AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ನಿಂದ ಹೊರ ಬಂದ ವೈಷ್ಣವಿಗೆ ಮ್ಯಾರೇಜ್​ ಪ್ರಪೋಸಲ್​; ನಾಚುತ್ತಲೇ ವಿಚಾರ ಬಿಚ್ಚಿಟ್ಟ ಸನ್ನಿಧಿ

Vaishnavi Gowda: ಕಿಚನ್​ ನನಗೆ ಇಷ್ಟ. ಕುಕಿಂಗ್ ಅನ್ನೋದು​ ಆರ್ಟ್​. ಅದು ಥೆರೆಪಿ. ಅಡುಗೆ ಮಾಡಿ ಬಡಿಸೋಕೆ ನನಗೆ ಖುಷಿ ಆಗ್ತಿತ್ತು. ಹೀಗಾಗಿ ನನಗೆ ಕಿಚನ್​ ಎಂದ್ರೆ ಬಹಳ ಇಷ್ಟ ಎಂದು ಲೈವ್​ ವಿಡಿಯೋದಲ್ಲಿ ವೈಷ್ಣವಿ ಹೇಳಿಕೊಂಡರು.

ಬಿಗ್​ ಬಾಸ್​ನಿಂದ ಹೊರ ಬಂದ ವೈಷ್ಣವಿಗೆ ಮ್ಯಾರೇಜ್​ ಪ್ರಪೋಸಲ್​; ನಾಚುತ್ತಲೇ ವಿಚಾರ ಬಿಚ್ಚಿಟ್ಟ ಸನ್ನಿಧಿ
ವೈಷ್ಣವಿ ಗೌಡ
ರಾಜೇಶ್ ದುಗ್ಗುಮನೆ
|

Updated on:May 12, 2021 | 5:38 PM

Share

ಬಿಗ್​ ಬಾಸ್​ ಮನೆ ಸೇರಿದ ವೈಷ್ಣವಿ ಗೌಡ ಎಲ್ಲರಿಗೂ ಇಷ್ಟವಾಗಿದ್ದರು. ಎಷ್ಟೇ ಕಷ್ಟದ ಸ್ಥಿತಿ ಬಂದರೂ ಅವರು ಸಿಟ್ಟು ಮಾಡಿಕೊಳ್ಳದೇ ಮೌನ ವಹಿಸಿದ್ದೇ ಹೆಚ್ಚು. ವೈಷ್ಣವಿ ಯಾಕೆ ಹೀಗೆ? ಅವರು ನಿಜ ಜೀವನದಲ್ಲೂ ಇಷ್ಟೇ ಸೈಲೆಂಟಾ ಎಂದು ಎಲ್ಲರೂ ಪ್ರಶ್ನೆ ಕೇಳಿಕೊಳ್ಳುತ್ತಿದ್ದರು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ವೈಷ್ಣವಿ ಲೈವ್​ ಬರುವ ಮೂಲಕ ಸಾಕಷ್ಟು ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ಫೇಸ್​ಬುಕ್​ ಖಾತೆ ಮೂಲಕ ವೈಷ್ಣವಿ ಲೈವ್​ ಬಂದಿದ್ದಾರೆ. ಈ ವೇಳೆ ಅವರಿಗೆ ಸಾಕಷ್ಟು ಪ್ರಶ್ನೆಗಳು ಎದುರಾಯ್ತು. ಅದರಲ್ಲಿ ಹೈಲೈಟ್​ ಆಗಿದ್ದು ‘ನೀವೇಕೆ ಬಿಗ್​ ಬಾಸ್​ ಮನೆಯಲ್ಲಿ ಅಷ್ಟು ಸೈಲೆಂಟ್​ ಆಗಿದ್ದಿರಿ? ನೀವು ನಿಜ ಜೀವನದಲ್ಲೂ ಅದೇ ರೀತಿಯೆ’ ಎನ್ನುವ ಪ್ರಶ್ನೆ. ಇದಕ್ಕೆ ವೈಷ್ಣವಿ ಉತ್ತರ ನೀಡಿದ್ದಾರೆ.

