ನನ್ನ ಹೆಸರೇ ಚಲವಾದಿ, ಪ್ರಿಯಾಂಕ್ ಖರ್ಗೆ ನನ್ನ ತಂಟೆಗೆ ಬಂದರೆ ಇನ್ನು ಸಮ್ಮನಿರಲ್ಲ: ಚಲವಾದಿ ನಾರಾಯಣಸ್ವಾಮಿ

ನನ್ನ ಹೆಸರೇ ಚಲವಾದಿ, ಪ್ರಿಯಾಂಕ್ ಖರ್ಗೆ ನನ್ನ ತಂಟೆಗೆ ಬಂದರೆ ಇನ್ನು ಸಮ್ಮನಿರಲ್ಲ: ಚಲವಾದಿ ನಾರಾಯಣಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 02, 2025 | 5:34 PM

ದಲಿತ ಸಮುದಾಯಕ್ಕಾಗಿ ಪ್ರಿಯಾಂಕ್ ಖರ್ಗೆ ಯಾವ ಹೋರಾಟ ಮಾಡಿದ್ದಾರೆ ಅಂತ ಹೇಳಲಿ, ಅದರೆ ನಾವಾದರೋ ಹೋರಾಟ ಮಾಡಿಕೊಂಡೇ ಬಂದವರು, ಹೋರಾಟವೆ ನಮ್ಮ ಬದುಕು, ಮೊದಲು ನಾನು ಕಾಂಗ್ರೆಸ್ ನಲ್ಲೇ ಇದ್ದ ಕಾರಣ ಪ್ರಿಯಾಂಕ್ ಏನು ಮಾಡಿದ್ದಾರೆ ಏನಿಲ್ಲ ಅಂತ ಚೆನ್ನಾಗಿ ಗೊತ್ತು, ಅವರು ನನ್ನ ಬಗ್ಗೆ ಮಾತಾಡುವುದನ್ನು ನಿಲ್ಲಿಸದಿದ್ದರೆ ಇನ್ನು ಸುಮ್ಮನಿರಲ್ಲ ಎಂದು ನಾರಾಯಣಸ್ವಾಮಿ ಎಚ್ಚರಿಸಿದರು.

ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರದ ಉತ್ಕರ್ಷ ಹೆಚ್ಚುತ್ತಿದೆ. ದಲಿತ ಸಮುದಾಯದ ಪ್ರತಿನಿಧಿಯಾಗಿದ್ದರೂ ಸಮಾಜಕ್ಕೆ ಖರ್ಗೆ ಕೊಡುಗೆ ಏನೂ ಇಲ್ಲ, ದಲಿತರ ಸಮಾಧಿಗಳ ಮೇಲೆ ಅವರು ತಮ್ಮ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ, ತನ್ನನ್ನು ಕೆಣಕಬೇಡವೆಂದು ಹೇಳಿದ್ದರೂ ಪದೇಪದೆ ನನ್ನ ತಂಟೆಗೆ ಬರುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ, ವೈಯಕ್ತಿಕ ವಿಚಾರಗಳನ್ನು ಕೆದಕಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೆ, ಅದರೆ ಇನ್ನು ಸುಮ್ಮನಿರಲ್ಲ, ಯಾಕೆಂದರೆ ಸಮಾಜಕ್ಕೆ ತಾನು ಉತ್ತರ ನೀಡಬೇಕಿದೆ ಎಂದು ನಾರಾಯಣಸ್ವಾಮಿ ಹೇಳಿದರು. ದಲಿತರ ಉದ್ಧಾರಕನಂತೆ ಮಾತಾಡುವ ಅವರು ಮಾತ್ರ ಮೂರು ಬಾರಿ ಗೆದ್ದು ಪ್ರತಿಸಲ ಮಂತ್ರಿಯಾಗಿದ್ದಾರೆ, ಮೂರು ಸಲ ಗೆದ್ದ ದಲಿತ ಶಾಸಕರು ಬೇಕಾದಷ್ಟಿದ್ದಾರೆ, ಅವರ್ಯಾಕೆ ಒಮ್ಮೆಯೂ ಸಚಿವ ಸ್ಥಾನ ಗಿಟ್ಟಿಸಿಲ್ಲ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಚಿನ್ ಪ್ರಕರಣದಲ್ಲಿ ಅಂತರರಾಜ್ಯ ಸುಪಾರಿ ಹಂತಕರ ಅಂಶ ಬೆಳಕಿಗೆ, ತನಿಖೆ ಸಿಬಿಐನಿಂದ ಆಗಬೇಕು: ನಾರಾಯಣಸ್ವಾಮಿ