AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೂಗುದೀಪ ಶ್ರೀನಿವಾಸ್​, ದರ್ಶನ್​, ದಿನಕರ್​ ಬಗ್ಗೆ ಮೀನಾ ತೂಗುದೀಪ ಅಪರೂಪದ ಮಾತುಗಳು

Meena Thoogudeepa: ಹಲವು ವರ್ಷಗಳ ಹಿಂದಿನ ಒಂದು ವಿಡಿಯೋ ಸಂದರ್ಶನದ ತುಣುಕನ್ನು ನಟ ರಘುರಾಮ್​ ಅವರು ಈಗ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಕೆಲವು ಅಪರೂಪದ ವಿಚಾರಗಳ ಬಗ್ಗೆ ಮೀನಾ ಮಾತನಾಡಿದ್ದರು.

ತೂಗುದೀಪ ಶ್ರೀನಿವಾಸ್​, ದರ್ಶನ್​, ದಿನಕರ್​ ಬಗ್ಗೆ ಮೀನಾ ತೂಗುದೀಪ ಅಪರೂಪದ ಮಾತುಗಳು
ದಿನಕರ್ - ಮೀನಾ ತೂಗುದೀಪ - ದರ್ಶನ್
ಮದನ್​ ಕುಮಾರ್​
| Edited By: |

Updated on: May 15, 2021 | 5:51 PM

Share

ತೂಗುದೀಪ ಶ್ರೀನಿವಾಸ್​ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅವರ ನಂತರದಲ್ಲಿ ಪುತ್ರ ದರ್ಶನ್​ ಸಹ ದೊಡ್ಡ ಸ್ಟಾರ್​ ನಟನಾಗಿ ಬೆಳೆದರು. ದರ್ಶನ್​ ಸಹೋದರ ದಿನಕರ್​ ತೂಗುದೀಪ ಕೂಡ ನಿರ್ದೇಶಕನಾಗಿ ಒಳ್ಳೆಯ ಖ್ಯಾತಿ ಗಳಿಸಿದರು. ಈ ಮೂವರ ಬೆನ್ನ ಹಿಂದೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದವರು ದರ್ಶನ್​ ತಾಯಿ ಮೀನಾ ತೂಗುದೀಪ. ಹಲವು ವರ್ಷಗಳ ಹಿಂದೆಯೇ ಮಾಡಲಾದ ಅವರ ಒಂದು ವಿಡಿಯೋ ಸಂದರ್ಶನದ ತುಣುಕನ್ನು ನಟ ರಘುರಾಮ್​ ಅವರು ಈಗ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಕೆಲವು ಅಪರೂಪದ ವಿಚಾರಗಳ ಬಗ್ಗೆ ಮೀನಾ ಮಾತನಾಡಿದ್ದರು.

‘ಶ್ರೀನಿವಾಸ್​ ಅವರ ಪತ್ನಿಯಾಗಿ ನನಗೆ ಹೆಚ್ಚು ಗೌರವ ಸಿಗುತ್ತಿತ್ತು. ನಂತರ ದರ್ಶನ್​ ಹೀರೋ ಆದ. ಅವನು ಹೀರೋ ಆಗಬೇಕು ಎಂಬುದೇ ನನ್ನ ಆಸೆ ಆಗಿತ್ತು. ನಮ್ಮ ಯಜಮಾನ್ರು ತೀರಿಕೊಂಡ ಬಳಿಕ ನಮ್ಮ ಮನೆಯಲ್ಲಿ ಚಿತ್ರರಂಗದ ಮಾತೇ ಇರಲಿಲ್ಲ. ಚಿತ್ರರಂಗದ ಅನ್ನವನ್ನೇ ತುಂಬು ಬೆಳೆದವಳು ನಾನು. ತಂದೆಯ ಹೆಸರನ್ನು ಮಗ ಉಳಿಸಬೇಕು. ಶ್ರೀನಿವಾಸ ತೂಗುದೀಪ ಅವರ ಮಗ ಎನ್ನುವ ಹೆಸರು ಚಿತ್ರರಂಗದಲ್ಲಿ ಬರಲೇಬೇಕು ಎಂಬುದು ನನ್ನ ಆಸೆ ಆಗಿತ್ತು. ಅದಕ್ಕೋಸ್ಕರವೇ ನಾನು ಪಣತೊಟ್ಟಿದ್ದೆ’ ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ ಮೀನಾ.

