AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್​ ಮಾಡೋಕೆ ಮುಂದಾದ ಸಲ್ಲು

ಸಲ್ಮಾನ್​ ಖಾನ್​ ನಟನೆಯ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಚಿತ್ರ ಮೊದಲ ದಿನ ಒಟಿಟಿಯಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್​ ಮಾಡಿತ್ತು. ಆದರೆ, ವಿಮರ್ಶಕರಿಂದ ಸಿನಿಮಾಗೆ ಮೆಚ್ಚುಗೆ ಬಂದಿಲ್ಲ. ಇದು ಸಲ್ಮಾನ್​ ಖಾನ್​ ಅವರನ್ನು ಅಪ್ಸೆಟ್​ ಮಾಡಿದೆ. ಹೀಗಾಗಿ, ಅವರು ದಕ್ಷಿಣ ಭಾರತದ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. 2017ರಲ್ಲಿ ತೆರೆಕಂಡಿದ್ದ ‘ಟೈಗರ್ ಜಿಂದಾ ಹೇ’ ಚಿತ್ರವೇ ಕೊನೆ. ಅದಾದ ನಂತರದಲ್ಲಿ ಸಲ್ಲುಗೆ ಅಂಥ ಯಶಸ್ಸು ಸಿಕ್ಕಿಲ್ಲ. ‘ರೇಸ್​-3’, ‘ಭಾರತ್’​, ‘ದಬಾಂಗ್​ 3’ ಚಿತ್ರಗಳು ಸೋಲು ಕಂಡಿದ್ದವು. ಹೀಗಾಗಿ, […]

ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್​ ಮಾಡೋಕೆ ಮುಂದಾದ ಸಲ್ಲು
ಸಲ್ಮಾನ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: May 16, 2021 | 9:13 PM

ಸಲ್ಮಾನ್​ ಖಾನ್​ ನಟನೆಯ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಚಿತ್ರ ಮೊದಲ ದಿನ ಒಟಿಟಿಯಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್​ ಮಾಡಿತ್ತು. ಆದರೆ, ವಿಮರ್ಶಕರಿಂದ ಸಿನಿಮಾಗೆ ಮೆಚ್ಚುಗೆ ಬಂದಿಲ್ಲ. ಇದು ಸಲ್ಮಾನ್​ ಖಾನ್​ ಅವರನ್ನು ಅಪ್ಸೆಟ್​ ಮಾಡಿದೆ. ಹೀಗಾಗಿ, ಅವರು ದಕ್ಷಿಣ ಭಾರತದ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ.

2017ರಲ್ಲಿ ತೆರೆಕಂಡಿದ್ದ ‘ಟೈಗರ್ ಜಿಂದಾ ಹೇ’ ಚಿತ್ರವೇ ಕೊನೆ. ಅದಾದ ನಂತರದಲ್ಲಿ ಸಲ್ಲುಗೆ ಅಂಥ ಯಶಸ್ಸು ಸಿಕ್ಕಿಲ್ಲ. ‘ರೇಸ್​-3’, ‘ಭಾರತ್’​, ‘ದಬಾಂಗ್​ 3’ ಚಿತ್ರಗಳು ಸೋಲು ಕಂಡಿದ್ದವು. ಹೀಗಾಗಿ, ರಾಧೆ ಸಿನಿಮಾ ಮೂಲಕ ಅವರಿಗೆ ಯಶಸ್ಸು ಗಳಿಸೋದು ಅನಿವಾರ್ಯವಾಗಿತ್ತು. ಆದರೆ, ಸಲ್ಲು ಲೆಕ್ಕಾಚಾರ ತಲೆಕೆಳಗಾಗಿದೆ. ರಾಧೆ ಸಿನಿಮಾ ಕೂಡ ವಿಮರ್ಶೆಯಲ್ಲಿ ಸೋತಿದೆ. ಇದು ಸಲ್ಲುಗೆ ಆತಂಕ ಸೃಷ್ಟಿಸಿದೆ.

