ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ನಿರೀಕ್ಷೆ ನಮಗಿಲ್ಲ, ಹೋರಾಟ ಮುಂದುವರೆಸುತ್ತೇವೆ; ಪ್ರಲ್ಹಾದ್ ಜೋಶಿ
ಈಗ ಪ್ರಿಯಾಂಕ್ ಖರ್ಗೆಯವರ ತಂದೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಏನೇನೋ ಮಾತನಾಡ್ತಾರೆ. ಆದರೆ, ಖರ್ಗೆ ಅವರ ಹಿಂದಿನ ರಾಜಕಾರಣದಲ್ಲಿ ಈ ರೀತಿ ಇರಲಿಲ್ಲ. ಪ್ರಿಯಾಂಕ್ ಖರ್ಗೆ ಈಗಲೇ ದುರಹಂಕಾರದಿಂದ ವರ್ತಿಸುತ್ತಾ ಇದ್ದಾರೆ. ಇದರ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದೆ. ನಾವು ಎಲ್ಲರೂ ಜೊತೆಯಾಗಿಯೇ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರ ವಿರುದ್ಧ ಹಲವು ರೀತಿಯ ಗಂಭೀರ ಆರೋಪಗಳಿವೆ. ಈಶ್ವರಪ್ಪನವರ ಪ್ರಕರಣ ಹಾಗೂ ಯಡಿಯೂರಪ್ಪನವರ ಪ್ರಕರಣದಲ್ಲಿ ಆಡಿದ ಮಾತುಗಳು ಅವರಿಗೆ ನೆನಪಿಲ್ಲ. ಮಲ್ಲಿಕಾರ್ಜುನ ಖರ್ಗೆಯವರ ಸುಪುತ್ರ ಪ್ರಿಯಾಂಕ್ ಖರ್ಗೆ ಸಾರ್ವಜನಿಕ ಬದುಕಿನ ಎಲ್ಲಾ ಮಟ್ಟವನ್ನು ಮೀರಿದವರು. ಎಷ್ಟು ಕೆಳಗಿಳಿಯಲು ಬೇಕಾದರೂ ಅವರು ಸಿದ್ಧರಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಮಗ ರಾಜೀನಾಮೆ ಕೊಡುತ್ತಾರೆ ಎಂಬ ನಿರೀಕ್ಷೆ ನಮಗಿಲ್ಲ. ಆದರೆ, ನಾವು ಜನರಲ್ಲಿ ಜಾಗೃತಿ ಮೂಡಿಸಲು ಹೋರಾಟ ಮುಂದುವರಿಸುತ್ತೇವೆ ಎಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಚಂದ್ರಶೇಖರ್ ಆತ್ಮಹತ್ಯೆ ಕಾರಣದಿಂದ ವಾಲ್ಮೀಕಿ ಹಗರಣ ಹೊರಬಂತು. ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ರುದ್ರಣ್ಣ ಅತ್ಮಹತ್ಯೆ ಮಾಡಿಕೊಂಡರು. ಇಂಥ ಹಲವು ಆತ್ಮಹತ್ಯೆಗಳು ಇಲ್ಲಿ ನಡೀತಾನೆ ಇದೆ. ಸಿದ್ಧಲಿಂಗ ಸ್ವಾಮೀಜಿ ಹಾಗೂ ಹಲವರ ಕೊಲೆಗೆ ಸಂಚು ರೂಪಿಸಿದ ಬಗ್ಗೆ ಡೆತ್ ನೋಟ್ ನಲ್ಲಿ ಇದೆ ಎಂದಿದ್ದಾರೆ.
ಇದನ್ನೂ ಓದಿ: ಈಶ್ವರಪ್ಪ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದನ್ನೇ ಈಗ ನಾವು ಅವರಿಗೆ ಕೇಳುತ್ತಿದ್ದೇವೆ: ಅರ್ ಅಶೋಕ
ಈಗ ಪ್ರಿಯಾಂಕ್ ಖರ್ಗೆಯವರ ತಂದೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಏನೇನೋ ಮಾತನಾಡ್ತಾರೆ. ಆದರೆ, ಖರ್ಗೆ ಅವರ ಹಿಂದಿನ ರಾಜಕಾರಣದಲ್ಲಿ ಈ ರೀತಿ ಇರಲಿಲ್ಲ. ಪ್ರಿಯಾಂಕ್ ಖರ್ಗೆ ಈಗಲೇ ದುರಹಂಕಾರದಿಂದ ವರ್ತಿಸುತ್ತಾ ಇದ್ದಾರೆ. ಇದರ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದೆ. ನಾವು ಎಲ್ಲರೂ ಜೊತೆಯಾಗಿಯೇ ಹೋರಾಟ ಮಾಡುತ್ತೇವೆ ಎಂದು ಪ್ರಲ್ಹಾದ್ ಜೋಶಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ, ರಾಜೀನಾಮೆ ಯಾಕೆ ಕೊಡಬೇಕು: ಸಿಎಂ ಪ್ರಶ್ನೆ
ನಾನು ಕರ್ನಾಟಕ ರಾಜ್ಯವನ್ನು ಕೇಂದ್ರದಲ್ಲಿ ಪ್ರತಿನಿಧಿಸುತ್ತಿರುವವನು. ಕರ್ನಾಟಕದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆ ಅಂತ ನಾನು ಹೇಳುವುದಿಲ್ಲ. ಇಡೀ ದೇಶಾದ್ಯಂತ ಮಂಡಲ, ಬೂತ್, ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ, ರಾಷ್ಟ್ರಾಧ್ಯಕ್ಷ ಬದಲಾವಣೆ ನಡೆಯುತ್ತಿದೆ. ಎಲ್ಲಾ ಕಡೆಯಲ್ಲೂ ಬದಲಾವಣೆಗಳ ತಯಾರಿ ಆಗುತ್ತಿದೆ. ಅದರಲ್ಲಿ ಇದ್ದವರೇ ಮತ್ತೊಮ್ಮೆ ಆಯ್ಕೆ ಆಗಬಹುದು ಅಥವಾ ಬೇರೆಯವರು ಕೂಡ ಆಗಬಹುದು. ನಾಲ್ಕೈದು ತಿಂಗಳ ಹಿಂದೆ ಕೆಲವು ಕಡೆ ರಾಜ್ಯಾಧ್ಯಕ್ಷರ ಆಯ್ಕೆ ಆಗಿದೆ. ಅಲ್ಲೂ ಮತ್ತೆ ಈಗ ಬದಲಾವಣೆಯಾಗುತ್ತಿದೆ. ಅಲ್ಲಿಯೂ ಅವರು ಮತ್ತೆ ಆಯ್ಕೆ ಆಗಬಹುದು. ಸದ್ಯಕ್ಕೆ ಬೂತ್ ಅಧ್ಯಕ್ಷರ ಚುನಾವಣೆ ಆಗಿದೆ. ಇನ್ನು ಮಂಡಲಾಧ್ಯಕ್ಷರ ಚುನಾವಣೆ ಆಗಲಿದೆ ಎಂದು ಮಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