AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಬಗ್ಗೆ ಆ ರೀತಿ ಮಾತಾಡಬೇಡಿ’- ರಘು ವಿಚಾರದಲ್ಲಿ ವೈಷ್ಣವಿಗೆ ಘಾಸಿ ಮಾಡಿದ ಶುಭಾ ಪೂಂಜಾ!

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಕಿಚನ್​ನಲ್ಲಿ ಕೆಲಸ ಮಾಡುತ್ತಿದ್ದರು. ರಘು ಗೌಡ ಕೂಡ ಅಲ್ಲಿಯೇ ಇದ್ದರು. ಅಲ್ಲಿಗೆ ಬಂದ ಶುಭಾ ಪೂಂಜಾ ಆ್ಯಂಡ್​ ಗ್ಯಾಂಗ್​, ವೈಷ್ಣವಿ ಕಾಲೆಳೆಯೋಕೆ ಪ್ರಯತ್ನಿಸಿದರು.

'ನಮ್ಮ ಬಗ್ಗೆ ಆ ರೀತಿ ಮಾತಾಡಬೇಡಿ'- ರಘು ವಿಚಾರದಲ್ಲಿ ವೈಷ್ಣವಿಗೆ ಘಾಸಿ ಮಾಡಿದ ಶುಭಾ ಪೂಂಜಾ!
ರಘು-ವೈಷ್ಣವಿ ಗೌಡ
ರಾಜೇಶ್ ದುಗ್ಗುಮನೆ
| Edited By: |

Updated on: May 08, 2021 | 9:12 AM

Share

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಹಾಗೂ ರಘು ತುಂಬಾನೇ ಕ್ಲೋಸ್​ ಆಗಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಗೆಳೆತನವಿದೆ. ಇದು ಬಿಗ್​ ಬಾಸ್​ ಸ್ಪರ್ಧಿಗಳಿಗೂ ಗೊತ್ತಿದೆ. ಇದೇ ವಿಚಾರ ಇಟ್ಟುಕೊಂಡು ಅವರಿಗೆ ಕೆಲವರು ಟಾಂಟ್​ ಕೊಟ್ಟಿದ್ದಿದೆ. ಈಗ ಮನೆಯಲ್ಲಿ ಈ ವಿಚಾರ ತುಂಬಾನೇ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಕಿಚನ್​ನಲ್ಲಿ ಕೆಲಸ ಮಾಡುತ್ತಿದ್ದರು. ರಘು ಗೌಡ ಕೂಡ ಅಲ್ಲಿಯೇ ಇದ್ದರು. ಅಲ್ಲಿಗೆ ಬಂದ ಶುಭಾ ಪೂಂಜಾ ಆ್ಯಂಡ್​ ಗ್ಯಾಂಗ್​, ವೈಷ್ಣವಿ ಕಾಲೆಳೆಯೋಕೆ ಪ್ರಯತ್ನಿಸಿದರು. ಆದರೆ, ಇದು ರಾಂಗ್​ ಆಗಿದೆ. ಈ ವಿಚಾರ ತುಂಬಾನೇ ಗಂಭೀರ ಸ್ವರೂಪ ಪಡೆದುಕೊಂಡಿತು. ಅಲ್ಲದೆ, ಶುಭಾಗೆ ವೈಷ್ಣವಿ ಎಚ್ಚರಿಕೆ ಕೂಡ ನೀಡಿದರು.

ಅಲ್ವೋ ರಘು ಕಿಚನ್​ನಲ್ಲೂ ವೈಷ್ಣವಿ ಜತೆಯಲ್ಲೇ ಇರುತ್ತೀಯಲ್ಲ. ಅಡುಗೆ ಮಾಡುವಾಗಲೂ ಅವಳ ಹಿಂದೇ ಇರಬೇಕಾ? ನೀವಿಬ್ಬರೇ ಹೋಗಿ ಒಂದು ಬಿಗ್​ ಬಾಸ್​ ಮಾಡಿಕೊಳ್ಳಿ ಎಂದು ಕೊಂಕಾಗಿ ಶುಭಾ ಮಾತಿಗೆ ಇಳಿದರು. ಇದು ವೈಷ್ಣವಿಗೆ ಬೇಸರ ಮೂಡಿಸಿದೆ. ತಮ್ಮಿಬ್ಬರ ಗೆಳೆತನ ಬೇರೆ ರೀತಿಯಲ್ಲ ಅರ್ಥ ಮಾಡಿಕೊಳ್ಳುತ್ತಿದ್ದಾರಾ ಎಂದು ಅವರಿಗೆ ಭಯವಾಗಿದೆ.

ಹೀಗಾಗಿ, ವೈಷ್ಣವಿ ದಯವಿಟ್ಟು ಆ ರೀತಿ ಮಾತನಾಡಬೇಡಿ. ಚೆನ್ನಾಗಿ ಕಾಣಿಸುವುದಿಲ್ಲ. ಅವರಿಗೆ ಮದುವೆಯಾಗಿ ಮಗುವಿದೆ ಎಂದು ಎಚ್ಚರಿಸಿದರು. ಈ ಹೇಳಿಕೆ ನಂತರದಲ್ಲಿ ಶುಭಾ ಸುಮ್ಮನಾದರು.

ಇದೇ ವೇಳೆ ಮನೆಯಲ್ಲಿ ಅನ್ನ ಕಡಿಮೆ ಆಯಿತು. ಊಟಕ್ಕೆ ತಡವಾಗುತ್ತಿದೆ ಎನ್ನುವ ಮಾತು ಕೂಡ ಕೇಳಿ ಬಂತು. ಕಿಚನ್​ ಡಿಪಾರ್ಟ್​ಮೆಂಟ್​ನಲ್ಲಿದ್ದಿದ್ದು ವೈಷ್ಣವಿ. ಹೀಗಾಗಿ, ಅವರಿಗೆ ಈ ವಿಚಾರವೂ ಬೇಸರ ತರಿಸಿತ್ತು. ಹೀಗಾಗಿ ಒಮ್ಮೆಲೇ ಅವರು ಅಳೋಕೆ ಪ್ರಾರಂಭಿಸಿದರು.

ಇದನ್ನೂ ಓದಿ: Vaishnavi Gowda: ನಾನು ಜೀವನವನ್ನು ಒಂಟಿಯಾಗಿ ಕಳೆದಿದ್ದೇನೆ, ಈಗ ಮದುವೆ ಆಗೋಕೆ ತುದಿಗಾಲಲ್ಲಿ ನಿಂತಿದ್ದೇನೆ; ವೈಷ್ಣವಿ

ಇದೇ ಮೊದಲ ಬಾರಿಗೆ ವೈಷ್ಣವಿ ವಿರುದ್ಧ ಒಟ್ಟಾಗಿ ತಿರುಗಿಬಿದ್ದ ಮನೆ ಮಂದಿ; ಬಿಕ್ಕಿ ಬಿಕ್ಕಿ ಅತ್ತ ಸನ್ನಿಧಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More