Salman Khan: ಕಳಪೆ ವಿಮರ್ಶೆ ಸಿಕ್ಕರೂ ದಾಖಲೆ ಬರೆದ ‘ರಾಧೆ’; ಒಟಿಟಿಯಲ್ಲಿ ಸಲ್ಮಾನ್ ಖಾನ್ ಹೊಸ ರೆಕಾರ್ಡ್
ಕೊವಿಡ್ ಹೆಚ್ಚುತ್ತಿರುವುದರಿಂದ ದೇಶದ ಸಾಕಷ್ಟು ರಾಜ್ಯಗಳು ಲಾಕ್ಡೌನ್ ಘೋಷಣೆ ಮಾಡಿವೆ. ಹೀಗಾಗಿ, ಚಿತ್ರಮಂದಿರಗಳು ತೆರೆಯುತ್ತಿಲ್ಲ. ಈ ಕಾರಣಕ್ಕೆ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವ ನಿರ್ಧಾರವನ್ನು ‘ರಾಧೆ’ ಚಿತ್ರತಂಡ ತೆಗೆದುಕೊಂಡಿತ್ತು.
ಸಲ್ಮಾನ್ ಖಾನ್ ನಟನೆಯ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರ ಕಳಪೆ ಎನ್ನುವ ಪಟ್ಟಿಗೆ ಸೇರ್ಪಡೆ ಆಗಿದೆ. ಆದರೆ, ಈ ಚಿತ್ರ ದಾಖಲೆಗಳನ್ನು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಒಟಿಟಿಯಲ್ಲಿ ರಿಲೀಸ್ ಅಗಿದ್ದ ಈ ಚಿತ್ರ ಬರೋಬ್ಬರಿ ಒಂದೇ ದಿನ 42 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಈ ಮೂಲಕ ಒಟಿಟಿಯಲ್ಲಿ ಹೊಸ ದಾಖಲೆ ಬರೆದಿದೆ.
ಸಲ್ಮಾನ್ ಖಾನ್ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದರೆ ಅದಕ್ಕೊಂದು ದೊಡ್ಡ ಹೈಪ್ ಇರುತ್ತದೆ. ಈ ಮೊದಲು ತೆರೆಕಂಡ ಸಲ್ಮಾನ್ ಖಾನ್ ನಟನೆಯ ಸಾಕಷ್ಟು ಚಿತ್ರಗಳು ಮೊದಲ ದಿನವೇ 20-30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ, ಕೆಲವೇ ವಾರದಲ್ಲಿ ಅನಾಯಾಸವಾಗಿ 100 ಕೋಟಿ ಬಾಚಿಕೊಂಡಿದ್ದುಂಟು. ಬಾಕ್ಸ್ ಆಫೀಸ್ನಲ್ಲಿ ಹೊಸ ಹೊಸ ದಾಖಲೆ ಬರೆದಿರುವ ಸಲ್ಲು, ಈಗ ಒಟಿಟಿಗೆ ಕಾಲಿಟ್ಟು ಅಲ್ಲಿಯೂ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ.
ಕೊವಿಡ್ ಹೆಚ್ಚುತ್ತಿರುವದರಿಂದ ದೇಶದ ಸಾಕಷ್ಟು ರಾಜ್ಯಗಳು ಲಾಕ್ಡೌನ್ ಘೋಷಣೆ ಮಾಡಿವೆ. ಹೀಗಾಗಿ, ಚಿತ್ರಮಂದಿರಗಳು ತೆರೆಯುತ್ತಿಲ್ಲ. ಈ ಕಾರಣಕ್ಕೆ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವ ನಿರ್ಧಾರವನ್ನು ‘ರಾಧೆ’ ಚಿತ್ರತಂಡ ತೆಗೆದುಕೊಂಡಿತ್ತು. ಚಿತ್ರಮಂದಿರದ ಜತೆಗೆ ಜೀ5ನಲ್ಲೂ ‘ರಾಧೆ ರಿಲೀಸ್ ಆಗಿತ್ತು. ರಿಲೀಸ್ ಆದ ಒಂದೇ ದಿನಕ್ಕೆ ಈ ಸಿನಿಮಾ 42 ಲಕ್ಷ ಬಾರೀ ವೀಕ್ಷಣೆ ಕಂಡಿದೆ. ಜೀ5ನಲ್ಲಿ ಸಿನಿಮಾವೊಂದು ಇಷ್ಟು ದೊಡ್ಡಮಟ್ಟದಲ್ಲಿ ವೀಕ್ಷಣೆ ಕಂಡಿದ್ದು ಇದೇ ಮೊದಲು.
