Kichcha Sudeep: ಜಾಸ್ತಿ ಆದ್ರೆ ಎರಡು ತಟ್ಟೋಣ ಅನ್ಸುತ್ತೆ; ಪ್ರಶಾಂತ್ ಸಂಬರಗಿಗೆ ಸುದೀಪ್​ ವಾರ್ನಿಂಗ್​

Bigg Boss Kannada: ಸರ್ಪ್ರೈಸ್​ ಆಗಿ ಕಳಿಸಿದ ವಾಯ್ಸ್​ ನೋಟ್​ನಲ್ಲಿ ಸುದೀಪ್​ ಧ್ವನಿ ಸೌಮ್ಯವಾಗಿತ್ತಾದರೂ ಕೂಡ ಅವರು ನೀಡಿದ ಎಚ್ಚರಿಕೆ ತೀಕ್ಷ್ಣವಾಗಿತ್ತು. ಅದಕ್ಕೆ ತಮ್ಮದೇ ರೀತಿಯಲ್ಲಿ ಪ್ರಶಾಂತ್​ ಸಂಬರಗಿ ಉತ್ತರಿಸಿದ್ದಾರೆ.

Kichcha Sudeep: ಜಾಸ್ತಿ ಆದ್ರೆ ಎರಡು ತಟ್ಟೋಣ ಅನ್ಸುತ್ತೆ; ಪ್ರಶಾಂತ್ ಸಂಬರಗಿಗೆ ಸುದೀಪ್​ ವಾರ್ನಿಂಗ್​
ಬಿಗ್​ ಬಾಸ್​ ಕನ್ನಡ - ಕಿಚ್ಚ ಸುದೀಪ್​
Follow us
ಮದನ್​ ಕುಮಾರ್​
|

Updated on: May 04, 2021 | 5:10 PM

ಬಿಗ್​ ಬಾಸ್​ ಸ್ಪರ್ಧಿ ಪ್ರಶಾಂತ್​ ಸಂಬರಗಿ ಅವರ ಗುಣ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ದೊಡ್ಮನೆಯಲ್ಲಿ ಅವರು ಅನೇಕ ಡ್ರಾಮಾ ಮಾಡಿದ್ದಾರೆ. ಕ್ಷಣ ಕ್ಷಣಕ್ಕೆ ಮಾತು ಬದಲಾಯಿಸುತ್ತಾರೆ. ಕಣ್ಣೆದುರಲ್ಲೇ ಸುಳ್ಳು ಹೇಳುತ್ತಾರೆ. ಖಂಡಿಸುತ್ತೇನೆ ಎಂಬ ನೆಪದಲ್ಲಿ ಕೆಲವೊಮ್ಮೆ ಅತಿರೇಕವಾಗಿ ಆಡುತ್ತಾರೆ. ಈ ಎಲ್ಲ ಗುಣಗಳನ್ನು ಗಮನಿಸಿರುವ ಕಿಚ್ಚ ಸುದೀಪ್​ ಅವರು ಸಂಬರಗಿಗೆ ಒಂದು ವಾರ್ನಿಂಗ್​ ನೀಡಿದ್ದಾರೆ. ಅದರ ಬಳಿಕ ಪ್ರಶಾಂತ್​ ಮನಸ್ಸಲ್ಲಿ ಢವಢವ ಶುರು ಆದಂತಿದೆ.

ಪ್ರತಿ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್​ ಅವರು ವಾರದ ಪಂಚಾಯಿತಿ ನಡೆಸುತ್ತಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಅವರಿಗೆ ಈಗ ಶೋ ನಡೆಸಲು ಸಾಧ್ಯವಾಗಿಲ್ಲ. ಒಂದು ವೇಳೆ ಅವರು ವಾರದ ಪಂಚಾಯಿತಿ ನಡೆಸಿದ್ದಿದ್ದರೆ ಎಲ್ಲರ ಸರಿ ತಪ್ಪುಗಳನ್ನು ಎತ್ತಿ ಹೇಳುತ್ತಿದ್ದರು. ಆದರೆ ವೀಕೆಂಡ್​ ಶೋಗಳ ಚಿತ್ರೀಕರಣ ರದ್ದಾಗಿದ್ದರಿಂದ ಸರಿ-ತಪ್ಪುಗಳ ಬಗ್ಗೆ ಮಾತನಾಡುವ ಪ್ರಮೇಯವೇ ಬಂದಿರಲಿಲ್ಲ. ಹಾಗಾಗಿ ಎಲ್ಲ ಸ್ಪರ್ಧಿಗಳು ತಮಗೆ ಮನಬಂದಂತೆ ನಡೆದುಕೊಳ್ಳುತ್ತಿದ್ದರು. ಅಂಥವರಿಗೆಲ್ಲ ಈಗ ಸುದೀಪ್​ ಛಾಟಿ ಬೀಸಿದ್ದಾರೆ.

