AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದವನು’; ಕೊನೆಯ ದಿನ ಅಚ್ಚರಿಯ ವಿಚಾರ ಬಿಚ್ಚಿಟ್ಟ ಪ್ರಶಾಂತ್​ ಸಂಬರಗಿ

|ಕೊರೊನಾ ವೈರಸ್ ಎರಡನೇ ಅಲೆ ಜೋರಾಗಿದೆ. ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತಿದೆ. ಅಂತಿಮ ದಿನದ ಎಪಿಸೋಡ್ಗಳನ್ನು ಮೇ 11 ಹಾಗೂ 12ರಂದು ಪ್ರಸಾರ ಮಾಡಲಾಗಿದೆ.

‘ನಾನು ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದವನು’; ಕೊನೆಯ ದಿನ ಅಚ್ಚರಿಯ ವಿಚಾರ ಬಿಚ್ಚಿಟ್ಟ ಪ್ರಶಾಂತ್​ ಸಂಬರಗಿ
ಪ್ರಶಾಂತ್ ಸಂಬರಗಿ
ರಾಜೇಶ್ ದುಗ್ಗುಮನೆ
|

Updated on: May 12, 2021 | 9:57 PM

Share

ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ತಮ್ಮ ವಿಚಿತ್ರ ವಾದದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅನೇಕ ವಿಚಾರಗಳಲ್ಲಿ ಅವರು ಮನೆಯ ಸ್ಪರ್ಧಿಗಳ ಜತೆ ವಾದಕ್ಕೆ ಇಳಿದಿದ್ದಿದೆ. ಕೊನೆಯ ದಿನ ಪ್ರಶಾಂತ್ ಸಂಬರಗಿ ಅಚ್ಚರಿಯ ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ. ಈ ವಿಚಾರ ಕೇಳಿ ಮನೆಯವರು ಅಚ್ಚರಿಪಟ್ಟಿದ್ದಾರೆ. | ಕೊರೊನಾ ವೈರಸ್ ಎರಡನೇ ಅಲೆ ಜೋರಾಗಿದೆ. ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತಿದೆ. ಅಂತಿಮ ದಿನದ ಎಪಿಸೋಡ್​​ಗಳನ್ನು ಮೇ 11 ಹಾಗೂ 12ರಂದು ಪ್ರಸಾರ ಮಾಡಲಾಗಿದೆ. ಕೊನೆಯ ದಿನ ಎಲ್ಲಾ ಸ್ಪರ್ಧಿಗಳು ತುಂಬಾನೇ ಆಪ್ತವಾಗಿದ್ದರು. ಈ ವೇಳೆ ಪ್ರಶಾಂತ್ ಸಂಬರಗಿ ತಮ್ಮ ಕುಟುಂಬದ ಹಿನ್ನೆಲೆ ಬಗ್ಗೆ ಹೇಳಿಕೊಂಡಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ಕುಟುಂಬದವರು ಎಂದು ಪ್ರಶಾಂತ್ ಹೇಳಿಕೊಂಡಿದ್ದಾರೆ.

‘ಮನೆಯ ಸ್ಪರ್ಧಿಗಳು ಊಟಕ್ಕೆ ಕೂತಿದ್ದರು. ಈ ವೇಳೆ ಪ್ರಶಾಂತ್ ಮಾತು ಆರಂಭಿಸಿದರು. ನಾನು ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದವನು. ರಾಣಿ ಚೆನ್ನಮ್ಮ ನನ್ನ ಅಜ್ಜಿಯ ಅಜ್ಜಿ’ ಎಂದರು ಅವರು. ಈ ವೇಳೆ ಮನೆ ಮಂದಿ ಅನುಮಾನ ಹೊರ ಹಾಕಿದರು. ‘ನಾನು ಹೇಳುತ್ತಿರುವುದು ಸುಳ್ಳಲ್ಲ. ಇದನ್ನು ನಾನು ಹೊಸದಾಗಿ ಹೇಳುತ್ತಾ ಇಲ್ಲ. ಈ ಮೊದಲು ವಿಡಿಯೋ ಮಾಡಿ ಹೇಳಿದ್ದೆ. ಇದಕ್ಕೆ ದಾಖಲೆಗಳನ್ನು ನೀಡಿದ್ದೇವೆ. ನಮ್ಮ ಜಮೀನು ಕಿತ್ತೂರಿನಿಂದ ಇನಾಮು ಬಂದಿದೆ’ ಎಂದರು ಪ್ರಶಾಂತ್.

ಪ್ರತಿಬಾರಿ ಬಿಗ್ ಬಾಸ್ ಕೊನೆಯ ದಿನ ಗ್ರ್ಯಾಂಡ್ ಆಗಿ ಫಿನಾಲೆ ಏರ್ಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಅರ್ಧಕ್ಕೆ ನಿಲ್ಲಿಸಲಾಗುತ್ತಿರುವುದರಿಂದ ಯಾವುದೇ ರೀತಿಯ ಸಂಭ್ರಮ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಅಚ್ಚುಕಟ್ಟಾಗಿ ಕೊನೆಯ ದಿನದ ಕಾರ್ಯಕ್ರಮವನ್ನು ಮಾಡಲಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಕೊನೆಯ ಎಪಿಸೋಡ್​ನಲ್ಲಿ ವಿನ್ನರ್​ ಘೋಷಿಸಿದ ಸುದೀಪ್​; ಅಚ್ಚರಿ ಮೂಡಿಸಿದ ಕಿಚ್ಚನ ಮಾತು

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More