Miss Universe 2021 Winner: ಕೊವಿಡ್​ ಸಂಬಂಧಿತ ಪ್ರಶ್ನೆಗೆ ಉತ್ತರಿಸಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಆ್ಯಂಡ್ರಿಯಾ ಮೆಜಾ

Andrea Meza: ಮಿಸ್​ ಯೂನಿವರ್ಸ್​ ಸ್ಪರ್ಧೆಯ ಪ್ರಶ್ನೋತ್ತರ ಸುತ್ತಿನಲ್ಲಿ ಆ್ಯಂಡ್ರಿಯಾ ಮೆಜಾ ಅವರಿಗೆ ಕೊವಿಡ್​ ಸಂಬಂಧಿತ ಪ್ರಶ್ನೆ ಕೇಳಲಾಯಿತು. ‘ಒಂದು ವೇಳೆ ನೀವು ನಿಮ್ಮ ದೇಶದ ಲೀಡರ್​ ಆಗಿದ್ದರೆ, ಈ ಕೊವಿಡ್​ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ರಿ?’ ಎಂಬ ಪ್ರಶ್ನೆಗೆ ದಿಟ್ಟತನದಿಂದ ಆ್ಯಂಡ್ರಿಯಾ ಉತ್ತರಿಸಿದರು.

Miss Universe 2021 Winner: ಕೊವಿಡ್​ ಸಂಬಂಧಿತ ಪ್ರಶ್ನೆಗೆ ಉತ್ತರಿಸಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಆ್ಯಂಡ್ರಿಯಾ ಮೆಜಾ
ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಆ್ಯಂಡ್ರಿಯಾ ಮೆಜಾ
Follow us
ಮದನ್​ ಕುಮಾರ್​
|

Updated on: May 17, 2021 | 11:11 AM

ಮೆಕ್ಸಿಕೋದ ಸುಂದರಿ ಆ್ಯಂಡಿಯಾ ಮೆಜಾ ಅವರು 69ನೇ ಮಿಸ್​ ಯೂನಿವರ್ಸ್​ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿರುವ ಅವರು ಫ್ಯಾಷನ್​ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ಮಿಸ್​ ಯೂನಿವರ್ಸ್​ ಕಿರೀಟ ಪಡೆದ ಮೆಕ್ಸಿಕೋದ ಮೂರನೇ ಸುಂದರಿಯಾಗಿ ಆ್ಯಂಡಿಯಾ ಮೆಜಾ ಹೊರ ಹೊಮ್ಮಿದ್ದಾರೆ. ಅವರಿಗೆ ವಿಶ್ವಾದ್ಯಂತ ಕೋಟ್ಯಂತರ ಜನರಿಂದ ಅಭಿನಂದನೆಗಳು ಸಲ್ಲಿಕೆ ಆಗುತ್ತಿವೆ.

ಮಿಸ್​ ಯೂನಿವರ್ಸ್​ ಅಂತಿಮ ಸುತ್ತಿನ ಸ್ಪರ್ಧೆ ಮೇ 16ರಂದು ಫ್ಲೋರಿಡಾದಲ್ಲಿ ನೆರವೇರಿತು. ಬ್ರೆಜಿಲ್​ನ ಜೂಲಿಯಾ ಗಾಮಾ ಅವರು ಮೊದಲ ರನ್ನರ್​ ಅಪ್​ ಆಗಿ ಹೊರಹೊಮ್ಮಿದರು. ಪೆರುವಿನ ಜೆನಿಕ್​ ಮಸೆಟಾ ಅವರು ಎರಡನೇ ರನ್ನರ್​ ಅಪ್​ ಸ್ಥಾನ ಪಡೆದುಕೊಂಡರು. ಭಾರತದಿಂದ ಸ್ಪರ್ಧಿಸಿದ್ದ ಅಡ್ಲಿನ್​ ಕಾಸ್ಟಿಲಿನೋ ಮೂರನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಹಂತದವರೆಗೆ ಪೈಪೋಟಿ ನೀಡಿದ ಅಡ್ಲಿನ್​ ಕಾಸ್ಟಿಲಿನೋ ಅವರಿಗೂ ಅಭಿನಂದನೆ ಸಲ್ಲಿಸಲಾಗುತ್ತಿದೆ.

ಮಿಸ್​ ಯೂನಿವರ್ಸ್​ ಸ್ಪರ್ಧೆಯ ಪ್ರಶ್ನೋತ್ತರ ಸುತ್ತಿನಲ್ಲಿ ಆ್ಯಂಡ್ರಿಯಾ ಮೆಜಾ ಅವರಿಗೆ ಕೊವಿಡ್​ ಸಂಬಂಧಿತ ಪ್ರಶ್ನೆ ಕೇಳಲಾಯಿತು. ‘ಒಂದುವೇಳೆ ನೀವು ನಿಮ್ಮ ದೇಶದ ಲೀಡರ್​ ಆಗಿದ್ದರೆ, ಈ ಕೊವಿಡ್​ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ರಿ?’ ಎಂಬ ಪ್ರಶ್ನೆಗೆ ದಿಟ್ಟತನದಿಂದ ಆ್ಯಂಡ್ರಿಯಾ ಉತ್ತರಿಸಿದರು.

‘ಕೊವಿಡ್​ ನಿಯಂತ್ರಿಸಲು ನಿರ್ದಿಷ್ಟವಾದ ಕ್ರಮ ಯಾವುದೂ ಇಲ್ಲದ ಕಾರಣ, ಪರಿಸ್ಥಿತಿ ಕೈ ಮೀರುವ ಮುನ್ನವೇ ನಾನು ಲಾಕ್​ಡೌನ್​ ಮಾಡಿಸುತ್ತಿದ್ದೆ. ಯಾಕೆಂದರೆ ಈಗಾಗಲೇ ನಾವು ಅನೇಕ ಜೀವಗಳನ್ನು ಕಳೆದುಕೊಂಡಿದ್ದೇವೆ. ಅದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಜನರ ಕಾಳಜಿಯನ್ನು ನಾವು ಮಾಡಬೇಕು. ಪ್ರಾರಂಭದಲ್ಲಿಯೇ ಲಾಕ್​ಡೌನ್​ ಮಾಡುವ ಮೂಲಕ ನಾನು ಜನರ ರಕ್ಷಣೆ ಮಾಡುತ್ತಿದ್ದೆ’ ಎಂದು ಉತ್ತರಿಸಿದ ಆ್ಯಂಡ್ರಿಯಾ ಎಲ್ಲರ ಚಪ್ಪಾಳೆ ಪಡೆದುಕೊಂಡರು.

ಇದನ್ನೂ ಓದಿ:

Manya Singh ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿಗೆ Miss India 2020 ರನ್ನರ್​ ಅಪ್ ‘ಮಾನ್ಯ’ತೆ!