ದೀಪಿಕಾ, ಕತ್ರಿನಾ ಮಾತ್ರವಲ್ಲ, ಅನುಷ್ಕಾ ಶೆಟ್ಟಿ ಮೇಲೂ ಕಣ್ಣಿಟ್ಟಿದ್ದ ರಣಬೀರ್; ಬಹಿರಂಗವಾಗಿ ಹೇಳಿಕೊಂಡಿದ್ದ ನಟ

Anushka Shetty: ಬಾಹುಬಲಿ ಸಿನಿಮಾ ಬಳಿಕ ಅನುಷ್ಕಾ ಶೆಟ್ಟಿ ಖ್ಯಾತಿ ವಿಶ್ವಾದ್ಯಂತ ಹಬ್ಬಿತು. ಬಾಲಿವುಡ್​ ಮಂದಿ ಕೂಡ ಆ ಚಿತ್ರವನ್ನು ಮುಗಿಬಿದ್ದು ನೋಡಿದ್ದರು. ಅದರಲ್ಲಿ ದೇವಸೇನಾ ಪಾತ್ರ ಮಾಡಿದ್ದ ಅನುಷ್ಕಾ ಅವರನ್ನು ಕಂಡು ರಣಬೀರ್​ ಕಪೂರ್​ ಫಿದಾ ಆಗಿದ್ದರು.

ದೀಪಿಕಾ, ಕತ್ರಿನಾ ಮಾತ್ರವಲ್ಲ, ಅನುಷ್ಕಾ ಶೆಟ್ಟಿ ಮೇಲೂ ಕಣ್ಣಿಟ್ಟಿದ್ದ ರಣಬೀರ್; ಬಹಿರಂಗವಾಗಿ ಹೇಳಿಕೊಂಡಿದ್ದ ನಟ
ರಣಬೀರ್​ ಕಪೂರ್​ - ಅನುಷ್ಕಾ ಶೆಟ್ಟಿ
Follow us
|

Updated on: May 17, 2021 | 9:28 AM

ಸಿನಿಮಾ ಮಾತ್ರವಲ್ಲದೆ, ವೈಯಕ್ತಿಕ ಜೀವನದ ಕಾರಣಕ್ಕಾಗಿ ನಟ ರಣಬೀರ್​ ಕಪೂರ್​ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಆದರಲ್ಲೂ ಅವರ ಲವ್ ​ಲೈಫ್​ ಬಗ್ಗೆ ಸದಾ ಚರ್ಚೆ ಆಗುತ್ತಲೇ ಇರುತ್ತದೆ. ಮೊದಲು ದೀಪಿಕಾ ಪಡುಕೋಣೆ, ನಂತರ ಕತ್ರಿನಾ ಕೈಫ್​ ಜೊತೆ ರಣಬೀರ್​ ಪ್ರೀತಿಯಲ್ಲಿ ಮುಳುಗಿದ್ದರು. ಆದರೆ ಇಬ್ಬರ ಜೊತೆಗೂ ಅವರ ಸಂಬಂಧ ಮುಂದುವರಿಯಲಿಲ್ಲ. ಈಗ ಅವರು ಆಲಿಯಾ ಭಟ್​ ಜೊತೆ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಅವರು ದಕ್ಷಿಣ ಭಾರತದ ಸ್ಟಾರ್​ ನಟಿ ಅನುಷ್ಕಾ ಶೆಟ್ಟಿ ಮೇಲೂ ಕಣ್ಣಿಟ್ಟಿದ್ದರು ಎಂಬುದು ಅಚ್ಚರಿಯ ವಿಚಾರ.

ಬಾಹುಬಲಿ ಸಿನಿಮಾ ಬಳಿಕ ಅನುಷ್ಕಾ ಶೆಟ್ಟಿ ಖ್ಯಾತಿ ವಿಶ್ವಾದ್ಯಂತ ಹಬ್ಬಿತು. ಬಾಲಿವುಡ್​ ಮಂದಿ ಕೂಡ ಆ ಚಿತ್ರವನ್ನು ಮುಗಿಬಿದ್ದು ನೋಡಿದ್ದರು. ಅದರಲ್ಲಿ ದೇವಸೇನಾ ಪಾತ್ರ ಮಾಡಿದ್ದ ಅನುಷ್ಕಾ ಅವರನ್ನು ಕಂಡು ರಣಬೀರ್​ ಕಪೂರ್​ ಫಿದಾ ಆಗಿದ್ದರು. ಆ ಬಗ್ಗೆ ಅವರು 2017ರ ಸೈಮಾ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಕತ್ರಿನಾ ಕೈಫ್​ ಜೊತೆಗೆ ರಣಬೀರ್​ ಕಪೂರ್​ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುತ್ತಿದ್ದಾಗ ಅವರು ಈ ವಿಚಾರದ ಬಗ್ಗೆ ಬಾಯಿ ಬಿಟ್ಟಿದ್ದರು.

