ಬಿಗ್​ ಬಾಸ್​ ಕೊನೆಯ ಎಪಿಸೋಡ್​ನಲ್ಲಿ ವಿನ್ನರ್​ ಘೋಷಿಸಿದ ಸುದೀಪ್​; ಅಚ್ಚರಿ ಮೂಡಿಸಿದ ಕಿಚ್ಚನ ಮಾತು

Bigg Boss Kannada 8 Winner: ಪ್ರತಿಬಾರಿ ಬಿಗ್​ ಬಾಸ್​ ಕೊನೆಯ ದಿನ ಗ್ರ್ಯಾಂಡ್​ ಆಗಿ ಫಿನಾಲೆ ಏರ್ಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲಿಸಲಾಗುತ್ತಿರುವುದರಿಂದ ಯಾವುದೇ ರೀತಿಯ ಸಂಭ್ರಮ ಇಲ್ಲ.

ಬಿಗ್​ ಬಾಸ್​ ಕೊನೆಯ ಎಪಿಸೋಡ್​ನಲ್ಲಿ ವಿನ್ನರ್​ ಘೋಷಿಸಿದ ಸುದೀಪ್​; ಅಚ್ಚರಿ ಮೂಡಿಸಿದ ಕಿಚ್ಚನ ಮಾತು
ಕಿಚ್ಚ ಸುದೀಪ್​
Follow us
ರಾಜೇಶ್ ದುಗ್ಗುಮನೆ
|

Updated on: May 12, 2021 | 3:57 PM

 ಕನ್ನಡ ಬಿಗ್​ ಬಾಸ್ ಸೀಸನ್​ 8 ಶೋನ​ ಕೊನೆಯ ದಿನ ಏನೆಲ್ಲ ಆಯಿತು ಎಂಬುದನ್ನು ಕಲರ್ಸ್​ ಕನ್ನಡ ವಾಹಿನಿ ಮಂಗಳವಾರ ಹಾಗೂ ಬುಧವಾರ ಪ್ರಸಾರ ಮಾಡುತ್ತಿದೆ. ಇಂದು (ಮೇ 12) ಕೊನೆಯ ಎಪಿಸೋಡ್​ ಪ್ರಸಾರವಾಗುತ್ತಿದೆ. ಬಿಗ್​ ಬಾಸ್​ ಶೋ ಸುದೀಪ್​ ಮಾತಿಲ್ಲದೆ ಕೊನೆಗೊಳ್ಳುವುದೇ ಇಲ್ಲ. ಸೀಸನ್​ 8 ಅರ್ಧಕ್ಕೆ ನಿಂತರೂ ಕೊನೆಯಲ್ಲಿ ಸುದೀಪ್​ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಅವರು ಕುತೂಹಲ ಎನಿಸುವ ಮಾತೊಂದನ್ನು ಹೇಳಿದ್ದಾರೆ.

ಕೊರೊನಾ ವೈರಸ್ ಎರಡನೇ ಅಲೆ​ ಮಿತಿಮೀರಿದ್ದರಿಂದ ಬಿಗ್​ ಬಾಸ್​ ಶೋ ನಿಲ್ಲಿಸುವುದಾಗಿ ಕಲರ್ಸ್​ ಕನ್ನಡ ವಾಹಿನಿ ಶನಿವಾರ ಘೋಷಣೆ ಮಾಡಿತ್ತು. ಭಾನುವಾರ ಶೂಟ್​ ಮಾಡಲಾದ ಕೊನೆಯ ದಿನದ ಎಪಿಸೋಡ್​ನ ಕೆಲ ಪ್ರಮುಖ ಘಟನೆಗಳನ್ನು ಮಂಗಳವಾರ ಪ್ರಸಾರ ಮಾಡಲಾಗಿದೆ. ಬುಧವಾರವೂ ಇದು ಮುಂದುವರಿಯಲಿದೆ.

ಪ್ರತಿಬಾರಿ ಬಿಗ್​ ಬಾಸ್​ ಕೊನೆಯ ದಿನ ಗ್ರ್ಯಾಂಡ್​ ಆಗಿ ಫಿನಾಲೆ ಏರ್ಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲಿಸಲಾಗುತ್ತಿರುವುದರಿಂದ ಯಾವುದೇ ರೀತಿಯ ಸಂಭ್ರಮ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಅಚ್ಚುಕಟ್ಟಾಗಿ ಕೊನೆಯ ದಿನದ ಕಾರ್ಯಕ್ರಮವನ್ನು ಮಾಡಲಾಗಿದೆ. ಕೊನೆಯ ದಿನ ಸುದೀಪ್​ ಮಾತನಾಡಿದ್ದಾರೆ. ಅವರ ಮಾತಿನಲ್ಲಿ ಅಚ್ಚರಿ ವಿಚಾರವೊಂದಿತ್ತು.

ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಸುದೀಪ್​ ಮಾತನಾಡಿದ್ದಾರೆ. ಎಲ್ಲರಿಗೂ ಕಿಚ್ಚನ ನಮಸ್ಕಾರ. ಒಂದೆರಡು ವಾರ ಕಾಲ ನಾನು ಬರಲಿಲ್ಲ. ಆಮೇಲೆ ಪ್ರೋಟೋಕಾಲ್​ ಇರುವ ಕಾರಣ ಶೋ ನಡೆಸೋಕೆ ಆಗಿಲ್ಲ. ಈ ಪರಿಸ್ಥಿತಿಯಿಂದ ನನಗೆ ಬಹಳ ಬೇಸರವಾಗುತ್ತಿದೆ. ನನ್ನ ಪ್ರಕಾರ ನೀವೆಲ್ಲರೂ ವಿನ್ನರ್​ಗಳು ಎಂದು ಸುದೀಪ್​ ಹೇಳಿದ್ದಾರೆ.

ಕಳೆದ ಬಾರಿ ಕೊರೊನಾ ಮೊದಲನೇ ಅಲೆ ಕಾಣಿಸಿಕೊಂಡಾಗ ಮಲಯಾಳಂ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆ ವೇಳೆ ಅಲ್ಲಿ ವಿನ್ನರ್​ ಯಾರು ಎಂಬುದನ್ನು ಘೋಷಣೆ ಮಾಡಿರಲಿಲ್ಲ. ಈಗ ಕನ್ನಡ ಬಿಗ್​ ಬಾಸ್​ ಸೀಸನ್​ 8 ಕೂಡ ಅದೇ ರೀತಿಯಲ್ಲಿ ಅಂತ್ಯಕಂಡಿದೆ. ಹೊರ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ಬಿಗ್​ ಬಾಸ್​ ಸ್ಪರ್ಧಿಗಳಿಗೆ ಟಿವಿ ಮೂಲಕ ತೋರಿಸಲಾಯಿತು. ಅಲ್ಲದೆ, ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲುತ್ತಿದೆ ಎಂಬುದನ್ನು ಘೋಷಿಸಲಾಗಿದೆ.

ಇದನ್ನೂ ಓದಿ: Manju Pavagada: ಉಳಿದವರು ಸೆಟಲ್​ ಆಗಿರಬಹುದು, ಆದರೆ ನನ್ನ ಜೀವನ ಹಾಗಲ್ಲ; ಇದು ಮಂಜು ದುರಾದೃಷ್ಟ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