AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್ ಯುದ್ಧ; ಭಾರತದ ಬಾಸ್ಮತಿ ಅಕ್ಕಿ ರಫ್ತುದಾರರಿಗೆ 50,000 ಕೋಟಿ ರೂ ಬ್ಯುಸಿನೆಸ್ ಕೈತಪ್ಪುವ ಚಿಂತೆ

India's Basmati rice industry facing heat of middle east crisis: ಇಸ್ರೇಲ್ ಮತ್ತು ಇರಾನ್ ಯುದ್ಧವು ಹರ್ಯಾಣ ಮತ್ತು ಪಂಜಾಬ್ ರೈತರಿಗೆ ಚಿಂತೆಯ ವಿಷಯವಾಗಿದೆ. ಭಾರತದ ಬಾಸ್ಮತಿ ರಫ್ತು ಉದ್ಯಮ ಕಳವಳಗೊಂಡಿದೆ. ಒಂದು ವರ್ಷದಲ್ಲಿ 50,000 ಕೋಟಿ ರೂ ಮೌಲ್ಯದ ಬಾಸ್ಮತಿ ಅಕ್ಕಿ ರಫ್ತು ಮಾಡುತ್ತದೆ ಭಾರತ. ಇದರಲ್ಲಿ ಹೆಚ್ಚಿನ ಪಾಲು ಮಧ್ಯಪ್ರಾಚ್ಯ ಪ್ರದೇಶಕ್ಕೆ ಹೋಗುತ್ತದೆ.

ಇರಾನ್ ಯುದ್ಧ; ಭಾರತದ ಬಾಸ್ಮತಿ ಅಕ್ಕಿ ರಫ್ತುದಾರರಿಗೆ 50,000 ಕೋಟಿ ರೂ ಬ್ಯುಸಿನೆಸ್ ಕೈತಪ್ಪುವ ಚಿಂತೆ
ರಫ್ತು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 02, 2026 | 2:19 PM

Share

ನವದೆಹಲಿ, ಮಾರ್ಚ್ 2: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿದೆ. ಇಸ್ರೇಲ್ ಮತ್ತು ಇರಾನ್ ದೇಶಗಳು ಮಾತ್ರವೇ ರಣರಂಗ ಸ್ಥಳವಾಗಿಲ್ಲ. ನೆರೆಯ ಕೊಲ್ಲಿ ದೇಶಗಳಿಗೂ (gulf countries) ದಾಳಿಗಳಾಗುತ್ತಿವೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಮಾಡುತ್ತಿರುವ ದಾಳಿಗೆ ಇರಾನ್ ಪ್ರತಿದಾಳಿ ನಡೆಸುತ್ತಿದೆ. ಅಮೆರಿಕದ ಸೇನಾ ನೆಲೆಗಳಿರುವ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿ ಇರಾನ್ ದಾಳಿ ಮಾಡುತ್ತಿದೆ. ಇದರಿಂದ ಮಧ್ಯಪ್ರಾಚ್ಯ ಅಕ್ಷರಶಃ ರಣರಂಗವಾಗಿದೆ. ಇದು ಭಾರತದ ರಫ್ತು ಉದ್ಯಮಗಳಿಗೆ (India’s exports) ಕಳವಳ ತಂದಿರುವ ಸಂಗತಿ. ಅದರಲ್ಲೂ ಬಾಸ್ಮತಿ ಅಕ್ಕಿ ರಫ್ತುದಾರರು (Basmati rice exporters) ಚಿಂತಿತರಾಗಿದ್ದಾರೆ. ಮಧ್ಯಪ್ರಾಚ್ಯ ದೇಶಗಳಿಗೆ ರಫ್ತಿಗೆ ತಡೆ ಇಲ್ಲವಾದರೂ, ಸರಬರಾಜು ಮಾಡಲು ಸಾಕಷ್ಟು ಅಪಾಯಗಳಿವೆ.

