ಎಸ್​ಎಂ ಕೃಷ್ಣ ಅಂತ್ಯಕ್ರಿಯೆ ವಿಧಿ ವಿಧಾನ ಹೇಗಿರುತ್ತೆ? ಯಾರು ನೆರವೇರಿಸಲಿದ್ದಾರೆ? ಇಲ್ಲಿದೆ ವಿವರ

ಎಸ್​ಎಂ ಕೃಷ್ಣ ಅಂತ್ಯಕ್ರಿಯೆ ವಿಧಿ ವಿಧಾನ ಹೇಗಿರುತ್ತೆ? ಯಾರು ನೆರವೇರಿಸಲಿದ್ದಾರೆ? ಇಲ್ಲಿದೆ ವಿವರ

ಪ್ರಶಾಂತ್​ ಬಿ.
| Updated By: ರಮೇಶ್ ಬಿ. ಜವಳಗೇರಾ

Updated on:Dec 10, 2024 | 3:23 PM

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರು ಇಂದು(ಡಿಸೆಂಬರ್ 10) ಬೆಂಗಳೂರಿನಲ್ಲಿ ನಿಧನರಾಗಿದ್ದು, ಇವರ ಅಂತ್ಯಕ್ರಿಯೆ ನಾಳೆ (ಡಿಸೆಂಬರ್ 11) ಮಧ್ಯಾಹ್ನ 3 ಗಮಟೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ನೆರವೇರಲಿದೆ. ವೈದಿಕ ಪುರೋಹಿತರಾದ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಅಂತಿಮ‌ ವಿಧಿವಿಧಾನಗಳು ನಡೆಯಲಿವೆ. ಹಾಗಾದ್ರೆ, ವಿಧಿವಿಧಾನ ಹೇಗರಲಿದೆ ಎನ್ನುವುದನ್ನು ತಿಳಿದುಕಳ್ಳಿ

ಮಂಡ್ಯ, (ಡಿಸೆಂಬರ್ 10): ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರು ಇಂದು(ಡಿಸೆಂಬರ್ 10) ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರವನ್ನ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆ ನಾಳೆ (ಡಿಸೆಂಬರ್ 11) ಹುಟ್ಟೂರಾದ ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಎಲ್ಲಾ ರೀತಿ ಸಿದ್ಧತೆಗಳು ನಡೆದಿವೆ. ಖುದ್ದು ಡಿಕೆ ಶಿವಕುಮಾರ್ ತೆರಳಿ ಅಂತ್ಯಕ್ರಿಯೆ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. ಇನ್ನು ಎಸ್​ಎಂ ಕೃಷ್ಣ ಅವರ ಅಂತ್ಯಕ್ರಿಯೆಗೂ ಮೊದಲು ವೈದಿಕ ಪುರೋಹಿತರಾದ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ‌ಪೂಜೆ-ಪುನಸ್ಕಾರಗಳು, ಅಂತಿಮ‌ ವಿಧಿವಿಧಾನಗಳು ನಡೆಯಲಿವೆ.

Published on: Dec 10, 2024 03:22 PM