ವಿಚಿತ್ರ ಕಾಯಿಲೆ ಹಾಗೂ ನಿರುದ್ಯೋಗಕ್ಕೆ ರೋಸಿಹೋದ ಕಿರುತೆರೆ ನಟಿ; ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ

ಸುಮೊನಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಎಲ್ಲವನ್ನೂ ವಿವರಿಸಿದ್ದಾರೆ. ನನಗೆ ನಿರುದ್ಯೋಗ ತುಂಬಾನೇ ಕಾಡುತ್ತಿದೆ ಎಂದಿದ್ದಾರೆ.

ವಿಚಿತ್ರ ಕಾಯಿಲೆ ಹಾಗೂ ನಿರುದ್ಯೋಗಕ್ಕೆ ರೋಸಿಹೋದ ಕಿರುತೆರೆ ನಟಿ; ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ
ಸುಮೋನಾ ಚಕ್ರವರ್ತಿ
Follow us
ರಾಜೇಶ್ ದುಗ್ಗುಮನೆ
|

Updated on: May 15, 2021 | 9:55 PM

ಸೆಲೆಬ್ರಿಟಿಗಳು ಎಂದಾಕ್ಷಣ ಅವರ ಬಳಿ ಸಾಕಷ್ಟು ಹಣ ಇರುತ್ತದೆ. ಅವರ ಲೈಫ್​ ಬಿಂದಾಸ್​ ಆಗಿರುತ್ತದೆ ಎಂಬುದು ಅನೇಕರ ನಂಬಿಕೆ. ಆದರೆ, ಎಲ್ಲಾ ಸೆಲೆಬ್ರಿಟಿಗಳ ಲೈಫ್​ ಅದೇ ರೀತಿ ಇರುವುದಿಲ್ಲ ಎಂಬುದು ಅನೇಕರಿಗೆ ಗೊತ್ತಿರುವುದಿಲ್ಲ. ಈಗ ಇದಕ್ಕೆ ತಾಜಾ ಉದಾಹರಣೆ ಹಿಂದಿ ಕಿರುತೆರೆ ನಟಿ ಸುಮೋನಾ ಚಕ್ರವರ್ತಿ. ‘ಕಪಿಲ್​ ಶರ್ಮಾ ಶೋ’ ಮೂಲಕ ಹೆಚ್ಚು ಪರಿಚಿತರಾದ ಇವರಿಗೆ ನಿರುದ್ಯೋಗ ಕಾಡುತ್ತಿದೆ. 2011ರಿಂದ ಎಂಡೊಮೆಟ್ರಿಯೊಸಿಸ್ ಹೆಸರಿನ ಅಪರೂಪದ ರೋಗದಿಂದ ಬಳಲುತ್ತಿರುವ ಬಗ್ಗೆ ಅವರು ಅಳಲು ತೋಡಿಕೊಂಡಿದ್ದಾರೆ.

ಸುಮೊನಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಎಲ್ಲವನ್ನೂ ವಿವರಿಸಿದ್ದಾರೆ. ‘ನಾನು ನಿರುದ್ಯೋಗಿ ಇರಬಹುದು ಮತ್ತು ಸದ್ಯ, ನನ್ನ ಕುಟುಂಬವನ್ನು ನೋಡಿಕೊಳ್ಳಲು ಆಗುತ್ತಿರುಬಹುದು. ಆದರೆ, ಕೆಲವೊಮ್ಮೆ ನನಗೆ ತಪ್ಪಿತಸ್ಥ ಭಾವನೆ ಕಾಡುತ್ತದೆ. ನನಗಿರುವ ಸಮಸ್ಯೆಯಿಂದ ಮೂಡ್​ ಸ್ವಿಂಗ್​ ಆಗುತ್ತದೆ. ನಾನು ಎಂಡೊಮೆಟ್ರಿಯೊಸಿಸ್ ರೋಗದ ನಾಲ್ಕನೇ ಹಂತದಲ್ಲಿದ್ದೇನೆ. ಕಳೆದ 10 ವರ್ಷದಿಂದ ಇದೇ ರೋಗದಿಂದ ಬಳಲುತ್ತಿದ್ದೇನೆ. ಉತ್ತಮ ಆಹಾರ ಅಭ್ಯಾಸ, ವ್ಯಾಯಾಮ ಹಾಗೂ ಒತ್ತಡಕ್ಕೆ ಒಳಗಾಗದೆ ಇರುವುದು ನನ್ನ ಆರೋಗ್ಯವನ್ನು ಕಾಪಾಡುತ್ತಿದೆ’ ಎಂದಿದ್ದಾರೆ ಅವರು.

ಕೊರೊನಾ ಕಾರಣಕ್ಕೆ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇದರಿಂದ ಸುಮೊನಾಗೆ ಸಮಸ್ಯೆ ಉಂಟಾಗುತ್ತಿದೆಯಂತೆ. ‘ಲಾಕ್‌ಡೌನ್​ನಿಂದ ನನಗೆ ಭಾವನಾತ್ಮಕವಾಗಿ ಕಷ್ಟವಾಗುತ್ತಿದೆ. COVID-19 ನಿಂದ ಉಂಟಾದ ಲಾಕ್‌ಡೌನ್‌ನಲ್ಲಿ ನಾನು ಕಳೆದ ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ಯಾವುದೇ ಕೆಲಸವಿಲ್ಲದಿದ್ದರೂ, ನಿತ್ಯದ ಖರ್ಚಿಗೆ ಸಾಕಾಗುವಷ್ಟು ಹಣವಿದೆ ಎಂದಿದ್ದಾರೆ.

ಸುಮೋನಾ ಇತ್ತೀಚೆಗೆ ಅಂಡಮಾನ್​-ನಿಕೋಬಾರ್​ ಐಸ್​ಲೆಂಡ್​ಗೆ ತೆರಳಿದ್ದರು. ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದರು. ಈ ಫೋಟೋ ಸಾಕಷ್ಟು ವೈರಲ್​ ಆಗಿತ್ತು. ಕಪಿಲ್​ ಶರ್ಮಾ ನಡೆಸಿಕೊಡುವ ‘ಕಪಿಲ್​ ಶರ್ಮಾ ಶೋ’ನಲ್ಲಿ ಸುಮೋನಾ ಕಾಣಿಸಿಕೊಂಡಿದ್ದರು. ಅವರಿಗೆ ಒಳ್ಳೆಯ ಫೇಮ್​ ತಂದುಕೊಟ್ಟಿತ್ತು. ‘ಬಡೇ ಅಚ್ಚೇ ಲಗ್ತೇ ಹೈ’ ಸೇರಿ ಸಾಕಷ್ಟು ಧಾರಾವಾಹಿಗಳಲ್ಲಿ ಸುಮೋನು ನಟಿಸಿದ್ದಾರೆ.

ಇದನ್ನೂ ಓದಿ: Remdesivir: ರೆಮಿಡಿಸಿವರ್ ಇಂಜೆಕ್ಷನ್​ಗೆ ಬಾಲಿವುಡ್ ಕೊರಿಯೋಗ್ರಾಫರ್​ ಹೆಸರು; ಫನ್ನಿ ವಿಡಿಯೋ ವೈರಲ್​

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್