ದಳಪತಿ ವಿಜಯ್‌ಗೆ ನಟಿಯ ಜೊತೆ ಅಫೇರ್; ತ್ರಿಶಾ ಮೇಲೆ ಗೂಬೆ ಕೂರಿಸಿದ ನೆಟ್ಟಿಗರು
ದಳಪತಿ ವಿಜಯ್ ಮತ್ತು ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಂಗೀತಾ ಅವರು ವಿಜಯ್‌ಗೆ ಬೇರೆ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಈ ಕಾರಣಕ್ಕೆ ತ್ರಿಶಾ ಹೆಸರು ಹೆಚ್ಚು ಚರ್ಚೆಯಾಗುತ್ತಿದೆ. 1999ರಲ್ಲಿ ವಿವಾಹವಾಗಿದ್ದ ವಿಜಯ್-ಸಂಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸಂಗೀತಾ ಆರೋಪದ ಬೆನ್ನಲ್ಲೇ ತ್ರಿಶಾ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ.

ದಳಪತಿ ವಿಜಯ್ (Vijay) ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ವಿಜಯ್‌ಗೆ ಬೇರೆ ನಟಿಯ ಜೊತೆ ಸಂಬಂಧ ಇದೆ ಎಂದು ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ವಿಜಯ್ ಹಾಗೂ ಸಂಗೀತಾ ಹಲವು ವರ್ಷಗಳಿಂದ ದೂರವೇ ವಾಸವಾಗಿದ್ದಾರೆ ಎನ್ನಲಾಗಿದೆ. ಈಗ ಅವರು ಏಕಾಏಕಿ ಕೌಟುಂಬಿಕ ನ್ಯಾಯಲಕ್ಕೆ ಅರ್ಜಿ ಸಲ್ಲಿಕೆ ಮಾಡಿ ಡಿವೋರ್ಸ್ ಕೇಳಿದ್ದಾರೆ. ಈ ಮಧ್ಯೆ ನಟಿ ತ್ರಿಶಾ ಮೇಲೆ ಎಲ್ಲರೂ ಅನುಮಾನ ಹೊರಹಾಕುತ್ತಿದ್ದಾರೆ.
ವಿಜಯ್ ಹಾಗೂ ಸಂಗೀತಾ ಅವರು 1999ರ ಆಗಸ್ಟ್ 25ರಂದು ವಿವಾಹ ಆದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜೇಸನ್ ಸಂಜಯ್ ಹಾಗೂ ದಿವ್ಯಾ ಶಾಶಾ ಎಂಬುದು ಮಕ್ಕಳ ಹೆಸರು. ಸಂಗೀತಾ ಅವರು ಲಂಡನ್ ಮೂಲದ ಉದ್ಯಮಿಯ ಮಗಳು. 1996ರಲ್ಲಿ ರಿಲೀಸ್ ಆದ ವಿಜಯ್ ನಟನೆಯ ‘ಪೂವೆ ಉನಕ್ಕಗ’ ಸಿನಿಮಾ ನೋಡಿ ಸಂಗೀತಾ ಇಂಪ್ರೆಸ್ ಆದರು. ಅವರು ಲಂಡನ್ ಅಲ್ಲಿ ಇದ್ದುಕೊಂಡೇ ವಿಜಯ್‌ಗೆ ಪತ್ರಗಳನ್ನು ಬರೆಯುತ್ತಿದ್ದರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು. ಈಗ ವಿಜಯ್ ಹಾಗೂ ಸಂಗೀತಾ ಸಂಬಂಧ ವಿಚ್ಛೇದನಕ್ಕೆ ಬಂದು ನಿಂತಿದೆ.
View this post on Instagram
View this post on Instagram
View this post on Instagram
ಬೇರೆ ಆಗುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಸಂಗೀತಾ ಅವರೇ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ವಿಜಯ್‌ಗೆ ನಟಿಯ ಜೊತೆ ಅನೈತಿಕ ಸಂಬಂಧ ಇದೆ ಎಂದು ಅವರು ಆರೋಪಿಸಿದ್ದಾರೆ. ಇದು ತ್ರಿಶಾ ಇರಬಹುದು ಎಂದು ಎಲ್ಲರೂ ಊಹಿಸುತ್ತಾ ಇದ್ದಾರೆ. ಈ ಬಗ್ಗೆ ಸಾಕಷ್ಟು ಮೀಮ್ಗಳು ಹರಿದಾಡಿವೆ.
ಇದನ್ನೂ ಓದಿ: ಡೇಟಿಂಗ್ ವದಂತಿ; ಎಲ್ಲರಿಗೂ ಗೊಂದಲ ಮೂಡಿಸಿದ ತ್ರಿಶಾ ಕೃಷ್ಣನ್
ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಕೆಮಿಸ್ಟ್ರಿ ತೆರೆಮೇಲೆ ಗಮನ ಸೆಳೆದಿದೆ. ಇತ್ತೀಚಿನ ವರ್ಷಗಳಲ್ಲಿ ರಿಲೀಸ್ ಆದ ‘ಲಿಯೋ’ ಸಿನಿಮಾದಲ್ಲೂ ವಿಜಯ್ ಹಾಗೂ ತ್ರಿಶಾ ಒಟ್ಟಾಗಿ ನಟಿಸಿದ್ದಾರೆ. ಇವರ ಗೆಳೆತನವನ್ನು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ಈ ಕಾರಣದಿಂದಲೇ ಸಂಗೀತಾ ಆರೋಪದ ಬಳಿಕ ಎಲ್ಲರೂ ತ್ರಿಶಾ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




