- Kannada News Photo gallery Aero India 2021 ಲಘು ಯುದ್ಧ ವಿಮಾನ ತೇಜಸ್ ಬೆನ್ನೇರಿದ ಸಂಸದ ತೇಜಸ್ವಿ ಸೂರ್ಯ.. Photos
Aero India 2021 ಲಘು ಯುದ್ಧ ವಿಮಾನ ತೇಜಸ್ ಬೆನ್ನೇರಿದ ಸಂಸದ ತೇಜಸ್ವಿ ಸೂರ್ಯ.. Photos
ಏರೋ ಇಂಡಿಯಾ ಶೋನಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಲಘು ಯುದ್ದ ವಿಮಾನ ತೇಜಸ್ ಏರಿ ಹಾರಾಟ ನಡೆಸಿದರು. 1980 ಕಿ.ಮೀ ಪ್ರತಿ ಗಂಟೆಗೆ ಚಲಿಸುವ ಸಾಮರ್ಥ್ಯ ಹೊಂದಿರುವ ತೇಜಸ್ ಯುದ್ಧ ವಿಮಾನ, 13,500 ಕೆಜಿ ಹೊತ್ತೊಯ್ಯಬಲ್ಲ ಸಾಮರ್ಥ ಹೊಂದಿದೆ.
Updated on:Feb 04, 2021 | 12:50 PM

ಬೆಂಗಳೂರಿನಲ್ಲಿ ನಡೆಯುತ್ತಿರು ಏರೋ ಇಂಡಿಯಾ ಶೋನಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು

ಏರೋ ಇಂಡಿಯಾ ಶೋನಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಲಘು ಯುದ್ದ ವಿಮಾನ ತೇಜಸ್ ಏರಿ ಹಾರಾಟ ನಡೆಸಿದರು.

ಸಂಸದರಾಗಿ ಆಯ್ಕೆಯಾಗುವ ಮುನ್ನ ತೇಜಸ್ವಿ ಸೂರ್ಯ ಆರ್ಎಸ್ಎಸ್ನ ಸ್ವಯಂ ಸೇವಕ ಹಾಗೂ ಹೈಕೋರ್ಟ್ನಲ್ಲಿ ಲಾಯರ್ ಆಗಿ ಕಾರ್ಯನಿರ್ವಹಿಸಿದ್ದರು.

ಸಂಸತ್ ಚುನಾವಣೆಯಲ್ಲಿ ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತೇಜಸ್ವಿ ಸೂರ್ಯ, ಎದುರಿಸಿದ ಮೊದಲ ಚುನಾವಣೆಯಲ್ಲೇ ಜಯ ಗಳಿಸಿದರು.

ಸಂಸತ್ ಸದಸ್ಯನಾಗಿ ಆಯ್ಕೆಯಾದ ಅತೀ ಕಿರಿಯ ಸಂಸದ ಎಂಬ ಕೀರ್ತಿ ತೇಜಸ್ವಿ ಸೂರ್ಯ ಅವರಿಗೆ ಸಲ್ಲುತ್ತದೆ.

ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆ ಬರೋಬ್ಬರಿ 48,000 ಕೋಟಿ ಮೊತ್ತದ ತೇಜಸ್ ಯುದ್ಧ ವಿಮಾನ ಖರೀದಿಗೆ ಹೆಚ್ಎಎಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಇದರಲ್ಲಿ 73 LCA ತೇಜಸ್ MK -1A ಹಾಗೂ 10 LCA ತೇಜಸ್ MK-1 ಯುದ್ಧ ವಿಮಾನಗಳಿವೆ

1980 ಕಿ.ಮೀ ಪ್ರತಿ ಗಂಟೆಗೆ ಚಲಿಸುವ ಸಾಮರ್ಥ್ಯ ಹೊಂದಿರುವ ತೇಜಸ್ ಯುದ್ಧ ವಿಮಾನ, 13,500 ಕೆಜಿ ಹೊತ್ತೊಯ್ಯಬಲ್ಲ ಸಾಮರ್ಥ ಹೊಂದಿದೆ.
Published On - 12:37 pm, Thu, 4 February 21
























