೂರು-ದೊಡ್ಡಬೆಲೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿವೆ. ನವೆಂಬರ್ 23 ರಂದು ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (06575) ರೈಲು ದೊಡ್ಡಬೆಲೆ-ತುಮಕೂರು ನಡುವೆ ಮತ್ತು ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ (06572) ರೈಲು ಸೇವೆಯನ್ನು ತುಮಕೂರು-ದೊಡ್ಡಬೆಲೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ.
ಟ್ವಿಟರ್ ಪೋಸ್ಟ್
Kindly note the Change in pattern of train services due to safety-related work at Nidvanda Yard. ನಿಡವಂದ ಯಾರ್ಡ್ ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಸಲುವಾಗಿ, ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ.#SWRupdates pic.twitter.com/uq9MXZVqeI
— South Western Railway (@SWRRLY) November 19, 2024
ರೈಲುಗಳ ನಿಯಂತ್ರಣ
ನವೆಂಬರ್ 22 ರಂದು ಹೊರಡುವ ರೈಲು ಸಂಖ್ಯೆ 17392 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗದಲ್ಲಿ 20 ನಿಮಿಷ, ನವೆಂಬರ್ 24 ರಂದು ಹೊರಡುವ ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗದಲ್ಲಿ 30 ನಿಮಿಷ ಮತ್ತು ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗದಲ್ಲಿ 120 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
ತಡವಾಗಿ ಆರಂಭ
ನವೆಂಬರ್ 24 ರಂದು ಪ್ರಾರಂಭವಾಗುವ ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ದಗಂಗಾ ಡೈಲಿ ಎಕ್ಸ್ ಪ್ರೆಸ್ (12725) ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣದಿಂದ 30 ನಿಮಿಷ ಮತ್ತು ಯಶವಂತಪುರ-ಶಿವಮೊಗ, ಟೌನ್ ಇಂಟರ್ ಸಿಟಿ ಡೈಲಿ ಎಕ್ಸ್ ಪ್ರೆಸ್ (16579) ರೈಲು ಯಶವಂತಪುರದಿಂದ 90 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