ಬಿಗ್​ ಬಾಸ್​ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಈ ಮೂವರಿಗೆ ಪ್ರವೇಶವಿಲ್ಲ; ಶೋ ಮುಗಿದರೂ ಗುಂಪುಗಾರಿಕೆ ನಿಂತಿಲ್ಲ ಯಾಕೆ?

Bigg Boss Kannada: ಬಿಗ್​ ಬಾಸ್​ ಮನೆಯಿಂದ ಆಚೆ ಬಂದ ಬಳಿಕ ವಾಟ್ಸ್​ಆ್ಯಪ್​​ ಗ್ರೂಪ್​ ಕ್ರಿಯೇಟ್​ ಮಾಡಲಾಗಿದೆ. ಅದರಲ್ಲಿ ತಮಗೆ ಬೇಕಾದವರನ್ನು ಮಾತ್ರ ಸೇರಿಸಿಕೊಂಡು ಗುಂಪುಗಾರಿಕೆ ಮಾಡಲಾಗಿದೆ. ಆ ಬಗ್ಗೆ ಮೂವರು ಸ್ಪರ್ಧಿಗಳು ಈಗ ಮಾತನಾಡಿದ್ದಾರೆ.

ಬಿಗ್​ ಬಾಸ್​ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಈ ಮೂವರಿಗೆ ಪ್ರವೇಶವಿಲ್ಲ; ಶೋ ಮುಗಿದರೂ ಗುಂಪುಗಾರಿಕೆ ನಿಂತಿಲ್ಲ ಯಾಕೆ?
ಪ್ರಶಾಂತ್​ ಸಂಬರಗಿ - ಪ್ರಿಯಾಂಕಾ ತಿಮ್ಮೇಶ್​- ಚಕ್ರವರ್ತಿ ಚಂದ್ರಚೂಡ್​
Follow us
ಮದನ್​ ಕುಮಾರ್​
|

Updated on: May 16, 2021 | 8:38 AM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಸ್ಪರ್ಧಿಯಾಗಿದ್ದ ಪ್ರಶಾಂತ್​ ಸಂಬರಗಿ ಅತಿ ಹೆಚ್ಚಾಗಿ ಬಳಸಿದ ಪದ ಎಂದರೆ ಅದು ‘ಗುಂಪುಗಾರಿಕೆ’. ಮನೆಯಲ್ಲಿ ಎಲ್ಲರೂ ಒಂದಾಗಿ ಇರುವ ಬದಲು ತಮಗೆ ಬೇಕಾದವರ ಜೊತೆ ಗುಂಪು ಕಟ್ಟಿಕೊಂಡು ಇರಲಾಗುತ್ತಿದೆ ಎಂದು ಅವರು ಆರಂಭದಿಂದಲೇ ಧ್ವನಿ ಎತ್ತಿದ್ದರು. ಈಗ ಕೊರೊನಾ ವೈರಸ್​ನಿಂದಾದ ಲಾಕ್​ಡೌನ್​ ಕಾರಣಕ್ಕೆ ಬಿಗ್​ ಬಾಸ್​ ಶೋ ಮುಗಿದಿದೆ. ಅರ್ಧದಲ್ಲೇ ಎಲ್ಲ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಅಚ್ಚರಿ ಎಂದರೆ ಶೋ ಮುಗಿಸಿ ಹೊರಬಂದ ಬಳಿಕವೂ ಗುಂಪುಗಾರಿಕೆ ಮುಂದುವರಿಯುತ್ತಿದೆ. ಸ್ಪರ್ಧಿಗಳೆಲ್ಲ ಸೇರಿಕೊಂಡು ವಾಟ್ಸ್​ಆ್ಯಪ್​​​ ಗ್ರೂಪ್ ಮಾಡಿಕೊಂಡಿದ್ದಾರೆ. ಆದರೆ ಆ ಗ್ರೂಪ್​ಗಳಲ್ಲಿ ಕೆಲವರನ್ನು ಸೇರಿಸಿಕೊಂಡಿಲ್ಲ ಎಂಬ ವಿಚಾರ ಈಗ ತಿಳಿದು ಬಂದಿದೆ.

