ಹೈದರಾಬಾದ್ ಗ್ಯಾಂಗ್‌ ರೇಪ್‌: ಕಾಮುಕರ ಗುರುತು ಪತ್ತೆ, ಮೂವರಿಗಾಗಿ ಪೊಲೀಸ್ ತಂಡಗಳಿಂದ ಶೋಧ

Hyderabad Gang Rape | ಹೈದರಾಬಾದ್​ನಲ್ಲಿ ದಿಶಾ ಗ್ಯಾಂಗ್​ರೇಪ್, ಎನ್​ಕೌಂಟರ್ ಪ್ರಕರಣ ಮರೆಯೋ ಮುನ್ನವೇ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆದಿರೋದು ಭಾಗ್ಯ ನಗರಿ ಜನರಿಗೆ ಶಾಕ್ ನೀಡಿದೆ. ಇದರ ನಡುವೆ ಪೊಲೀಸರು ಕೃತ್ಯ ಎಸಗಿದ ಕಾಮುಕರನ್ನ ಗುರುತಿಸಿದ್ದು, ಕಾರ್ಯಾಚರಣೆ ಕೈಗೊಂಡಿದ್ದಾರೆ. ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಹೈದರಾಬಾದ್ ಗ್ಯಾಂಗ್‌ ರೇಪ್‌: ಕಾಮುಕರ ಗುರುತು ಪತ್ತೆ, ಮೂವರಿಗಾಗಿ ಪೊಲೀಸ್ ತಂಡಗಳಿಂದ ಶೋಧ
ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ
Follow us
ಆಯೇಷಾ ಬಾನು
|

Updated on:Feb 12, 2021 | 7:18 AM

ಹೈದರಾಬಾದ್​ನಲ್ಲಿ ನಡೆದಿರೋ ಗ್ಯಾಂಗ್​ರೇಪ್​.. ಸುಮಾರು ಒಂದೂ ಕಾಲು ವರ್ಷದ ಹಿಂದೆ ನಡೆದಿದ್ದ ದಿಶಾ ಅತ್ಯಾಚಾರ ಪ್ರಕರಣವನ್ನ ಮತ್ತೆ ನೆನಪಿಸಿದೆ. ಈ ಮೂಲಕ ಹೈದರಾಬಾದ್​​ನಲ್ಲಿ ಮತ್ತೊಮ್ಮೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಮನೆಗೆ ಹೋಗಲು ಆಟೋ ಹತ್ತಿದ ಯುವತಿಯ ಮೇಲೆ ಡ್ರೈವರ್ ಕಣ್ಣು ಬಿದ್ದಿದೆ. ಯುವತಿ ಇಳಿಯಬೇಕಾದ ಸ್ಥಳದ ಬಳಿ ಗಾಡಿ ನಿಲ್ಲಿಸಲು ಹೇಳಿದ್ರೂ ಡ್ರೈವರ್ ಆಟೋ ನಿಲ್ಲಿಸದೇ ವೇಗವಾಗಿ ಘಟ್ಕೇಸರ್ ಕಡೆ ಹೊರಟಿದ್ದ. ತಕ್ಷಣ ಎಚ್ಚೆತ್ತ ಯುವತಿ ತನ್ನ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ತಕ್ಷಣ ಅವರ ತಾಯಿ ಸಂಬಂಧಿಯ ನೆರವಿನಿಂದ 100ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ರು. ಅಷ್ಟರಲ್ಲಾಗಲೇ ಆಟೋ ಡ್ರೈವರ್ ತನ್ನ ಸ್ನೇಹಿತರಿಗೆ ಕರೆ ಮಾಡಿ, ಬೇರೊಂದು ವ್ಯಾನ್​ ಕರೆಸಿಕೊಂಡು ಯುವತಿಯ ಮೇಲೆ ಹಲ್ಲೆ ಮಾಡಿ ವ್ಯಾನ್​ಗೆ ಶಿಫ್ಟ್ ಮಾಡಿದ್ದ. ಬುಧವಾರ ಸಂಜೆ 6.15 ರಿಂದ 6.30ರ ಸಮಯದಲ್ಲಿ ಈ ಎಲ್ಲ ಘಟನೆಗಳು ನಡೆದು ಹೋಗಿದ್ವು.

