Anushka Shetty Wedding: ಅನುಷ್ಕಾ ಶೆಟ್ಟಿಗೆ ಕಂಕಣ ಭಾಗ್ಯ? ಮದುವೆ ಆಗ್ತಿರೋ ಹುಡುಗ ಯಾರು?

 ಕೆಲ ತಿಂಗಳ ಹಿಂದೆ ನಿರ್ದೇಶಕ ಪ್ರಕಾಶ್​ ಕೊವೆಲಮುಡಿ ಜತೆಗೆ ಅನುಷ್ಕಾ ಶೆಟ್ಟಿ ಮದುವೆ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಕೂಡ ಆಗಿತ್ತು. ನಂತರ ಅನುಷ್ಕಾ ಶೆಟ್ಟಿ ಇದನ್ನು ಅಲ್ಲಗಳೆದಿದ್ದರು.

  • TV9 Web Team
  • Published On - 16:28 PM, 5 May 2021
Anushka Shetty Wedding: ಅನುಷ್ಕಾ ಶೆಟ್ಟಿಗೆ ಕಂಕಣ ಭಾಗ್ಯ? ಮದುವೆ ಆಗ್ತಿರೋ ಹುಡುಗ ಯಾರು?
ನಟಿ ಅನುಷ್ಕಾ ಶೆಟ್ಟಿ.

 ‘ಅನುಷ್ಕಾ ಶೆಟ್ಟಿ ಮದುವೆ ಆಗಲಿದ್ದಾರೆ’- ಹೀಗೊಂದು ವಿಚಾರ ಚರ್ಚೆ ಆಗಲು ಆರಂಭಿಸಿ ಅನೇಕ ವರ್ಷಗಳೇ ಕಳೆದಿವೆ. ಆದರೆ, ಈವರೆಗೆ ಅವರ ಕಡೆಯಿಂದ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈಗ ಈ ವಿಚಾರದ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡಿದೆ. ಅವರು ದುಬೈ ಮೂಲದ ಉದ್ಯಮಿಯನ್ನು ವಿವಾಹವಾಗಲಿದ್ದಾರಂತೆ. ಹೀಗೊಂದು ವದಂತಿ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್​ ಹಾಗೂ ಅನುಷ್ಕಾ ಒಟ್ಟಾಗಿ ನಟಿಸಿದ್ದರು. ಇವರ ಮಧ್ಯೆ ಪ್ರೀತಿ ಇದೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ, ಇವರು ಮದುವೆ ಕೂಡ ಆಗಲಿದ್ದಾರೆ ಎನ್ನುವ ಮಟ್ಟಿಗೆ ಚರ್ಚೆಗಳು ನಡೆದಿದ್ದವು. ಆದರೆ, ಆ ರೀತಿಯ ಯಾವುದೇ ಬೆಳವಣಿಗೆ ನಡೆಯಲಿಲ್ಲ. ನಾವಿಬ್ಬರು ಉತ್ತಮ ಗೆಳೆಯರು ಅಷ್ಟೇ ಎಂದು ಹೇಳುವ ಮೂಲಕ ಅನುಷ್ಕಾ ಎಲ್ಲಾ ಚರ್ಚೆಗೆ ತೆರೆ ಎಳೆದಿದ್ದರು.

 ಕೆಲ ತಿಂಗಳ ಹಿಂದೆ ನಿರ್ದೇಶಕ ಪ್ರಕಾಶ್​ ಕೊವೆಲಮುಡಿ ಜತೆಗೆ ಅನುಷ್ಕಾ ಶೆಟ್ಟಿ ಮದುವೆ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಕೂಡ ಆಗಿತ್ತು. ನಂತರ ಅನುಷ್ಕಾ ಶೆಟ್ಟಿ ಇದನ್ನು ಅಲ್ಲಗಳೆದಿದ್ದರು.

ಈಗ ಅನುಷ್ಕಾ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ದುಬೈ ಮೂಲದ ಉದ್ಯಮಿ ಜತೆ ಅನುಷ್ಕಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಚ್ಚರಿ ಎಂದರೆ, ಮದುವೆ ಆಗುತ್ತಿರುವ ಹುಡುಗ ಅನುಷ್ಕಾಗಿಂತ ಚಿಕ್ಕವರಂತೆ. ಮದುವೆ ಆದ ನಂತರದಲ್ಲಿ ದುಬೈನಲ್ಲಿಯೇ ಅವರು ಸೆಟಲ್​​ ಆಗಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಆದರೆ, ಈ ಬಗ್ಗೆ ಅನುಷ್ಕಾ ಶೆಟ್ಟಿ ಅವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಅನುಷ್ಕಾ ಶೆಟ್ಟಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ನಿಶಬ್ದಂ ಸಿನಿಮಾದಲ್ಲಿ. ಈ ಚಿತ್ರದಲ್ಲಿ ಅನುಷ್ಕಾ ಮೂಕಿಯಾಗಿ ಕಾಣಿಸಿಕೊಂಡಿದ್ದರು. ಆರ್​. ಮಾಧವನ್​ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಕಳೆದ ವರ್ಷ ಅಮೇಜಾನ್​ ಪ್ರೈಂನಲ್ಲಿ ಈ ಚಿತ್ರ ರಿಲೀಸ್​ ಆಗಿತ್ತು. ನವೀನ್​ ಪೊಲಿಶೆಟ್ಟಿ ಜತೆ ಬೇರೊಂದು ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Anushka Sharma: ಕೊವಿಡ್​ ಸಂಕಷ್ಟದಲ್ಲಿ ಕೊಯ್ಲಿ-ಅನುಷ್ಕಾ ಕೈಕಟ್ಟಿ ಕೂತಿದ್ದಾರಾ? ಕಡೆಗೂ ಬಾಯ್ಬಿಟ್ಟ ನಟಿ