ಬಿಗ್​ ಬಾಸ್​ ಮುಗಿದ ಬಳಿಕ ಪ್ರತಿದಿನ ಕಲರ್ಸ್​ ಕನ್ನಡ ವಾಹಿನಿಯ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಸ್ಪರ್ಧಿಗಳು ಲೈವ್ ಬಂದು ಜನರ ಜೊತೆ ಮಾತನಾಡುತ್ತಿದ್ದಾರೆ. ಶನಿವಾರ (ಮೇ 15) ಪ್ರಿಯಾಂಕಾ ತಿಮ್ಮೇಶ್​, ಪ್ರಶಾಂತ್​ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿದ್ದರು. ಆಗ ಈ ಗುಂಪುಗಾರಿಕೆಯ ವಿಚಾರವನ್ನು ಬಯಲು ಮಾಡಿದ್ದಾರೆ.

ಈ ಬಗ್ಗೆ ಮಾತು ಆರಂಭಿಸಿದ್ದು ಪ್ರಶಾಂತ್​ ಸಂಬರಗಿ​. ‘ನಮ್ಮನ್ನು ಇಲ್ಲಿ ಒಂದು ಗ್ಯಾಂಗ್​ ಮಾಡಿ ಹಾಕಿದ್ದಾರೆ’ ಎಂದು ಅವರು ಹೇಳಿದ್ದಕ್ಕೆ ‘ಯಾವ ಗ್ಯಾಂಗ್​’ ಎಂದು ಚಂದ್ರಚೂಡ್​ ಪ್ರಶ್ನಿಸಿದರು. ‘ಬಿಗ್​ ಬಾಸ್​ ಮನೆಯಿಂದ ಆಚೆ ಬಂದ ಬಳಿಕ ವಾಟ್ಸ್​ಆ್ಯಪ್​​​​ ಗ್ರೂಪ್​ ಕ್ರಿಯೇಟ್​ ಮಾಡಲಾಗಿದೆ. ಅದರಲ್ಲಿ ನಾನು-ನೀನು ಇಲ್ಲ. ಇದೇ ಗುಂಪುಗಾರಿಕೆ’ ಎಂದರು ಪ್ರಶಾಂತ್​. ‘ನಾನೂ ಆ ಗ್ರೂಪ್​ನಲ್ಲಿ ಇಲ್ಲ. ನಾನು ಯಾವಾಗಲೂ ಸಿಂಗಲ್​’ ಎಂದು ಪ್ರಿಯಾಂಕಾ ಹೇಳಿದರು.

‘ಮಜಾ ಏನೆಂದರೆ ನಮ್ಮ ಜೊತೆಗಿದ್ದ ಬಿಗ್​ ಬಾಸ್​ ಸ್ಪರ್ಧಿಗಳ ಎರಡು ವಾಟ್ಸ್​ಆ್ಯಪ್​​​​ ಗ್ರೂಪ್​ ಆಗಿದೆ. ಎರಡೂ ಗ್ರೂಪ್​​ನಲ್ಲಿ ನಮ್ಮನ್ನು ಸೇರಿಸಬಾರದು ಎಂದು ಚರ್ಚೆ ಆಗುತ್ತಿದೆಯಂತೆ. ಯಾರಿಗೆ ಯಾರ ಜೊತೆ ಮಾತನಾಡಬೇಕು ಎಂಬುದು ಅವರ ಆಯ್ಕೆ. ನಾನೇನಾದರೂ ಹೊರಬಂದು ಫೋನ್​ ಮಾಡಿ ಮಾತನಾಡಿದ್ದರೆ ಅದು ಪ್ರಿಯಾಂಕಾ ಜೊತೆ ಮಾತ್ರ’ ಎಂದು ಚಕ್ರವರ್ತಿ ಚಂದ್ರಚೂಡ್​ ಹೇಳಿದರು. ಈ ಗುಂಪುಗಾರಿಕೆ ಬಗ್ಗೆ ಇನ್ನುಳಿದ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆಯಲ್ಲಿ ತುಪ್ಪದ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ ಪ್ರಶಾಂತ್​ಗೆ ಗೆಳೆಯರು ಕೊಟ್ರು ಅಚ್ಚರಿಯ ಗಿಫ್ಟ್​

‘ನಾನು ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದವನು’; ಕೊನೆಯ ದಿನ ಅಚ್ಚರಿಯ ವಿಚಾರ ಬಿಚ್ಚಿಟ್ಟ ಪ್ರಶಾಂತ್​ ಸಂಬರಗಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್