‘ನಾನು ನಿಜ ಜೀವನದಲ್ಲೂ ಅಷ್ಟೇ ಸೈಲೆಂಟ್. ನಾನು ಹೆಚ್ಚು ಮಾತನಾಡುವುದಿಲ್ಲ. ನನಗೆ ಭಾವನೆಗಳು ಇವೆ. ಬರೀ ಕೋಪದಿಂದ ಮಾತ್ರ ಪರಿಸ್ಥಿತಿಯನ್ನು ಸರಿ ಮಾಡೋಕೆ ಆಗಲ್ಲ. ಸಿಚುವೇಷನ್​ ಹ್ಯಾಂಡಲ್​ ಮಾಡೋಕೆ ನಾನಾ ವಿಧಾನಗಳಿವೆ. ನಾನು ಯಾವಾಗಲೂ ಶಾಂತವಾಗಿರೋಕೆ ಬಯಸುತ್ತೇನೆ. ಬಿಗ್​ ಬಾಸ್​ ಮನೆ ಒಳಗೆ ಶಾಂತಿ ಹರಡೋಕೆ ನಾನು ಹೋಗಿದ್ದೆ’ ಎಂದರು ವೈಷ್ಣವಿ.

ಬಿಗ್​ ಬಾಸ್​ ಮನೆಯಲ್ಲಿ ಇದ್ದಷ್ಟೂ ದಿನ ವೈಷ್ಣವಿ ಮದುವೆ ಬಗ್ಗೆ ಮಾತನಾಡಿದ್ದರು. ನಾನೂ ಒಂದು ಮದುವೆ ಆಗಬೇಕು ಎಂದು ಹೇಳಿದ್ದರು. ಈಗ ಅವರು ಮನೆಯಿಂದ ಹೊರ ಬರುತ್ತಿದ್ದಂತೆ ಸಾಕಷ್ಟು ಮದುವೆ ಪ್ರಪೋಸ್​ ಬಂದಿದೆಯಂತೆ. ‘ನಿಮ್ಮ ಮೆಸೇಜ್​, ಕಮೆಂಟ್​ ಹಾಗೂ ನಿಮ್ಮ ಬೆಂಬಲವನ್ನು ನೋಡಿ ನನಗೆ ಖುಷಿ ಆಗ್ತಿದೆ. ಹೆಚ್ಚು ಮ್ಯಾರೇಜ್​ ಪ್ರಪೋಸಲ್​ ಕೂಡ ಬಂದಿದೆ. ಇದನ್ನೆಲ್ಲ ನೋಡಿ ಖುಷಿ ಆಗ್ತಿದೆ’ ಎಂದರು ವೈಷ್ಣವಿ.

ಕಿಚನ್​ ನನಗೆ ಇಷ್ಟ. ಕುಕಿಂಗ್ ಅನ್ನೋದು​ ಆರ್ಟ್​. ಅದು ಥೆರೆಪಿ. ಅಡುಗೆ ಮಾಡಿ ಬಡಿಸೋಕೆ ನನಗೆ ಖುಷಿ ಆಗ್ತಿತ್ತು. ಹೀಗಾಗಿ ನನಗೆ ಕಿಚನ್​ ಎಂದ್ರೆ ಬಹಳ ಇಷ್ಟ ಎಂದು ಲೈವ್​ ವಿಡಿಯೋದಲ್ಲಿ ವೈಷ್ಣವಿ ಹೇಳಿಕೊಂಡರು.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ವೈಷ್ಣವಿ ವಿರುದ್ಧ ಒಟ್ಟಾಗಿ ತಿರುಗಿಬಿದ್ದ ಮನೆ ಮಂದಿ; ಬಿಕ್ಕಿ ಬಿಕ್ಕಿ ಅತ್ತ ಸನ್ನಿಧಿ

ನಮ್ಮ ಬಗ್ಗೆ ಆ ರೀತಿ ಮಾತಾಡಬೇಡಿ;- ರಘು ವಿಚಾರದಲ್ಲಿ ವೈಷ್ಣವಿಗೆ ಘಾಸಿ ಮಾಡಿದ ಶುಭಾ ಪೂಂಜಾ!

Published On - 5:35 pm, Wed, 12 May 21

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