ಬಾಸ್ಮತಿ ಅಕ್ಕಿ ರಫ್ತಿನಲ್ಲಿ ಭಾರತ ಅಗ್ರಮಾನ್ಯ ದೇಶ. ಜಾಗತಿಕವಾಗಿ ಶೇ. 70ರಷ್ಟು ಬಾಸ್ಮತಿ ಅಕ್ಕಿ ರಫ್ತು ಭಾರತದಿಂದ ನಡೆಯುತ್ತದೆ. 2024-25ರಲ್ಲಿ ಭಾರತ 60 ಲಕ್ಷ ಟನ್​ಗಳಷ್ಟು ಬಾಸಮತಿ ಅಕ್ಕಿ ರಫ್ತು ಮಾಡಿತ್ತು. ಇದರ ಮೌಲ್ಯ 50,000 ಕೋಟಿ ರೂ. ಭಾರತದ ಈ ರಫ್ತಿನಲ್ಲಿ ಅತಿಹೆಚ್ಚು ಸರಬರಾಜಾಗುವುದು ಮಧ್ಯಪ್ರಾಚ್ಯ ದೇಶಗಳಿಗೆ. ಹೀಗಾಗಿ, ಭಾರತದ ಬಾಸ್ಮತಿ ಅಕ್ಕಿ ಬೆಳೆಗಾರರು ಮತ್ತು ವರ್ತಕರು, ಅದರಲ್ಲೂ ಪಂಜಾಬ್ ಮತ್ತು ಹರ್ಯಾಣ ಭಾಗದ ಜನರು ವ್ಯಾಕುಲಗೊಳ್ಳುವಂತಾಗಿದೆ.

ಸಾಗಣೆ ಮತ್ತು ಇನ್ಷೂರೆನ್ಸ್ ವೆಚ್ಚ ಹೆಚ್ಚುತ್ತದೆ…

ಮಧ್ಯಪ್ರಾಚ್ಯಗಳಿಗೆ ಭಾರತದಿಂದ ಸರಕುಗಳನ್ನು ಸಾಗಿಸಬೇಕಾದರೆ ರೆಡ್ ಸೀ ಮತ್ತು ಹಾರ್ಮುಜ್ ಸ್ಟ್ರೇಟ್ ಮೂಲಕವೇ ಹೋಗಬೇಕಾಗುತ್ತದೆ. ರೆಡ್ ಸೀ ಪ್ರದೇಶದಲ್ಲಿ ಹೌತಿ ಹೋರಾಟಗಾರರು ಹಡಗುಗಳ ಮೇಲೆ ಯಾವಾಗ ಬೇಕಾದರೂ ದಾಳಿ ಮಾಡಬಹುದು. ಹಾಗೆಯೇ, ಹಾರ್ಮುಜ್ ಜಲಸಂಧಿಯನ್ನು (Strait of Hormuz) ಇರಾನ್ ಗುರಿ ಮಾಡಿಬಿಟ್ಟರೆ ಮಧ್ಯಪ್ರಾಚ್ಯ ಪ್ರದೇಶಗಳಿಗೆ ಸರಕುಗಳನ್ನು ಸಾಗಿಸುವುದು ದುಸ್ತರವಾಗುತ್ತದೆ.

ಇದನ್ನೂ ಓದಿ: ಯುದ್ಧದಿಂದ ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಗತಿ ಏನು? ದೇಶದಲ್ಲಿರುವ ಪೆಟ್ರೋಲ್ ಎಷ್ಟು ದಿನಕ್ಕೆ ಆಗುತ್ತೆ?

ಈಗಿರುವ ಪರಿಸ್ಥಿತಿಯಲ್ಲಿ ಸರಕುಗಳನ್ನು ಹಡಗಿನ ಸಾಗಿಸಲು ವೆಚ್ಚ ಬಹಳ ಹೆಚ್ಚಾಗುತ್ತದೆ. ಇನ್ಷೂರೆನ್ಸ್ ವೆಚ್ಚವೂ ಅಧಿಕಗೊಳ್ಳುತ್ತದೆ. ಈಗಿರುವ ವ್ಯವಸ್ಥೆಯಲ್ಲಿ (ಸಿಐಎಫ್) ಮಾರಾಟಗಾರರು ಅಥವಾ ರಫ್ತುದಾರರೇ ಇನ್ಷೂರೆನ್ಸ್ ವೆಚ್ಚವನ್ನು ಭರಿಸಬೇಕು ಎಂದಿದೆ. ಹೀಗಾಗಿ, ಸಿಐಎಫ್ ಬದಲು ಎಫ್​ಒಬಿ (ಫ್ರೀ ಆನ್​ಬೋರ್ಡ್) ಗುತ್ತಿಗೆಗಳನ್ನು ಮಾಡಿಕೊಳ್ಳುವಂತೆ ಭಾರತದ ರಫ್ತುದಾರರಿಗೆ ಸಲಹೆ ನೀಡಲಾಗುತ್ತಿದೆ. ಅಂದರೆ, ಈ ಎಫ್​ಒಬಿ ಕಾಂಟ್ರಾಕ್ಟ್​ಗಳಲ್ಲಿ ಇನ್ಷೂರೆನ್ಸ್ ಇತ್ಯಾದಿ ಶಿಪ್ಪಿಂಗ್ ವೆಚ್ಚವನ್ನು ಆಮದುದಾರರೇ ಭರಿಸುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us