‘ಶ್ರೀನಿವಾಸ್​ ಅವರು ಇದ್ದಾಗಲೇ ದರ್ಶನ್​ ನೀನಾಸಂಗೆ ಹೋಗಿದ್ದ. ಒಬ್ಬ ತಾಯಿಯಾಗಿ ನಾನು ಅವನಿಗಾಗಿ ಮಾಡಬಹುದಾದ ಎಲ್ಲ ಕರ್ತವ್ಯ ಮಾಡಿದ್ದೇನೆ. ನಂತರ ದಿನಕರ್​ ಕೂಡ ಅದೇ ರೀತಿ ಹೆಸರು ಮಾಡಬೇಕು ಅಂತ ಕನಸು ಕಂಡೆ. ಚಿಕ್ಕ ವಯಸ್ಸಿನಿಂದಲೇ ಅವನಿಗೆ ಕಥೆ ಬರೆಯುವ ಆಸಕ್ತಿ ಇತ್ತು. ನಾನು ಗಮನ ಕೊಟ್ಟಿರಲಿಲ್ಲ. ಸರ್ಕಾರಿ ಕೆಲಸ ಸಿಗಲಿ ಎಂದು ಬಯಸಿದ್ದೆ. ಆದರೆ ಅವನು ಜೊತೆ ಜೊತೆಯಲಿ ಸಿನಿಮಾ ಮಾಡಿ ಯಶಸ್ವಿಯಾದ. ನಾನು ನಿರ್ಮಾಪಕಿ ಆದೆ. ತೂಗುದೀಪ ಪ್ರೊಡಕ್ಷನ್​ ಮೂಲಕ ಅವನು ತಂದೆಯ ಹೆಸರನ್ನು ಚಿರಾಯುವಾಗಿ ಉಳಿಸಿದ್ದಾನೆ’ ಎಂದು ಮಕ್ಕಳ ಬಗ್ಗೆ ಮೀನಾ ಹೆಮ್ಮೆಯಿಂದ ಮಾತನಾಡಿದ್ದರು.

ತೂಗುದೀಪ ಶ್ರೀನಿವಾಸ್​ ಅವರ 2 ಕಿಡ್ನಿ ವೈಫಲ್ಯವಾದಾಗ ಮೀನಾ ಅವರು ಒಂದು ಕಿಡ್ನಿ ನೀಡಿದ್ದರು. ಆ ಘಟನೆಯ ಬಗ್ಗೆಯೂ ಮೀನಾ ಆ ಸಂದರ್ಶನದಲ್ಲಿ ಮಾತನಾಡಿದ್ದರು. ‘ಅದು ನನಗೆ ಈಗ ಪ್ರತಿ ದಿನ ನೆನಪಾಗುತ್ತದೆ. ಕಿಡ್ನಿ ಕೊಟ್ಟ ಮೇಲೆ ಒಂದು ವರ್ಷ ಅವರು ನಮ್ಮ ಜೊತೆ ಚೆನ್ನಾಗಿ ಇದ್ದರು. ನಾನು ಕಿಡ್ನಿ ಕೊಡುವಾಗ ನಮ್ಮ ಮೂರು ಮಕ್ಕಳಿಗೆ ತುಂಬ ಬೇಜಾರಾಗಿತ್ತಂತೆ. ಕಿಡ್ನ ಕೊಟ್ಟಮೇಲೆ ನನಗೆ ಪ್ರಜ್ಞೆ ಬಂದಿದ್ದೇ ಎರಡು ದಿನದ ಮೇಲೆ. ನಾವು ಒಂದೇ ಆಸ್ಪತ್ರೆಯಲ್ಲಿ ಇದ್ದರೂ ಕೂಡ ಅವರು ನನಗೆ ಒಂದು ಲೆಟರ್​ ಬರೆದಿದ್ದರು. ನಂತರ ಚಿತ್ರರಂಗದ ಎಲ್ಲರಿಗೂ ನನ್ನ ಬಗ್ಗೆ ಹೇಳುತ್ತಿದ್ದರು. ನನಗೆ ಪುನರ್​ಜನ್ಮ ಕೊಟ್ಟ ದೇವತೆ ಎಂದು ಹೇಳುತ್ತಿದ್ದರು’ ಎಂಬುದು ಪತಿಯ ಬಗ್ಗೆ ಮೀನಾ ಅವರ ಭಾವುಕ ಮಾತುಗಳು.

ಇದನ್ನೂ ಓದಿ:

ಅಂದು ಅಣ್ಣಾವ್ರ ಜತೆ ತೂಗುದೀಪ ಶ್ರೀನಿವಾಸ್​; ಇಂದು ಅಪ್ಪು ಜತೆ ದಿನಕರ್​ ತೂಗುದೀಪ! ಇಲ್ಲಿದೆ ಗುಡ್​ ನ್ಯೂಸ್​

‘ನರಮನ್ಸ ನರಮನ್ಸ ಬದುಕೋದು ಹೀಗಲ್ಲ’; ಕೊವಿಡ್​ ದುಸ್ಥಿತಿಯಲ್ಲಿ ವೈರಲ್​ ಆಗುತ್ತಿರುವ ದರ್ಶನ್​ ಹಾಡಿನ ವಿಶೇಷ ಏನು?

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