Prashanth Sambargi: ಸುದೀಪ್​ ಮಾತಿಗೆ ಬೆಲೆಕೊಟ್ಟು ದೊಡ್ಡ ನಿರ್ಧಾರ ತೆಗೆದುಕೊಂಡ ಪ್ರಶಾಂತ್​ ಸಂಬರಗಿ; ಮನೆಯವರಿಗೆ ಶಾಕ್

ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ಸುದೀಪ್​ ಧ್ವನಿ ಕೇಳಿತ್ತು. ಪ್ರತಿ ಸದಸ್ಯರಿಗೂ ಅವರು ಸಲಹೆ ಸೂಚನೆ ನೀಡಿದ್ದರು. ಪ್ರಶಾಂತ್​ ಸಂಬರಗಿಗೆ ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ್ದರು.

Prashanth Sambargi: ಸುದೀಪ್​ ಮಾತಿಗೆ ಬೆಲೆಕೊಟ್ಟು ದೊಡ್ಡ ನಿರ್ಧಾರ ತೆಗೆದುಕೊಂಡ ಪ್ರಶಾಂತ್​ ಸಂಬರಗಿ; ಮನೆಯವರಿಗೆ ಶಾಕ್
ಬಿಗ್​ ಬಾಸ್​ ಕನ್ನಡ - ಕಿಚ್ಚ ಸುದೀಪ್​
Follow us
ರಾಜೇಶ್ ದುಗ್ಗುಮನೆ
|

Updated on: May 05, 2021 | 5:40 PM

ಬಿಗ್​ ಬಾಸ್ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಎಂದಾಗ ನೆನಪಾಗೋದು ಅವರ ಕ್ರಾಂತಿಯ ಮಾತುಗಳು. ಮನೆಯಲ್ಲಿ ಗುಂಪುಗಾರಿಕೆ ಇದೆ, ಮನೆಯಲ್ಲಿ ಅಸಮಾನತೆ ಇದೆ ಎಂದೆಲ್ಲ ಕೂಗಾಡಿ, ಕಿರುಚಾಡಿ ಅನೇಕ ಬಾರಿ ಜಗಳ ಮಾಡಿದ್ದಾರೆ. ಆದರೆ, ಅವರು ಈಗ ತುಂಬಾನೇ ಬದಲಾಗಿದ್ದಾರೆ. ಎಲ್ಲರ ಜತೆಯೂ ಬೆರೆಯುತ್ತಿದ್ದಾರೆ. ಬೇರೆ ಸದಸ್ಯರಿಗೆ ಸಲಹೆ ಸೂಚನೆ ಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಇದಕ್ಕೆ ಸುದೀಪ್​ ಅವರ ಸೂಚನೆ ಕಾರಣ.

ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ಸುದೀಪ್​ ಧ್ವನಿ ಕೇಳಿತ್ತು. ಪ್ರತಿ ಸದಸ್ಯರಿಗೂ ಅವರು ಸಲಹೆ ಸೂಚನೆ ನೀಡಿದ್ದರು. ಪ್ರಶಾಂತ್​ ಸಂಬರಗಿಗೆ ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ್ದರು. ‘ಇದು ಒಂಥರಾ ಕಥೆ ಅಲ್ಲ, ಆದರೂ ಕಥೆ ಥರ ಕೇಳಿಸಿಕೊಳ್ಳಿ. ಅಳುವ ಮಗುವಿಗೆ ಹಾಲು ಜಾಸ್ತಿ ಸಿಗತ್ತೆ ಪ್ರಶಾಂತ್‌. ಹಾಗಂತ, ಅಳು ಜಾಸ್ತಿ ಆದರೆ ನೋಡುವವರಿಗೆ ಎರಡು ತಟ್ಟೋಣ ಅನ್ನಿಸಿಬಿಡತ್ತೆ ಅನ್ನೋದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ’ ಎಂದಿದ್ದರು.

ಪ್ರಶಾಂತ್​ ಸಣ್ಣ ಸಣ್ಣ ವಿಚಾರಕ್ಕೂ ಕೂಗಾಡುತ್ತಿದ್ದರು. ಇದರಿಂದ ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆಯಬಹುದು ಎಂಬುದು ಅವರ ಆಲೋಚನೆ ಆಗಿತ್ತು. ಆದರೆ, ಇದು ಬೇರೆಯವರಿಗೆ ಹಿಂಸೆ ಆಗುತ್ತಿದೆ ಎಂಬುದನ್ನು ಪ್ರಶಾಂತ್​ಗೆ ಪರೋಕ್ಷವಾಗಿ ತಿಳಿಸಿದ್ದರು ಸುದೀಪ್​. ಇದಾದ ನಂತರ ಕ್ಯಾಮೆರಾ ಎದುರು ಹೋಗಿ ಮಾತನಾಡಿದ್ದ ಪ್ರಶಾಂತ್​, ನನ್ನ ತಪ್ಪನ್ನು ತಿದ್ದುಕೊಳ್ಳುತ್ತೇನೆ ಎಂದಿದ್ದರು.

ಈಗ ಪ್ರಶಾಂತ್​ ತಮ್ಮ ತಪ್ಪನ್ನು ತಿದ್ದಿಕೊಂಡಂತೆ ಕಾಣುತ್ತಿದೆ. ಅವರು ಮನೆಯ ಎಲ್ಲಾ ಸದಸ್ಯರ ಜತೆ ಬರೆಯುತ್ತಿದ್ದಾರೆ. ಯಾರ ಜತೆಯೂ ಅಷ್ಟಾಗಿ ಜಗಳ ಮಾಡುತ್ತಿಲ್ಲ. ಇದು ಮನೆಯವರಿಗೆ ಖುಷಿ ನೀಡಿದೆ. ಇದು ಮನೆಯವರ ಗಮನಕ್ಕೂ ಬಂದಿದೆ.

ಈ ಬಗ್ಗೆ ಮಾತನಾಡಿರುವ ರಘು ಗೌಡ, ಅಂತೂ 10ನೇ ವಾರಕ್ಕೆ ಬದಲಾದಿರಿ. ಇಷ್ಟು ವಾರಗಳಲ್ಲಿ ಎಲ್ಲಾ ಸದಸ್ಯರನ್ನು ನೀವು ಬೆಂಬಲಿಸಿದ್ದು ಇದೇ ಮೊದಲು ಎನಿಸುತ್ತದೆ ಅಲ್ಲವೇ ಎಂದು ಕೇಳಿದ್ದಾರೆ. ಇದಕ್ಕೆ ಪ್ರಶಾಂತ್​ ಕಡೆಯಿಂದ ಹೌದು ಎನ್ನುವ ಉತ್ತರ ಬಂತು.

ಇದನ್ನೂ ಓದಿ: Kichcha Sudeep: ಜಾಸ್ತಿ ಆದ್ರೆ ಎರಡು ತಟ್ಟೋಣ ಅನ್ಸುತ್ತೆ; ಪ್ರಶಾಂತ್ ಸಂಬರಗಿಗೆ ಸುದೀಪ್​ ವಾರ್ನಿಂಗ್​

Shubha Poonja: ನನ್ನ ಹುಡುಗನಿಗೆ ಪ್ರಪೋಸ್​​ ಮಾಡಿದ್ದು ನಾನಲ್ಲ, ನನ್ನ ಅಮ್ಮ; ಶುಭಾ ಪೂಂಜಾ ಪ್ರೇಮಕಥೆ ಕೇಳಿ ಬಿಗ್​ ಬಾಸ್​ ಮಂದಿ ಶಾಕ್

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