ಎಸ್​ಎಂ ಕೃಷ್ಣ ಅವಧಿಯಲ್ಲಿ ದಿನವೊಂದರಲ್ಲಿ 300 ಐಟಿ ಕಂಪನಿ ನೋಂದಣಿಯಾಗಿತ್ತು: ಪರಮೇಶ್ವರ್ ಮೆಲುಕು

ಎಸ್​ಎಂ ಕೃಷ್ಣ ಅವಧಿಯಲ್ಲಿ ದಿನವೊಂದರಲ್ಲಿ 300 ಐಟಿ ಕಂಪನಿ ನೋಂದಣಿಯಾಗಿತ್ತು: ಪರಮೇಶ್ವರ್ ಮೆಲುಕು

Ganapathi Sharma
|

Updated on: Dec 10, 2024 | 2:37 PM

ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಸಿಎಂ ಎಸ್​ಎಂ ಕೃಷ್ಣ ಬೆಂಗಳೂರಿಗೆ ನೀಡಿದ ಕೊಡುಗೆ ಮತ್ತು ಆಡಳಿತಾತ್ಮಕವಾಗಿ ಮಾಡಿದ ಸಾಧನೆಗಳ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬೆಳಗಾವಿಯ ಸುವರ್ಣ ವಿಧಾನಸೌಧದ ಕಲಾಪದಲ್ಲಿ ಪ್ರಸ್ತಾಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಪರಮೇಶ್ವರ್ ಮಾತಿನ ವಿಡಿಯೋ ಇಲ್ಲಿದೆ.

ಬೆಂಗಳೂರು, ಡಿಸೆಂಬರ್ 10: ಎಸ್​ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿಯೇ ಆಯಿತು. ಆ ಕಾಲದಲ್ಲಿ ಬೆಂಗಳೂರಿನಲ್ಲಿ ದಿನವೊಂದರಲ್ಲಿ 200-300 ಐಟಿ ಕಂಪನಿಗಳು ನೋಂದಣಿಯಾಗಿದ್ದೂ ಇದೆ ಎಂದು ಗೃಹ ಸಚಿವ ಡಾ. ಪರಮೇಶ್ವರ ನೆನಪಿಸಿಕೊಂಡರು. ಮಂಗಳವಾರ ನಸುಕಿನಲ್ಲಿ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್​​ಎಂ ಕೃಷ್ಣಗೆ ಶ್ರದ್ಧಾಂಜಲಿ ಸಲ್ಲಿಸಿ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವರು ಎಸ್​ಎಂ ಕೃಷ್ಣ ಎಂದರು.

ಎಸ್​ಎಂ ಕೃಷ್ಣರ ರಾಜಕೀಯ ಸಾಧನೆಗಳು, ಆಡಳಿತಾತ್ಮಕ ಸಾಧನೆಗಳು ಹಾಗೂ ಬೆಂಗಳೂರಿಗೆ ಅವರು ನೀಡಿರುವ ಕೊಡುಗೆಗಳ ಬಗ್ಗೆ ಪರಮೇಶ್ವರ್ ಬೆಳಗಾವಿ ಅಧಿವೇಶನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟರು. ವಿಡಿಯೋ ಇಲ್ಲಿದೆ.

ಇದನ್ನೂ ಓದಿ: ಎಸ್​ಎಂ ಕೃಷ್ಣ ಸುದೀರ್ಘ ರಾಜಕೀಯ ಜೀವನದ ಹಿನ್ನೋಟ

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