Adhvithi Shetty: ಮಾನಸಿಕ ಆರೋಗ್ಯ​ ಕಾಪಾಡಿಕೊಳ್ಳೋಕೆ ನಟಿ ಅದ್ವಿತಿ ಶೆಟ್ಟಿ ಕೊಟ್ರು ಟಿಪ್ಸ್​

ದೈಹಿಕ ಆರೋಗ್ಯದ ಜತೆಗೆ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ತುಂಬಾನೇ ಮುಖ್ಯ. ಹಾಗಾದರೆ, ಇದನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಟಿ ಅದ್ವಿತಿ ಶೆಟ್ಟಿ ಮಾತನಾಡಿದ್ದಾರೆ. ಇದರ ಜತೆಗೆ ಲಾಕ್​ಡೌನ್​ನಲ್ಲಿ ಏನೆಲ್ಲ ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್​ ಜತೆ ಮಾತನಾಡಿದ್ದಾರೆ.

Adhvithi Shetty: ಮಾನಸಿಕ ಆರೋಗ್ಯ​ ಕಾಪಾಡಿಕೊಳ್ಳೋಕೆ ನಟಿ ಅದ್ವಿತಿ ಶೆಟ್ಟಿ ಕೊಟ್ರು ಟಿಪ್ಸ್​
ಅದ್ವಿತಿ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: May 17, 2021 | 3:02 PM

ಕೊರೊನಾ ವೈರಸ್​ ಹೆಚ್ಚುತ್ತಿದೆ. ಇದರಿಂದ ಲಾಕ್​​ಡೌನ್​ ಘೋಷಣೆ ಮಾಡಲಾಗಿದೆ. ಹೀಗಾಗಿ, ಸಾಕಷ್ಟು ಜನರು ನಗರಗಳಲ್ಲಿ ಸಿಲುಕಿದ್ದಾರೆ. ಕೆಲವರಿಗೆ ಒಬ್ಬಂಟಿಯಾಗಿ ಇರುವ ಪರಿಸ್ಥಿತಿ ಬಂದಿದೆ. ಈ ಸಂದರ್ಭದಲ್ಲಿ ದೈಹಿಕ ಆರೋಗ್ಯದ ಜತೆಗೆ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ತುಂಬಾನೇ ಮುಖ್ಯ. ಹಾಗಾದರೆ, ಇದನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಟಿ ಅದ್ವಿತಿ ಶೆಟ್ಟಿ ಟಿವಿ9 ಕನ್ನಡ ಡಿಜಿಟಲ್​ ಜತೆ ಮಾತನಾಡಿದ್ದಾರೆ. ಇದರ ಜತೆಗೆ ಲಾಕ್​ಡೌನ್​ನಲ್ಲಿ ಏನೆಲ್ಲ ಮಾಡುತ್ತಿದ್ದೇನೆ ಎಂಬ ವಿವರವನ್ನು ನೀಡಿದ್ದಾರೆ. 

 ಈ ಬಾರಿ ಹೊರ ಹೋಗಿಲ್ಲ..

ಕಳೆದ ಲಾಕ್​ಡೌನ್​ ಸಂದರ್ಭದಲ್ಲಿ ಅದ್ವಿತಿ ಮನೆಯಿಂದ ಹೊರಬಂದು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ್ದರು. ಈ ಬಾರಿ ಅವರು ಮನೆಯಲ್ಲಿದ್ದುಕೊಂಡೇ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ‘ಕಳೆದ ಬಾರಿಯಂತೆ ಈ ಬಾರಿ ನಾನು ಹೊರಗೆ ಹೋಗ್ತಾ ಇಲ್ಲ. ಕಳೆದ ಬಾರಿ ಅಮ್ಮಾ ಮನೆಯಲ್ಲೇ ಇದ್ದರು. ಹೀಗಾಗಿ ಊಟಕ್ಕೆ ತೊಂದರೆ ಆಗ್ತಾ ಇರಲಿಲ್ಲ. ಆದರೆ, ಈಗ ಹಾಗಲ್ಲ. ಹೊರಗೆ ಹೋಗಿ ಬಂದು ಸ್ನಾನ ಮಾಡಿ, ಅಡುಗೆ ಮಾಡಿ ಊಟ ಮಾಡೋದು ಕಷ್ಟವಾಗುತ್ತದೆ. ಈ ಬಾರಿ ಪರಿಸ್ಥಿತಿ ಕೂಡ ತುಂಬಾ ಹದಗೆಟ್ಟಿದೆ. ಹೀಗಾಗಿ, ಮನೆಯಲ್ಲೇ ಕುಳಿತುಕೊಂಡು ಸಹಾಯ ಮಾಡುತ್ತಿದ್ದೇವೆ. ಯಾರಾದರೂ ಬೆಡ್​ ಬೇಕೆಂದು ಕಾಲ್​ ಮಾಡುತ್ತಾರೆ. ಬೇರೆಯವರಿಗೆ ಕೇಳಿ ಬೆಡ್​ ಒದಗಿಸುವ ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾರೆ ಅದ್ವಿತಿ.

ಫಿಟ್​ನೆಸ್​ ಕಡೆ ಗಮನ

ನಟ-ನಟಿಯರು ಫಿಟ್​ನೆಸ್​ಗೆ ಹೆಚ್ಚು ಗಮನ ಕೊಡುತ್ತಾರೆ. ಇದಕ್ಕೆ ಅದ್ವಿತಿ ಶೆಟ್ಟಿ ಕೂಡ ಹೊರತಾಗಿಲ್ಲ. ಅವರು ದೇಹವನ್ನು ಫಿಟ್​ ಆಗಿಟ್ಟುಕೊಳ್ಳಲು ವ್ಯಾಯಾಮ​ ಮಾಡುತ್ತಿದ್ದಾರೆ. ‘ಶೂಟಿಂಗ್​ ಇದ್ದಿದ್ದರಿಂದ ಬ್ಯುಸಿ ಇದ್ದೆ. ಹೀಗಾಗಿ, ಫಿಟ್​ನೆಸ್​ ಕಡೆ ಗಮನೆ ಕೊಡೋಕೆ ಆಗಿರಲಿಲ್ಲ. ಈಗ ಲಾಕ್​ಡೌನ್​ ಟೈಮ್​ನಲ್ಲಿ ಫಿಟ್​ನೆಸ್​ ಕಡೆ ಗಮನ ಕೊಡುತ್ತಾ ಇದ್ದೇನೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳೋಕೆ ಧ್ಯಾನ ಮಾಡುತ್ತಿದ್ದೇನೆ. ಫ್ಯಾನ್ಸ್​ಗಾಗಿ ವಿಡಿಯೋ ಮಾಡಿ ಹಾಕುತ್ತೇನೆ’ ಎಂದು ತಮ್ಮ ದಿನಚರಿ ಹೇಳಿಕೊಂಡರು ಅವರು.

 ಮಾನಸಿಕ ಆರೋಗ್ಯ ಮುಖ್ಯ

‘ನನಗೆ ಹಲ್ಲಿನ ಸರ್ಜರಿ ಆಯ್ತು. ಹೀಗಾಗಿ, 2 ತಿಂಗಳು ಮನೆಯಲ್ಲೇ ಇದ್ದೆ. ಮನೆಯಲ್ಲಿರುವ ಸಂದರ್ಭದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ತುಂಬಾ ಮುಖ್ಯ. ನಾನು ನಿತ್ಯ ಸಾಂಗ್​ ಕೇಳುತ್ತೇನೆ. ಧ್ಯಾನಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ವಿಡಿಯೋ ಮಾಡುತ್ತೇನೆ. ನನ್ನನ್ನು ನಾನು ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಅದ್ವಿತಿ.

