ನಾನು ಕರ್ನಾಟಕವನ್ನು ಕೇಂದ್ರದಲ್ಲಿ ಪ್ರತಿನಿಧಿಸುವ ಬಿಜೆಪಿ ನಾಯಕ: ಪ್ರಲ್ಹಾದ್ ಜೋಶಿ
ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಿಗೆ ಬಿಜೆಪಿ ಅಧ್ಯಕ್ಷನನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶುರುವಾಗಿದೆ, ಬೂತ್ ಮಟ್ಟದ ಅಧ್ಯಕ್ಷರನ್ನು ಆರಿಸಲಾಗಿದೆ, ಮುಂದೆ ಮಂಡಲ ಮತ್ತು ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದೆ, ಅದಾದ ಮೇಲೆ ರಾಜ್ಯಗಳ ಘಟಕಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು, ಈ ಚುನಾವಣೆಗಳಿಗೆ ತನ್ನನ್ನು ಕೇರಳ ಮತ್ತು ಶಿವರಾಜ್ಸಿಂಗ್ ಚೌಹಾನ್ರನ್ನು ಕರ್ನಾಟಕದ ಉಸ್ತುವಾರಿಗಳಾಗಿ ನೇಮಿಸಲಾಗಿದೆ ಎಂದು ಜೋಶಿ ಹೇಳಿದರು.
ಮಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒಬ್ಬ ಅನುಭವಿ ಮತ್ತು ಚಾಣಾಕ್ಷ ರಾಜಕಾರಣಿ. ಇವತ್ತು ಮಂಗಳೂರಲ್ಲಿದ್ದ ಅವರು ಪತ್ರಕರ್ತರೊಬ್ಬರು ಕೇಳಿದ ಇಕ್ಕಟ್ಟಿನ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿ ಚಾಣಕ್ಷತೆಯನ್ನು ಪ್ರದರ್ಶಿಸಿದರು. ಪತ್ರಕರ್ತ ದಕ್ಷಿಣ ಕನ್ನಡ ಜಿಲ್ಲೆಯ ಭಾಷೆಯಲ್ಲಿ ಮಾತಾಡುತ್ತಾ, ರಾಜ್ಯ ಬಿಜೆಪಿ ಘಟಕ ಸರಿಯಿಲ್ಲ, ಒಳಜಗಳಗಳು ಜಾಸ್ತಿ, ನಾಯಕರ ನಡುವೆ ಹೊಂದಾಣಿಕೆ ಇಲ್ಲ, ಆದರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ನಾಯಕರು ಒಂದು ಕ್ಲೋಸ್ ನಿಟ್ ಯುನಿಟ್ ಹಾಗೆ ಕೆಲಸ ಮಾಡುತ್ತಾರೆ, ಅವರಲ್ಲಿ ಒಗ್ಗಟ್ಟಿದೆ ಮತ್ತು ಸಹಮತವಿದೆ, ನೀವು ರಾಜ್ಯ ಬಿಜೆಪಿಯ ಭಾಗವಾಗಿ ಗುರುತಿಸಿಕೊಳ್ಳುತ್ತೀರೋ ಅಥವಾ ಕೇಂದ್ರದ ನಾಯಕನೋ ಅಂತ ಕೇಳಿದಾಗ ಜೋಶಿ ವಿಚಲಿತರಾಗದೆ ನಗುತ್ತಾ, ತಾನು ಕೇಂದ್ರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಬಿಜೆಪಿ ನಾಯಕ ಎನ್ನುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ನಿರೀಕ್ಷೆ ನಮಗಿಲ್ಲ, ಹೋರಾಟ ಮುಂದುವರೆಸುತ್ತೇವೆ; ಪ್ರಲ್ಹಾದ್ ಜೋಶಿ
Latest Videos