ವೀಕೆಂಡ್​ ಎಪಿಸೋಡ್​ನಲ್ಲಿ ಭಾಗವಹಿಸದೇ ಇದ್ದರೂ ಕೂಡ ಎಲ್ಲ ಎಪಿಸೋಡ್​ಗಳನ್ನು ಸುದೀಪ್​ ಗಮನಿಸುತ್ತಿದ್ದಾರೆ. ಮೇ 3ರ ಸಂಚಿಕೆಯಲ್ಲಿ ಮನೆಯಲ್ಲಿ ಉಳಿದಿರುವ ಎಲ್ಲ 12 ಸ್ಪರ್ಧಿಗಳಿಗೆ ಕಿಚ್ಚ ಒಂದೊಂದು ವಾಯ್ಸ್​ ನೋಟ್​ ಕಳಿಸಿದ್ದರು. ಅದರಲ್ಲಿ ಪ್ರಶಾಂತ್​ ಸಂಬರಗಿ ಅವರಿಗೆ ಖಡಕ್​ ಆಗಿಯೇ ಒಂದು ಸಂದೇಶ ನೀಡಿದ್ದಾರೆ. ‘ಅಳುವ ಮಗುವಿಗೆ ಹಾಲು ಜಾಸ್ತಿ ಸಿಗುತ್ತೆ ಪ್ರಶಾಂತ್​. ಆದರೆ ಅಳೋದು ಜಾಸ್ತಿಯಾದ್ರೆ ನೋಡುವವರಿಗೆ ಎರಡು ತಟ್ಟೋಣ ಅನಿಸುತ್ತೆ. ನೆನಪಿನಲ್ಲಿ ಇಟ್ಟುಕೊಳ್ಳಿ’ ಎಂದು ಕಿಚ್ಚ ವಾರ್ನಿಂಗ್​ ನೀಡಿದರು.

ಈ ವಾಯ್ಸ್​ ನೋಟ್​ನಲ್ಲಿ ಸುದೀಪ್​ ಧ್ವನಿ ಸೌಮ್ಯವಾಗಿತ್ತಾದರೂ ಕೂಡ ಅವರು ನೀಡಿದ ಎಚ್ಚರಿಕೆ ತೀಕ್ಷ್ಣವಾಗಿತ್ತು. ಆ ಮಾತಿಗೆ ತಮ್ಮದೇ ರೀತಿಯಲ್ಲಿ ಪ್ರಶಾಂತ್​ ಸಂಬರಗಿ ಉತ್ತರಿಸಿದ್ದಾರೆ. ‘ನಾನು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದು ಅಷ್ಟೇ. ಜಾಸ್ತಿ ಏನೂ ನಾನು ಅತಿಯಾಗಿ ಮಾಡಿಲ್ಲ. ಒಂದು ವೇಳೆ ಅತಿಯಾಗಿ ಮಾಡಿದ್ದೇನೆ ಅನಿಸಿದರೆ ಕ್ಷಮೆ ಇರಲಿ. ನಿಮ್ಮ ಮಾತನ್ನು ನಾನು ಪಾಸಿಟಿವ್​ ಆಗಿ ಸ್ವೀಕರಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಇದಿನ್ನೂ ಕೆಟ್ಟದಾಗಿ ಕಾಣಿಸುತ್ತಿದೆ; ಪ್ರಶಾಂತ್​ ಸಂಬರಗಿ ಗುಣಗಳು ಚಕ್ರವರ್ತಿಗೆ ಅಸಹ್ಯ ಮೂಡಿಸುತ್ತಿವೆ

ಶುಭಾ ಬಳಿ ಇರುವ ಅಮೂಲ್ಯ ವಸ್ತು ಕದಿಯಲು ಸಂಬರಗಿ ಪ್ಲ್ಯಾನ್​; ಮಂಜು ಕೊಟ್ರು ಎಚ್ಚರಿಕೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