Samantha Akkineni: ಮಾದಕ ದೃಶ್ಯದಲ್ಲಿ ಸಮಂತಾ ಅಕ್ಕಿನೇನಿ? ಫ್ಯಾಮಿಲಿ ಮ್ಯಾನ್ – 2ನಲ್ಲಿ ಬದಲಾಯ್ತು ನಟಿಯ ಅವತಾರ
Family Man Season 2 Release Date: ‘ದಿ ಫ್ಯಾಮಿಲಿ ಮ್ಯಾನ್’ ಮೊದಲ ಸೀಸನ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಸೀಸನ್ 2 ಬರುತ್ತಿದೆ. ಈ ವೆಬ್ ಸೀರಿಸ್ನಲ್ಲಿ ಸಮಂತಾ ಕೂಡ ನಟಿಸುತ್ತಿದ್ದಾರೆ.

ಹೀರೋಯಿನ್ಗಳು ಮದುವೆ ಆದ ನಂತರದಲ್ಲಿ ಚಿತ್ರರಂಗ ತೊರೆದ ಸಾಕಷ್ಟು ಉದಾಹರಣೆ ಇದೆ. ವಿವಾಹದ ನಂತರ ಚಿತ್ರರಂಗದಲ್ಲಿದ್ದರೂ ಮಡಿವಂತಿಕೆ ಕಾಪಾಡಿಕೊಂಡು, ಮಾದಕ ಪಾತ್ರಗಳಲ್ಲಿ ನಟಿಸೋಕೆ ಹಿಂಜರಿಯುತ್ತಾರೆ. ಆದರೆ, ನಟಿ ಸಮಂತಾ ಅಕ್ಕಿನೇನಿ ಹಾಗಲ್ಲ. ಮದುವೆ ನಂತರವೂ ಅವರು ಸಾಕಷ್ಟು ಒಳ್ಳೆಯ ಸಿನಿಮಾ ಆಫರ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ‘ದಿ ಫ್ಯಾಮಿಲಿ ಮ್ಯಾನ್-2’ ವೆಬ್ ಸೀರಿಸ್ಗಾಗಿ ಅವರು ಮಾದಕ ಅವತಾರ ತಾಳಿದ್ದಾರಂತೆ.
‘ದಿ ಫ್ಯಾಮಿಲಿ ಮ್ಯಾನ್’ ಮೊದಲ ಸೀಸನ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಸೀಸನ್ 2 ಬರುತ್ತಿದೆ. ಈ ವೆಬ್ ಸೀರಿಸ್ನಲ್ಲಿ ಸಮಂತಾ ಕೂಡ ನಟಿಸುತ್ತಿದ್ದಾರೆ. ಸೀರಿಸ್ನ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರವೇ ರಿಲೀಸ್ ಆಗುವ ನಿರೀಕ್ಷೆ ಇದೆ. ಹೀಗಿರುವಾಗಲೇ ಈ ತಂಡದಿಂದ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.
ಈ ವೆಬ್ ಸೀರಿಸ್ನ ನಿರ್ದೇಶಕರಾದ ರಾಜ್ ಮತ್ತು ಡಿ.ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಸಮಂತಾ ‘ದಿ ಫ್ಯಾಮಿಲಿ ಮ್ಯಾನ್-2’ನಲ್ಲಿ ತುಂಬಾನೇ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರದ ಬಗ್ಗೆ ವಿವರಿಸುವುದಕ್ಕೂ ಮೊದಲು ಅವರು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದೇ ಭಾವಿಸಿದ್ದೆವು. ಆದರೆ, ಅವರು ಪಾತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ’ ಎಂದು ಅವರು ವಿವರಣೆ ನೀಡಿದ್ದಾರೆ.
‘ದಿ ಫ್ಯಾಮಿಲಿ ಮ್ಯಾನ್ 2’ ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಈ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಮೊದಲ ಸೀಸನ್ ದೊಡ್ಡಮಟ್ಟದಲ್ಲಿ ಹಿಟ್ ಆದ್ದರಿಂದ ಎರಡನೇ ಸೀಸನ್ಮೇಲೆ ಹೆಚ್ಚು ನಿರೀಕ್ಷೆ ಇದೆ. ಸದ್ಯ ವೆಬ್ ಸೀರಿಸ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಸಮಂತಾ ಮಾದಕ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಮೊದಲು ಐಶ್ವರ್ಯಾ ರೈ ಬಚ್ಚನ್ ಮದುವೆ ಆದ ನಂತರದಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಅವರ ಅಭಿಮಾನಿಗಳಿಂದಲೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ನಂತರ ಅವರು ಮರಳಿ ಆ ಸಾಹಸಕ್ಕೆ ಮುಂದಾಗಿರಲಿಲ್ಲ. ಈಗ ಸಮಂತಾ ಅಂತದ್ದೇ ಪಾತ್ರ ಕೈಗೆತ್ತಿಕೊಂಡಿದ್ದು, ಅದನ್ನು ಹೇಗೆ ನಿರ್ವಹಿಸಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: Samantha Akkineni : ಆಟೋ ಚಾಲಕಿ ಕವಿತಾ ಗೆ 12 ಲಕ್ಷ ರೂ. ಕಾರು ಕೊಡಿಸಿದ ನಟಿ ಸಮಂತಾ…!
Samantha Akkineni Birthday: ಸಮಂತಾ ಅಕ್ಕಿನೇನಿ ನಟನೆಯ ಈ ಐದು ಚಿತ್ರಗಳನ್ನು ಮಿಸ್ ಮಾಡಿಕೊಳ್ಳದೇ ನೋಡಿ