Wishing ev1 a v Happy Eid. Thank u all for the wonderful return gift by making Radhe the most watched film on day 1. The film industry would not survive without your love n support. Thank u ? pic.twitter.com/StP48A9NPq
— Salman Khan (@BeingSalmanKhan) May 14, 2021
ಇನ್ನು, ‘ರಾಧೆ’ ನೋಡೋಕೆ ಅಭಿಮಾನಿಗಳು ಮುಗಿಬಿದ್ದ ಪರಿಣಾಮ ಜೀ5 ಸರ್ವರ್ ತಾಂತ್ರಿಕ ತೊಂದರೆ ಅನುಭವಿಸಿತ್ತು. ಜೀ5ನಲ್ಲಿ ಮೇ13ರ ಮಧ್ಯಾಹ್ನ 12 ಗಂಟೆಗೆ ಈ ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ ಸುಮಾರು 12.5 ಲಕ್ಷ ಜನರು ಒಮ್ಮೆಲೇ ಲಾಗಿನ್ ಆಗಲು ಪ್ರಯತ್ನಿಸಿದ್ದರು. ಇದರ ಪರಿಣಾಮವಾಗಿ ಅನೇಕರಿಗೆ ಜೀ5 ವೆಬ್ಸೈಟ್ ಮತ್ತು ಆ್ಯಪ್ ಓಪನ್ ಆಗಿರಲಿಲ್ಲ. ಈ ಬಗ್ಗೆ ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ.
ಇನ್ನು, ‘ರಾಧೆ’ ಚಿತ್ರ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿಲ್ಲ. ಐಎಂಡಿಬಿ ‘ರಾಧೆ’ ಚಿತ್ರಕ್ಕೆ 10 ಅಂಕಕ್ಕೆ ಕೇವಲ 2.4 ರೇಟಿಂಗ್ ನೀಡಿದೆ. ಇದರಿಂದ ಸಲ್ಮಾನ್ ವೃತ್ತಿ ಜೀವನದ ಎರಡನೇ ಅತ್ಯಂತ ಕೆಟ್ಟ ಸಿನಿಮಾ ಎಂಬ ಹಣೆಪಟ್ಟಿ ‘ರಾಧೆ’ಗೆ ಸಿಕ್ಕಿದೆ. ರೇಸ್ 3 ಚಿತ್ರಕ್ಕೆ ಐಎಂಡಿಬಿ 1.9 ರೇಟಿಂಗ್ ನೀಡಿತ್ತು. ಇದು ಸಲ್ಲು ವೃತ್ತಿ ಜೀವನದ ಅತ್ಯಂತ ಕಳಪೆ ಚಿತ್ರವಾಗಿತ್ತು. ಈಗ ಈ ಸಾಲಿಗೆ ‘ರಾಧೆ’ ಕೂಡ ಸೇರ್ಪಡೆ ಆಗಿದೆ.
ಇದನ್ನೂ ಓದಿ: Radhe Movie Review: ‘ರಾಧೆ’ ನೋಡಿ ಏನು ಹೇಳಿದ್ರು ಸಲ್ಮಾನ್ ಖಾನ್ ಫ್ಯಾನ್ಸ್? ಇಲ್ಲಿದೆ ಟ್ವಿಟರ್ ವಿಮರ್ಶೆ
Salman Khan: ನೆಲಕಚ್ಚಿದ ರಾಧೆ; ಸಲ್ಮಾನ್ ವೃತ್ತಿಜೀವನದಲ್ಲೇ ಅತ್ಯಂತ ಕಳಪೆ ಸಿನಿಮಾ