ಹಾಸ್ಯ ನಟ ಅಯ್ಯಪ್ಪನ್​ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ

ಸೆಲೆಬ್ರಿಟಿಗಳ ಸಾವಿನಿಂದಾಗಿ ಕಾಲಿವುಡ್​ಗೆ ಮೇಲಿಂದ ಮೇಲೆ ಆಘಾತ ಆಗುತ್ತಲೇ ಇದೆ. ನಿರ್ದೇಶಕ ಕೆವಿ ಆನಂದ್​, ಖ್ಯಾತ ನಟ ವಿವೇಕ್, ಹಾಸ್ಯ ನಟ ಪಾಂಡು ನಿಧನರಾದ ಬೆನ್ನಲ್ಲೇ ಅಯ್ಯಪ್ಪನ್​ ಗೋಪಿ ಮತ್ತು ಪವನ್​ರಾಜ್​ ಅಸುನೀಗಿದ್ದಾರೆ.

ಹಾಸ್ಯ ನಟ ಅಯ್ಯಪ್ಪನ್​ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ
ಅಯ್ಯಪ್ಪನ್ ಗೋಪಿ
Madan Kumar

|

May 17, 2021 | 7:56 AM

ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅಯ್ಯಪ್ಪನ್​ ಗೋಪಿ ನಿಧನರಾಗಿದ್ದಾರೆ. ಮೇ 15ರಂದು ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು ಎಂದು ವರದಿ ಆಗಿದೆ. ಅಯ್ಯಪ್ಪನ್​ ಗೋಪಿ ನಿಧನಕ್ಕೆ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಇತ್ತೀಚೆನ ದಿನಗಳಲ್ಲಿ ಕಾಲಿವುಡ್​ ಅನೇಕ ಸೆಲೆಬ್ರಿಟಿಗಳು ನಿಧನರಾದರು. ನಿರ್ದೇಶಕ ಕೆ.ವಿ. ಆನಂದ್​, ನಟ ವಿವೇಕ್​ ಮುಂತಾದವರ ಸಾವಿನ ಬಳಿಕ ಅಯ್ಯಪ್ಪನ್​ ಗೋಪಿ ಅಸುನೀಗಿರುವ ಸುದ್ದಿ ಕೇಳಿ ಕಾಲಿವುಡ್​ಗೆ ಆಘಾತ ಆಗಿದೆ.

ಶಿವಕಾರ್ತಿಕೇಯನ್​ ಮತ್ತು ಕೀರ್ತಿ ಸುರೇಶ್​ ನಟನೆಯ ‘ರಜನಿ ಮುರುಗನ್​’ ಸಿನಿಮಾದಲ್ಲಿ ಅಯ್ಯಪ್ಪನ್​ ಗೋಪಿ ಅಭಿನಯಿಸಿದ್ದರು. ‘ದಿಲ್ಲುಕು ದುಡ್ಡು’ ಚಿತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ನಟನೆಯ ಬಗ್ಗೆ ಅಯ್ಯಪ್ಪನ್​ ಗೋಪಿ ತೀವ್ರ ಒಲವು ಹೊಂದಿದ್ದರು. ನಾನು ಬಣ್ಣ ಹಚ್ಚಿ ಅಭಿನಯಿಸುತ್ತಿರುವಾಗಲೇ ಸಾಯಬೇಕು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಹಲವು ಸಿನಿಮಾಗಳಲ್ಲಿ ಸಹ-ನಿರ್ದೇಶಕನಾಗಿ ಕೆಲಸ ಮಾಡಿದ್ದ ಪವನ್​ ರಾಜ್​ ಕೂಡ ನಿಧನರಾದರು ಎಂಬ ಸುದ್ದಿಯನ್ನು ನಿರ್ದೇಶಕ ಪೋನ್​ ರಾಮ್​ ಶನಿವಾರವಷ್ಟೇ (ಮೇ 15) ತಿಳಿಸಿದ್ದರು. ‘ನನ್ನ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಪವನ್​ರಾಜ್​ ಅವರು ಹೃದಯಾಘಾತದಿಂದ ಅಸುನೀಗಿದ್ದಾರೆ’ ಎಂದು ಪೋನ್​ರಾಮ್​ ಟ್ವೀಟ್​ ಮಾಡಿದ್ದರು. ಅದರ ಬೆನ್ನಲ್ಲೇ ಅಯ್ಯಪ್ಪನ್​ ಗೋಪಿ ನಿಧನರಾಗಿರುವ ಶಾಕಿಂಗ್​ ಸುದ್ದಿ ಕೇಳಿಬಂದಿದೆ.

ತಮಿಳು ಚಿತ್ರರಂಗಕ್ಕೆ ಮೇಲಿಂದ ಮೇಲೆ ಆಘಾತ ಆಗುತ್ತಲೇ ಇದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೆವಿ ಆನಂದ್​, ಖ್ಯಾತ ನಟ ವಿವೇಕ್, ಹಾಸ್ಯ ನಟ ಪಾಂಡು ಸೇರಿದಂತೆ ಅನೇಕರು ಇತ್ತೀಚೆಗೆ ಮೃತರಾದರು. ಈಗ ಅಯ್ಯಪ್ಪನ್​ ಗೋಪಿ ಮತ್ತು ಪವನ್​ರಾಜ್​ ನಿಧನರಾಗಿದ್ದಾರೆ. ಇನ್ನೊಂದೆಡೆ ಕೊರೊನಾ ಹಾವಳಿಯಿಂದಲೂ ಅನೇಕ ಸೆಲೆಬ್ರಿಟಿಗಳು ಅಸುನೀಗುತ್ತಿದ್ದಾರೆ.

ಇದನ್ನೂ ಓದಿ:

ಕೊರೊನಾ ವೈರಸ್​ನಿಂದ ಕಾಲಿವುಡ್​ನ ಜನಪ್ರಿಯ ಹಾಸ್ಯ ನಟ ಪಾಂಡು ನಿಧನ

KV Anand Death: ಖ್ಯಾತ ನಿರ್ದೇಶಕ ಕೆ.ವಿ. ಆನಂದ್​ ನಿಧನ; ಕಾಲಿವುಡ್​ಗೆ ಮತ್ತೊಂದು ಆಘಾತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada