ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ; ಸಾಕ್ಷಿ ನುಡಿಯುತ್ತಿದೆ ವೈರಲ್ ವಿಡಿಯೋ

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ; ಸಾಕ್ಷಿ ನುಡಿಯುತ್ತಿದೆ ವೈರಲ್ ವಿಡಿಯೋ

ಪೃಥ್ವಿಶಂಕರ
|

Updated on: Jan 02, 2025 | 8:28 PM

Rohit Sharma: ರತ ಮತ್ತು ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡದಿರುವ ಸಾಧ್ಯತೆ ಹೆಚ್ಚಾಗಿದೆ. ಅವರ ಕಳಪೆ ಫಾರ್ಮ್ ಮತ್ತು ಕೋಚ್ ಗೌತಮ್ ಗಂಭೀರ್ ಅವರ ಹೇಳಿಕೆಗಳು ಇದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಪೂರಕವಾಗಿ ಇಂದು ನಡೆದ ಅಭ್ಯಾಸ ಅವದಿಯಲ್ಲಿ ರೋಹಿತ್ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಿರ್ಣಾಯಕ ಮತ್ತು ಅಂತಿಮ ಪಂದ್ಯವು ಶುಕ್ರವಾರ, ಜನವರಿ 3 ರಿಂದ ಸಿಡ್ನಿಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಆಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ದೊಡ್ಡ ಕಾರಣ ಅವರ ಕಳಪೆ ಫಾರ್ಮ್. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಇದುವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಅವರು ಕೇವಲ 31 ರನ್ ಗಳಿಸಲು ಶಕ್ತರಾಗಿದ್ದು ಸ್ವತಃ ರೋಹಿತ್ ಅವರೇ ಈ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೆ ಪೂರಕವಾಗಿ ಗುರುವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ರೋಹಿತ್ ಆಡುವ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ಪ್ಲೇಯಿಂಗ್11 ಬಗ್ಗೆ ಇನ್ನೂ ನಿರ್ಧರಿಸಿಲ್ಲ ನಾಳೆಯ ಪಿಚ್ ನೋಡಿದ ನಂತರವೇ ಅದರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಇಲ್ಲಿ ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ ಯಾವುದೇ ಪಂದ್ಯಕ್ಕೆ ನಾಯಕನನ್ನು ಮೊದಲು ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಆದರೆ ಭಾರತ ತಂಡದ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿರುವಂತಿದೆ. ರೋಹಿತ್ ಸಿಡ್ನಿ ಟೆಸ್ಟ್ ಆಡುವ ಪ್ರಶ್ನೆಗೆ ಗಂಭೀರ್ ಮೌನವಾಗಿರುವುದು ಆಡುವ 11 ರಲ್ಲಿ ಭಾರತೀಯ ನಾಯಕನ ಸ್ಥಾನ ಖಚಿತವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಇದಲ್ಲದೆ ಇಂದು ಬಿಡುಗಡೆಯಾಗಿರುವ ವಿಡಿಯೋ ಕೂಡ ರೋಹಿತ್ ಕೊನೆಯ ಟೆಸ್ಟ್ ಪಂದ್ಯವನ್ನು ಆಡುತ್ತಿಲ್ಲ ಎಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ. ವಾಸ್ತವವಾಗಿ ಈ ವಿಡಿಯೋದಲ್ಲಿರುವ ಪ್ರಕಾರ, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಎಲ್ಲಾ ಆಟಗಾರರು ಅಭ್ಯಾಸ ಮಾಡುತ್ತಿದ್ದಾರೆ. ಇದೇ ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್ ಯುವ ಬ್ಯಾಟ್ಸ್‌ಮನ್ ಶುಬ್‌ಮಾನ್ ಗಿಲ್‌ನೊಂದಿಗೆ ಮಾತನಾಡಿ ಅವರ ಬೆನ್ನು ತಟ್ಟಿದ್ದಾರೆ.

ಇದಾದ ನಂತರ ಜಸ್ಪ್ರೀತ್ ಬುಮ್ರಾ ಕೂಡ ಗಿಲ್​ಗೆ ಹಸ್ತಲಾಘವ ಮಾಡಿದ್ದಾರೆ. ಈ ಇಡೀ ದೃಶ್ಯದಲ್ಲಿ ರೋಹಿತ್ ಶರ್ಮಾ ಎಲ್ಲಿಯೂ ಕಾಣಿಸುತ್ತಿಲ್ಲ. ಅಂದರೆ ರೋಹಿತ್ ಬದಲಿಗೆ ಬುಮ್ರಾಗೆ ತಂಡದ ನಾಯಕತ್ವ ಸಿಕ್ಕಿದ್ದೂ, ಕೊನೆಯ ಸರಣಿಗೆ ಆಡುವ ಅವಕಾಶ ಪಡೆದಿರುವ ಗಿಲ್ ಅವರನ್ನು ಬುಮ್ರಾ ಅಭಿನಂದಿಸಿದ್ದಾರೆ ಎಂಬುದನ್ನು ನಾವಿಲ್ಲ ಅರ್ಥಮಾಡಿಕೊಳ್ಳಬಹುದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