ದಕ್ಷಿಣ ಭಾರತದ ಯಾವ ನಟಿಯ ಜೊತೆಗೆ ನಟಿಸಲು ನಿಮಗೆ ಆಸೆ ಇದೆ ಎಂದು ಕೇಳಿದ ಪ್ರಶ್ನೆಗೆ ರಣಬೀರ್​ ಅವರು ಅನುಷ್ಕಾ ಶೆಟ್ಟಿ ಹೆಸರು ಹೇಳಿದರು. ‘ಇಲ್ಲಿನ ಅನೇಕ ನಟಿಯರ ಜೊತೆ ಕೆಲಸ ಮಾಡುಬೇಕು ಎಂಬುದು ನನ್ನ ಆಸೆ. ಆದರೆ ಬಾಹುಬಲಿ ಸಿನಿಮಾ ಬಂದ ಬಳಿಕ ನನಗೆ ಅನುಷ್ಕಾ ಶೆಟ್ಟಿ ಮೇಲೆ ಮಿನಿ ಕ್ರಶ್​ ಆಗಿದೆ. ಅವರ ಜೊತೆ ನಟಿಸಲು ನಾನು ಖಂಡಿತಾ ಇಷ್ಟಪಡುತ್ತೇನೆ’ ಎಂದು ರಣಬೀರ್​ ಹೇಳಿದ್ದರು. ಆದರೆ ಈವರೆಗೂ ಅವರ ಆಸೆ ಈಡೇರಿಲ್ಲ. ಪಕ್ಕದಲ್ಲೇ ಇದ್ದ ಕತ್ರಿನಾ ಕೈಫ್​ ಅವರು, ‘ನಾನು ಪ್ರಭಾಸ್​ ಜೊತೆ ನಟಿಸಬೇಕು’ ಎಂದು ಹೇಳಿದ್ದರು.

ಸದ್ಯಕ್ಕೆ ಅನುಷ್ಕಾ ಶೆಟ್ಟಿ ಸಿನಿಮಾ ಕೆಲಸಗಳಿಗೆ ಬ್ರೇಕ್​ ಹಾಕಿದಂತಿದೆ. ಈ ನಡುವೆ ಅವರ ಮದುವೆ ಸುದ್ದಿಗಳೂ ಜೋರಾಗಿ ಕೇಳಿಬರುತ್ತಿವೆ. ಆದರೆ ಅದ್ಯಾವುದಕ್ಕೂ ಅವರು ಪ್ರತಿಕ್ರಿಯೆ ನೀಡಿಲ್ಲ. ಸದ್ಯದಲ್ಲೇ ಅವರು ದಾಂಪತ್ಯ ಜೀವಕ್ಕೆ ಕಾಲಿಟ್ಟರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ:

Anushka Shetty: ನಟಿ ಅನುಷ್ಕಾ ಶೆಟ್ಟಿ ಹೀಗಾಗಿದ್ದೇಕೆ? ಫೋಟೋ ನೋಡಿ ಫ್ಯಾನ್ಸ್​ ಶಾಕ್​

Anushka Shetty Wedding: ಅನುಷ್ಕಾ ಶೆಟ್ಟಿಗೆ ಕಂಕಣ ಭಾಗ್ಯ? ಮದುವೆ ಆಗ್ತಿರೋ ಹುಡುಗ ಯಾರು?

ತಾಜಾ ಸುದ್ದಿ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು
ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ:ಎರಡು ಪಕ್ಷಗಳ ಕೆಲ ಮುಖಂಡರು ಕಾಂಗ್ರೆಸ್​ಗೆ
ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ:ಎರಡು ಪಕ್ಷಗಳ ಕೆಲ ಮುಖಂಡರು ಕಾಂಗ್ರೆಸ್​ಗೆ