AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಮಂಟಪದಲ್ಲೂ ಭಾರತದ ಟಿ20 ಕ್ರಿಕೆಟ್ ಗೆಲುವಿನ ಸಂಭ್ರಮ

ಮದುವೆಯ ಮಂಟಪದಲ್ಲಿ ಸೇರಿದ್ದ ಜನರು ಭಾರತದ ಟಿ20 ಕ್ರಿಕೆಟ್ ಮ್ಯಾಚ್ ಗೆಲುವನ್ನು ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಮದುಮಗ ಒಂದು ಪ್ಲಾನ್ ಮಾಡಿದ್ದರು. ಉತ್ತರಕಾಶಿಯ ವರ ತನ್ನ ವಿವಾಹದ ಸ್ಥಳವನ್ನು ಭಾರತದ T20 ಗೆಲುವಿನ ಸಂಭ್ರಮವನ್ನಾಗಿ ಪರಿವರ್ತಿಸಿದ್ದಾರೆ. ವಿವಾಹಗಳಲ್ಲಿ ಸಾಮಾನ್ಯವಾಗಿ ಸಾಂಪ್ರದಾಯಿಕ ಆಚರಣೆಗಳು, ಕುಟುಂಬದ ಕೂಟಗಳು ಮತ್ತು ಹಬ್ಬದ ಊಟ ಫೇಮಸ್ ಆಗಿರುತ್ತದೆ. ಆದರೆ, ಉತ್ತರಕಾಶಿ ಜಿಲ್ಲೆಯ ದುಂಡಾ ಬ್ಲಾಕ್‌ನ ಮಂಡಿಯಾಸರಿ ಗ್ರಾಮದಲ್ಲಿ ನಡೆದ ಮದುವೆ ಕ್ರಿಕೆಟ್, ದೇಶಭಕ್ತಿಯ ವಿಶಿಷ್ಟ ಮಿಶ್ರಣವಾಗಿತ್ತು.

ಮದುವೆ ಮಂಟಪದಲ್ಲೂ ಭಾರತದ ಟಿ20 ಕ್ರಿಕೆಟ್ ಗೆಲುವಿನ ಸಂಭ್ರಮ
Wedding
ಸುಷ್ಮಾ ಚಕ್ರೆ
|

Updated on: Mar 10, 2026 | 5:24 PM

Share

ಉತ್ತರಕಾಶಿ, ಮಾರ್ಚ್ 10: ಉತ್ತರಕಾಶಿಯ ಮಂಡಿಯಾಸರಿ ಗ್ರಾಮದಲ್ಲಿ ನಡೆದ ಮದುವೆಯು ತನ್ನ ವಿಶೇಷತೆಗಳಿಂದ ಗಮನಸೆಳೆಯಿತು. ಮದುವೆಗೆ (Wedding) ಬಂದಿದ್ದ ಅತಿಥಿಗಳು ಮಂಟಪದಲ್ಲೇ ನ್ಯೂಜಿಲೆಂಡ್ ವಿರುದ್ಧ ಭಾರತದ T20 ಫೈನಲ್ ವಿಜಯವನ್ನು ಆಚರಿಸಿದರು. ಈ ಸಮಾರಂಭವು ಸಂತೋಷ, ದೇಶಭಕ್ತಿ ಮತ್ತು ಸಾಮಾಜಿಕ ಬದಲಾವಣೆಯನ್ನು ಪ್ರತಿಬಿಂಬಿಸಿತು. ಮದುವೆಗೆ ಬಂದಿದ್ದ ಅತಿಥಿಗಳು, ಕುಟುಂಬಸ್ಥರು ಮದುವೆಯನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಕ್ರಿಕೆಟ್ ಪಂದ್ಯವನ್ನೂ ಎಂಜಾಯ್ ಮಾಡಿದರು.

ಭಾನುವಾರ ನಡೆದ ಅಂಕಿತ್ ರಾವತ್ ಅವರ ವಿವಾಹವು ಕೇವಲ ಎರಡು ಕುಟುಂಬಗಳ ನಡುವಿನ ಸಂಭ್ರಮಕ್ಕಿಂತ ಹೆಚ್ಚಾಗಿತ್ತು. ಇದು ನ್ಯೂಜಿಲೆಂಡ್ ವಿರುದ್ಧದ T20 ಫೈನಲ್‌ನಲ್ಲಿ ಭಾರತದ ಅದ್ಭುತ ವಿಜಯದ ಸಂಭ್ರಮವಾಗಿ ಬದಲಾಯಿತು. ಮದುಮಗ ಅಂಕಿತ್ ರಾವತ್ ಅವರ ವಿವಾಹದ ವಿಧಿವಿಧಾನಗಳ ಸಮಯದಲ್ಲಿಯೂ ಅತಿಥಿಗಳು ಅಲ್ಲಿದ್ದ ದೊಡ್ಡ ಸ್ಕ್ರೀನ್​ನಲ್ಲಿ ಪಂದ್ಯವನ್ನು ನೋಡಿ ಎಂಜಾಯ್ ಮಾಡುತ್ತಿದ್ದರು.

ಇದನ್ನೂ ಓದಿ: ಆಹ್ವಾನ ಇಲ್ಲದೇ ಮದುವೆ, ರಿಸೆಪ್ಷನ್ ಊಟಕ್ಕೆ ಹೋಗಿ ಸಿಕ್ಕಿಬಿದ್ದರೆ ಶಿಕ್ಷೆ ಏನು ಗೊತ್ತೇ? ಕೇಳಿದ್ರೆ ಶಾಕ್ ಆಗ್ತೀರಿ!

ಈ ರೋಮಾಂಚಕ ಆಟವನ್ನು ವೀಕ್ಷಿಸಲು ಅತಿಥಿಗಳು, ಗ್ರಾಮಸ್ಥರು ಮತ್ತು ಕುಟುಂಬದ ಸದಸ್ಯರು ಸುತ್ತಲೂ ಸೇರಿದ್ದರು. ಕ್ರಿಕೆಟ್ ಪಂದ್ಯವು ಅಂತಿಮ ಹಂತ ತಲುಪುತ್ತಿದ್ದಂತೆ ಮದುವೆ ಮಂಟಪದಲ್ಲಿಯೂ ಉತ್ಸಾಹ ಹೆಚ್ಚಾಯಿತು. ಪಂದ್ಯದಲ್ಲಿ ಭಾರತ ಅಂತಿಮವಾಗಿ ಗೆಲುವು ಸಾಧಿಸಿದಾಗ, ಮದುವೆ ಮಂಟಪದಲ್ಲಿ ಸೇರಿದ್ದ ಜನರು ನೃತ್ಯ, ಹರ್ಷೋದ್ಗಾರ, ಮದುವೆ ಮತ್ತು ರಾಷ್ಟ್ರದ ವಿಜಯೋತ್ಸವ ಎರಡನ್ನೂ ಆಚರಿಸುವುದರೊಂದಿಗೆ ಮಂಟಪದಲ್ಲಿ ಸಂತೋಷ ಹೊರಚಿಮ್ಮಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಮೆಚ್ಚಿದ ತನಿಷಾ
‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಮೆಚ್ಚಿದ ತನಿಷಾ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