ಭುವನ್​ ಪೊನ್ನಣ್ಣ​ ನಿಜವಾದ ಬಿಗ್​ ಬಾಸ್​; ಕೊವಿಡ್​ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ

ಹಿರಿಯ ನಟ ಅಮರನಾಥ್​ ಆರಾಧ್ಯ ಅವರಿಗೆ ಭುವನ್​ ಫುಡ್​ಕಿಟ್​ ಹಾಗೂ ಮೆಡಿಸಿನ್​ ನೀಡಿದ್ದಾರೆ. ಈ ವಿಚಾರದ ಬಗ್ಗೆ ಅಮರನಾಥ್​ ಖುಷಿ ವ್ಯಕ್ತಪಡಿಸಿದ್ದಾರೆ.

ಭುವನ್​ ಪೊನ್ನಣ್ಣ​ ನಿಜವಾದ ಬಿಗ್​ ಬಾಸ್​; ಕೊವಿಡ್​ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ
ಭುವನ್​ ಪೊನ್ನಣ್ಣ-ಅರವಿಂದ್​ ಆರಾಧ್ಯ

ಕೊರೊನಾ ವೈರಸ್​ ಹೆಚ್ಚುತ್ತಿರುವ ಮಧ್ಯೆಯೇ ಅನೇಕ ಸೆಲೆಬ್ರಿಟಿಗಳು ಜನಸಾಮಾನ್ಯರ ಸೇವೆಗೆ ನಿಂತಿದ್ದಾರೆ. ಕೆಲವರು ಮನೆಯಿಂದ ಹೊರ ಬಂದು ಸೇವೆ ನೀಡುತ್ತಿದ್ದರೆ, ಇನ್ನೂ ಕೆಲವರು ಮನೆಯಲ್ಲಿದ್ದುಕೊಂಡೇ ಆರ್ಥಿಕ ಸಹಾಯ ನೀಡುತ್ತಿದ್ದಾರೆ. ನಟ ಭುವನ್​​ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೂಡ ಕೊವಿಡ್​ ರೋಗಿಗಳ ಸಹಾಯಕ್ಕೆ ನಿಂತಿದ್ದಾರೆ. ಹೆಲ್ಪ್​​ಲೈನ್​ ಆರಂಭಿಸಿ ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕಷ್ಟದಲ್ಲಿರುವ ಹಿರಿಯ ನಟರಿಗೆ ಭುವನ್​ ಸಹಾಯ ಮಾಡುತ್ತಿದ್ದಾರೆ.

ಹಿರಿಯ ನಟ ಅಮರನಾಥ್​ ಆರಾಧ್ಯ ಅವರಿಗೆ ಭುವನ್​ ಫುಡ್​ಕಿಟ್​ ಹಾಗೂ ಮೆಡಿಸಿನ್​ ನೀಡಿದ್ದಾರೆ. ಈ ವಿಚಾರದ ಬಗ್ಗೆ ಅಮರನಾಥ್​ ಖುಷಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಹಿರಿಯ ನಟರನ್ನು ನೆನಪು ಮಾಡಿಕೊಂಡು ಅವರಿಗೆ ಸಹಾಯ ಮಾಡುತ್ತಿರುವ ಬಗ್ಗೆ ಅಮರನಾಥ್​ ಧನ್ಯತಾಭಾವ ವ್ಯಕ್ತಪಡಿಸಿದ್ದಾರೆ.

‘ನಾನು ಅಮರನಾಥ್​ ಆರಾಧ್ಯ. ಕೊವಿಡ್​ ಸಮಯದಲ್ಲಿ ನಮ್ಮಂಥ ಬಹಳಷ್ಟು ಹಿರಿಯ ನಟರು ತೊಂದರೆಗೆ ಸಿಲುಕಿಕೊಂಡಿದ್ದೇವೆ. ಶೂಟಿಂಗ್ ಇಲ್ಲದೆ ಆರ್ಥಿಕ ಪರಿಸ್ಥಿತಿ ಕಷ್ಟವಾಗಿದೆ. ಇಂಥ ಸಮಯದಲ್ಲಿ ಯಾರೂ ಸಹಾಯಕ್ಕೆ ಬರುವುದಿಲ್ಲ. ಚಿತ್ರರಂಗದಲ್ಲಿ ನಾನು 48 ವರ್ಷ ಸೇವೆ ಸಲ್ಲಿಸಿದ್ದೇನೆ. ನಮ್ಮ ಚಲನಚಿತ್ರರಂಗದಲ್ಲಿ ಕೊಡುಗೈ ದಾನಿ ಎಂದು ಹೆಸರು ಮಾಡಿದ್ದು ಅಂಬರೀಶ್​ ಒಬ್ಬರೇ ಎಂದುಕೊಂಡಿದ್ದೆ. ಅವರನ್ನು ಬಿಟ್ಟರೆ ಭುವನ್ ಮುಂದಿನ ಸ್ಥಾನದಲ್ಲಿ ನಿಲ್ಲುತ್ತಾರೆ’ ಎಂದರು ಅವರು​.

‘ಹಿರಿಯ ನಟರಿಗೆ ಸಮಸ್ಯೆ ಆಗುತ್ತಿದೆ. ಸಹಾಯ ಮಾಡಬೇಕು ಎಂದು ಕೋರಿದೆ. ಅವರು ಏನುಬೇಕು ಹೇಳಿ ಎಂದರು. ಅವರು ಕೇಳಿದ್ದು ಇಷ್ಟೇ. ಔಷಧ ಬೇಕಾ, ಫುಡ್​ಕಿಟ್​ ಬೇಕಾ? ಏನುಬೇಕು ಕೇಳಿ ಎಂದರು. ಫುಡ್​ ಕಿಟ್​, ಮೆಡಿಸಿನ್​ ಕೊಟ್ಟರು. ಭುವನ್​ ನಿಜಕ್ಕೂ ಬಿಗ್​ ಬಾಸ್​. ಅವರ ಮಾಡಿದ್ದು ಸಹಾಯ ಕಣ್ಣಂಚಲಿ ನೀರು ತರಿಸಿತು. ನಾನು ಅವರಿಗೆ ಆಭಾರಿಯಾಗಿದ್ದೇನೆ’ ಎಂದರು ಅಮರನಾಥ್​ ಆರಾಧ್ಯ.

ಇದನ್ನೂ ಓದಿ: ಕೊರೊನಾದಿಂದ ಉಂಟಾದ ಭೀಕರ ಸ್ಥಿತಿ ಹಾಗೂ ಸರ್ಕಾರದ ನಿಷ್ಕಾಳಜಿಯನ್ನು ಇಂಚಿಂಚು ವಿವರಿಸಿದ ನಟ ಭುವನ್ ಪೊನ್ನಣ್ಣ