ಬಾಲಿವುಡ್​ನಲ್ಲಿ ಸಲ್ಮಾನ್​ ಖಾನ್​ ದೊಡ್ಡ ಸ್ಟಾರ್​ಡಮ್​ ಹೊಂದಿರುವ ನಟ. ಸತತವಾಗಿ ನಾಲ್ಕು ಸಿನಿಮಾ ಸೋತ ಹೊರತಾಗಿಯೂ ಅವರ ಚಿತ್ರಕ್ಕೆ ಬಂಡವಾಳ ಹೂಡೋಕೆ ನಿರ್ಮಾಪಕರು ಮುಂದೆ ಬರುತ್ತಾರೆ. ಇದು ದೊಡ್ಡ ವಿಚಾರವೇ ಅಲ್ಲ. ಆದರೆ, ಮುಂದಿನ ದಿನಗಳಲ್ಲಿ ಮತ್ತೊಂದಷ್ಟು ಸೋಲು ಕಂಡರೆ ಸ್ಟಾರ್​ಡಮ್​ ಹಾಗೂ ಅಭಿಮಾನಿ ಬಳಗ ಕಡಿಮೆ ಆಗಬಹುದು ಎನ್ನುವ ಭಯ ಸಲ್ಲು ಅವರದ್ದು. ಇದೇ ಕಾರಣಕ್ಕೆ ಅವರು ತಮ್ಮ ನಿರ್ಧಾರ ಬದಲಾಯಿಸಿದ್ದಾರೆ. ತೆಲುಗಿನ ಹಿಟ್​ ಚಿತ್ರವನ್ನು ಬಾಲಿವುಡ್​ಗೆ ರಿಮೇಕ್​ ಮಾಡೋಕೆ ಮುಂದಾಗಿದ್ದಾರೆ.

ಸಲ್ಮಾನ್​ ಖಾನ್​ ಟಾಲಿವುಡ್​ ಸಿನಿಮಾ ಮೊರೆ ಹೋಗಿದ್ದು ಇದೇ ಮೊದಲೇನಲ್ಲ. 2009ರಲ್ಲಿ ತೆರೆಗೆ ಬಂದಿದ್ದ ಕಿಕ್​ ಚಿತ್ರವನ್ನು ಅದೇ ಹೆಸರಿನಲ್ಲಿ ಹಿಂದಿಗೆ ರಿಮೇಕ್​ ಮಾಡಿ ಯಶಸ್ಸು ಕಂಡಿದ್ದರು. ಇನ್ನು ತೆಲುಗಿನ ಅರ್ಜುನ್​ ರೆಡ್ಡಿ, ಟೆಂಪರ್​ ಚಿತ್ರಗಳು ಬಾಲಿವುಡ್​ಗೆ ರಿಮೇಕ್​ ಆಗಿ ಯಶಸ್ಸು ಗಳಿಸಿವೆ. ಹೀಗಾಗಿ, ಈ ವಿಚಾರದ ಮೇಲೆ ಸಲ್ಲು ಸಾಕಷ್ಟು ಆಸ್ತೆ ವಹಿಸಿದ್ದಾರೆ.

ಇದೇ ಕಾರಣಕ್ಕೆ ತೆಲುಗಿನ ಹಿಟ್​ ಚಿತ್ರವೊಂದನ್ನು ಗುರುತಿಸಿ ಅದನ್ನು ಹಿಂದಿಗೆ ರಿಮೇಕ್​ ಮಾಡುವ ಆಲೋಚನೆ ಸಲ್ಮಾನ್​ ಖಾನ್​ ಅವರದ್ದು. ವಿಶೇಷ ಎಂದರೆ, ಸಲ್ಮಾನ್​ ಖಾನ್​ ಅವರೇ ಸಿನಿಮಾ ವೀಕ್ಷಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅವರು ಯಾವ ಸಿನಿಮಾ ರಿಮೇಕ್​ ಮಾಡುತ್ತಾರೆ ಎಂಬುದು ಸದ್ಯದ ಕುತೂಹಲ.

ರಾಧೆ ಸಿನಿಮಾ ಈದ್​ ಹಬ್ಬದ ಪ್ರಯುಕ್ತ ಮೇ 13ರಂದು ಒಟಿಟಿ ಹಾಗೂ ಚಿತ್ರಮಂದಿರದಲ್ಲಿ ಏಕಕಾಲಕ್ಕೆ ರಿಲೀಸ್​ ಆಗಿತ್ತು. ಆದರೆ, ವಿಮರ್ಶೆಯಲ್ಲಿ ಸಿನಿಮಾ ಸೋತಿತ್ತು. ರಾಧೆ ಚಿತ್ರಕ್ಕೆ ಐಎಂಡಿಬಿ 10 ಅಂಕಕ್ಕೆ ಕೇವಲ 2.4 ರೇಟಿಂಗ್​ ನೀಡಿತ್ತು.

ಇದನ್ನೂ ಓದಿ: Salman Khan: ಕಳಪೆ ವಿಮರ್ಶೆ ಸಿಕ್ಕರೂ ದಾಖಲೆ ಬರೆದ ‘ರಾಧೆ’; ಒಟಿಟಿಯಲ್ಲಿ ಸಲ್ಮಾನ್​ ಖಾನ್​ ಹೊಸ ರೆಕಾರ್ಡ್​

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್