‘ಕೊವಿಡ್​ ಸಂಕಷ್ಟದಲ್ಲಿ ಅನೇಕರು ಒಬ್ಬಂಟಿಯಾಗಿದ್ದಾರೆ. ಕೊರೊನಾ ಬಂದಿದ್ದರಿಂದ ಅನೇಕರು ಕ್ವಾರಂಟೈನ್​ ಆಗಿದ್ದಾರೆ. ಈ ಸಂದರ್ಭದಲ್ಲಿ ಮೆಂಟಲ್​ ಹೆಲ್ತ್​ ಮುಖ್ಯ. ನಮ್ಮ ಮನಸ್ಸನ್ನು ನಾವೇ ಸ್ಟ್ರಾಂಗ್​ ಮಾಡಿಕೊಳ್ಳಬೇಕು. ಹೀಗಾಗಿ, ಡಲ್​ ಆಗಿರುವ ಬದಲು ಖುಷಿಯಾಗಿರಬೇಕು. ಇದೊಂದು ಹಂತ ಅಷ್ಟೇ. ಏನೇ ಇದ್ದರೂ ಆಪ್ತರ ಜತೆ ಹಂಚಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ ಅದ್ವಿತಿ.

 ನಾವು ಲಕ್ಕಿ

‘ಹೊರಗೆ ಹೋಗೋದು ಅಂದರೆ ನಂಗೆ ಇಷ್ಟ. ಸರ್ಜರಿ ಹಾಗೂ ಶೂಟಿಂಗ್​ ಕಾರಣಕ್ಕೆ ಸುತ್ತಾಡೋಕೆ ಸಾಧ್ಯವಾಗಿರಲಿಲ್ಲ. ಹೋಟೆಲ್​ಗಳಿಗೆ ಹೋಗೋದನ್ನು ತುಂಬಾನೇ ಮಿಸ್​ ಮಾಡಿ ಕೊಳ್ತಾ ಇದೀನಿ. ಆದರೆ, ಹೊರಗೆ ತುಂಬಾ ಜನರು ಕಷ್ಟಪಡ್ತಾ ಇದಾರೆ. ಪರಿಸ್ಥಿತಿ ಬಿಗಡಾಯಿಸಿದೆ. ಈ ಸಂದರ್ಭದಲ್ಲಿ ನಾವು ಮನೆಯಲ್ಲಿ ಹಾಯಾಗಿದ್ದೇವೆ. ಇದಕ್ಕೆ ನಾವು ಲಕ್ಕಿ ಅನಿಸುತ್ತೆ’ ಎಂದಿದ್ದಾರೆ ಅದ್ವಿತಿ.

 ಶೂಟಿಂಗ್​ ಮಿಸ್ಸಿಂಗ್​

‘ನನ್ನ ಸಿನಿಮಾಗಳ ಶೂಟಿಂಗ್​ ಎಲ್ಲವೂ ಮುಗಿಯುವ ಹಂತದಲ್ಲಿತ್ತು. ಆದರೆ, ಕೊನೇ ಕ್ಷಣದಲ್ಲಿ ಹೀಗಾಯ್ತು. ಹೀಗಾಗಿ, ನನಗೆ ಬೇಸರ ಆಗ್ತಿದೆ. ಕೊವಿಡ್​ ಇಲ್ಲ ಎಂದರೆ ಎಲ್ಲಾ ಶೂಟಿಂಗ್​ ಮುಗಿದು ಹೋಗುತ್ತಿತ್ತು. ಈಗ ಕೊವಿಡ್​ನಿಂದ ಹೇರಿರೋ ಲಾಕ್​ಡೌನ್​ನಿಂದಾಗಿ ನಾನು ಸಿನಿಮಾ ಸೆಟ್​ ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಅವರು.

ಇದನ್ನೂ ಓದಿ: Miss Universe 2021 Winner: ಕೊವಿಡ್​ ಸಂಬಂಧಿತ ಪ್ರಶ್ನೆಗೆ ಉತ್ತರಿಸಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಆ್ಯಂಡ್ರಿಯಾ ಮೆಜಾ