ಕೊರೊನಾ ವೈರಸ್​ನಿಂದ ಕಾಲಿವುಡ್​ನ ಜನಪ್ರಿಯ ಹಾಸ್ಯ ನಟ ಪಾಂಡು ನಿಧನ

550ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಪಾಂಡು ಅವರಿಗೆ ಸಲ್ಲುತ್ತದೆ. ಅವರ ನಿಧನದಿಂದ ತಮಿಳು ಚಿತ್ರರಂಗಕ್ಕೆ ಆಘಾತ ಆಗಿದೆ. ಸೋಶಿಯಲ್​ ಮೀಡಿಯಾ ಮೂಲಕ ಅನೇಕರು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಕೊರೊನಾ ವೈರಸ್​ನಿಂದ ಕಾಲಿವುಡ್​ನ ಜನಪ್ರಿಯ ಹಾಸ್ಯ ನಟ ಪಾಂಡು ನಿಧನ
ಹಾಸ್ಯ ನಟ ಪಾಂಡು

ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾ ವೈರಸ್​ ಅಟ್ಟಹಾಸ ಮೆರೆಯುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಕೊವಿಡ್​ಗೆ ಬಲಿ ಆಗುತ್ತಿದ್ದಾರೆ. ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ಪಾಂಡು ಅವರು ಇಂದು (ಮೇ 6) ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಚೆನ್ನೈನಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ಬೆಳಗ್ಗೆ ಮೃತರಾದರು. ಪತ್ನಿ ಮತ್ತು ಮೂವರು ಮಕ್ಕಳನ್ನು ಪಾಂಡು ಅಗಲಿದ್ದಾರೆ.

1981ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪಾಂಡು ಅವರು ಕಾಮಿಡಿ ಪಾತ್ರಗಳ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. 550ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಪಾಂಡು ನಿಧನದಿಂದ ತಮಿಳು ಚಿತ್ರರಂಗಕ್ಕೆ ಆಘಾತ ಆಗಿದೆ. ಅವರಿಗೆ ಸೋಶಿಯಲ್​ ಮೀಡಿಯಾ ಮೂಲಕ ಅನೇಕರು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ನಿರ್ದೇಶಕ ಕೆ.ವಿ. ಆನಂದ್​ ಅವರು ಕೊರೊನಾದಿಂದ ನಿಧನರಾದರು. ಅದಕ್ಕೂ ಮುನ್ನ ನಟ ವಿವೇಕ್​ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಹೀಗೆ ಕಾಲಿವುಡ್​ಗೆ ಬ್ಯಾಕ್​ ಟು ಬ್ಯಾಕ್​ ಕಹಿ ಸುದ್ದಿ ಕೇಳಿಬರುತ್ತಲೇ ಇದೆ. ಕೊರೊನಾ ಎರಡನೇ ಅಲೆಗೆ ದೇಶದ ಜನರು ತತ್ತರಿಸಿದ್ದಾರೆ. ಕನ್ನಡದಲ್ಲೂ ಅನೇಕ ಸೆಲೆಬ್ರಿಟಿಗಳು ಸಾವಿನ ಮನೆಯ ಹಾದಿ ಹಿಡಿದಿರುವುದು ಬೇಸರದ ಸಂಗತಿ.

ನಟ ಕೋಮಲ್​ ಕುಮಾರ್​ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸಾವು-ಬದುಕಿನ ನಡುವೆ ಹೋರಾಡಿ ಬಂದಿದ್ದಾರೆ. ಖ್ಯಾತ ನಿರ್ಮಾಪಕ ಕೋಟಿ ರಾಮು, ಯುವ ನಟ- ನಿರ್ಮಾಪಕ ಡಿ.ಎಸ್​. ಮಂಜುನಾಥ್​, ಕಾರ್ಯಕಾರಿ ನಿರ್ಮಾಪಕ ರಾಜಶೇಖರ್​, ಪೋಸ್ಟರ್​ ಡಿಸೈನರ್​ ಮಸ್ತಾನ್​, ಪುಟ್ಟಣ್ಣ ಕಣಗಾಲ್ ಪುತ್ರ ರಾಮು, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮಹಾಮಾರಿ ಕೊವಿಡ್​ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕಾಟ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: 

Renuka Sharma Death: ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾದಿಂದ ನಿಧನ

ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್​ ನಟಿ ಪಿಯಾ ಸಹೋದರ ಕೊರೊನಾದಿಂದ ನಿಧನ