ಕರೆ ಬಂದ ತಕ್ಷಣ ಫುಲ್ ಅಲರ್ಟ್ ಆಗಿದ್ರು ಪೊಲೀಸರು ಪೊಲೀಸರಿಗೆ ಯುವತಿಯ ಕುರಿತು ಮಾಹಿತಿ ಸಿಗುತ್ತಿದ್ದಂತೆ ಫುಲ್​ ಅಲರ್ಟ್ ಆಗಿದ್ರು. ಅಲ್ದೇ, ಘಟ್ಕೇಸರ್ ಠಾಣೆಯ ಪೊಲೀಸರು ಯುವತಿಯ ಮೊಬೈಲ್ ಜಾಡು ಹಿಡಿದು ಪತ್ತೆಗೆ ಮುಂದಾದ್ರು. ಪೊಲೀಸರ ಸೈರನ್ ಸದ್ದು ಕೇಳಿಸ್ತಿದ್ದಂತೆ ಕಾಮುಕರು, ಯುವತಿಯನ್ನ ಘಟ್ಕೇಸರ್​ ರಿಂಗ್​ ರೋಡ್​ನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ, ಮಣ್ಣಿನ ಗುಡ್ಡೆಯ ಮೇಲೆ ಎಸೆದು ಪರಾರಿಯಾಗಿದ್ದಾರೆ. ಹಾಗೂ ಹೀಗೂ ಮಾಡಿ ಪೊಲೀಸರು 7.30ರ ಸುಮಾರಿಗೆ ಯುವತಿಯನ್ನ ಪತ್ತೆ ಹಚ್ಚಿ ಹತ್ತಿರದಲ್ಲೇ ಇದ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು. ಬುಧವಾರ ಅಲ್ಲಿಯೇ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಸಿಕಂದರಾಬಾದ್​ನಲ್ಲಿರೋ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಡಾಕ್ಟರ್ ಸೌಜನ್ಯ ರೆಡ್ಡಿ ಯುವತಿಯ ಮೇಲೆ ಅತ್ಯಾಚಾರ ಆಗಿದೆ ಅನ್ನೋದನ್ನ ದೃಢಪಡಿಸಿದ್ದಾರೆ. ಅಲ್ದೆ, ಯುವತಿಯ ಪರಿಸ್ಥಿತಿಯನ್ನ ವಿವರಿಸಿದ್ದಾರೆ.

ಯುವತಿಗೆ ಪ್ರಜ್ಞೆ ಇಲ್ಲ. ಆಕೆ ಭಯದಿಂದ ಕೂಡಿದ ಅರೆಪ್ರಜ್ಞಾವಸ್ಥೆಯಲ್ಲಿರುವಾಗ ನಾವು ಮಾಹಿತಿ ಪಡೆಯಬಾರದು. ಮೊದಲು ಚಿಕಿತ್ಸೆ ನೀಡಬೇಕು. ನಾವು ಚಿಕಿತ್ಸೆ ಶುರು ಮಾಡಿದೆವು. ನಂತರ ಪೊಲೀಸ್ ಇಲಾಖೆಯವರು ನೀಡಿದ ಮಾಹಿತಿಯನ್ನ ಆಧರಿಸಿ ಚಿಕಿತ್ಸೆ ಕೊಡುತ್ತಿದ್ದೇವೆ. ಪ್ರಾಥಮಿಕ ಪರೀಕ್ಷೆಯಲ್ಲಿ ಲೈಂಗಿಕ ಕಿರುಕುಳ ನೀಡಿರೋದು ದೃಢವಾಗಿದೆ ಎಂದು ಡಾಕ್ಟರ್ ಸೌಜನ್ಯ ರೆಡ್ಡಿ ತಿಳಿಸಿದ್ದಾರೆ.

ಸದ್ಯಕ್ಕೆ ಯುವತಿ ಮೇಲೆ ಅತ್ಯಾಚಾರ ನಡೆದಿರೋದು ವೈದ್ಯರ ಹೇಳಿಕೆಯಿಂದ ದೃಢವಾಗಿದೆ. ಕೋಮಾಸ್ಥಿತಿಯಲ್ಲಿರೋ ಯುವತಿ ಎಚ್ಚರವಾದ್ಮೇಲೆಯೇ ಘಟನೆಯ ಸಂಪೂರ್ಣ ಮಾಹಿತಿ ಸಿಗಲಿದೆ. ಪೊಲೀಸರು ಕೃತ್ಯ ಎಸಗಿದ ಆರೋಪಿಗಳನ್ನ ಪತ್ತೆ ಹಚ್ಚಿದ್ದು, ಪ್ರಮುಖ ಆರೋಪಿಯನ್ನ ಈಗ ರಾಜು ಅಂತಾ ಗುರುತಿಸಿದ್ದಾರೆ. ಶೀಘ್ರದಲ್ಲೇ ಆರೋಪಿಗಳ ಹೆಡೆಮುರಿ ಕಟ್ತೀವಿ ಅಂತಾ ಹೇಳಿದ್ದಾರೆ.

ಇದನ್ನೋ ಓದಿ: ಆಟೋ ಹತ್ತಿದ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌.. ಕೃತ್ಯ ಎಸಗಿ ರಸ್ತೆ ಬದಿ ಬೆತ್ತಲೆ ಬಿಸಾಡಿ ಹೋದ ಕೀಚಕರು

Published On - 7:13 am, Fri, 12 February 21