Akshay Kumar: ವಿಶ್ವ ದಾದಿಯರ ದಿನ; ನರ್ಸ್ಗಳ ನಿಸ್ವಾರ್ಥ ಸೇವೆ ನೆನೆದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಟ್ವೀಟ್ಗೆ ಸಾಕಷ್ಟು ಜನರು ಕಮೆಂಟ್ ಮಾಡಿದ್ದಾರೆ. ಕೆಲ ನರ್ಸ್ಗಳು ಕೂಡ ಇದಕ್ಕೆ ಉತ್ತರಿಸಿದ್ದು, ಅಕ್ಷಯ್ ಕುಮಾರ್ ವಿಷ್ಗೆ ಧನ್ಯವಾದ ಹೇಳಿದ್ದಾರೆ.

ಮೇ 12 ವಿಶ್ವ ದಾದಿಯರ ದಿನ. ಕೊರೊನಾ ಸಂದರ್ಭದಲ್ಲಿ ನರ್ಸ್ಗಳು ತುಂಬಾನೇ ಕಷ್ಟಪಡುತ್ತಿದ್ದಾರೆ. ಕುಟುಂಬದವರನ್ನು ಬಿಟ್ಟು ಹಗಲು ರಾತ್ರಿ ಎನ್ನದೇ ಕೊವಿಡ್ ರೋಗಿಗಳ ಸೇವೆಯಲ್ಲಿ ತೊಡಗಿದ್ದಾರೆ. ಈ ವಿಶೇಷ ದಿನದಂದು ನಟ ಅಕ್ಷಯ್ ಕುಮಾರ್ ಕೊರೊನಾದಿಂದ ಆಸ್ಪತ್ರೆಗೆ ದಾಖಲಾದಾಗ ನರ್ಸ್ಗಳು ತಮಗೆ ನೀಡಿದ ಸೇವೆಯನ್ನು ನೆನಪಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವ ದಾದಿಯರ ದಿನಕ್ಕೆ ಶುಭ ಹಾರೈಸಿದ್ದಾರೆ.
ಬುಧವಾರ ಈ ಬಗ್ಗೆ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, ನಾನು ಇತ್ತೀಚೆಗೆ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ಈ ವೇಳೆ ಬಿಡುವಿಲ್ಲದ ಅವರ ಕೆಲಸ ನನ್ನನ್ನು ಚಕಿತಗೊಳಿಸಿತು. ಅವರ ಕೆಲಸ ನಿಸ್ವಾರ್ಥ ಹಾಗೂ ನಿರಂತರವಾದುದು. ನಿಜವಾದ ಹೀರೋಗಳಿಗೆ ಧನ್ಯವಾದಗಳು #InternationalNursesDay ಎಂದಿದ್ದಾರೆ.
When I was hospitalised recently, what totally moved me was the amazing capacity of nurses at work. Selflessly and non-stop. Thank you to the real heroes. #InternationalNursesDay
— Akshay Kumar (@akshaykumar) May 12, 2021
ಅಕ್ಷಯ್ ಕುಮಾರ್ ಟ್ವೀಟ್ಗೆ ಸಾಕಷ್ಟು ಜನರು ಕಮೆಂಟ್ ಮಾಡಿದ್ದಾರೆ. ಕೆಲ ನರ್ಸ್ಗಳು ಕೂಡ ಇದಕ್ಕೆ ಉತ್ತರಿಸಿದ್ದು, ಅಕ್ಷಯ್ ಕುಮಾರ್ ವಿಷ್ಗೆ ಧನ್ಯವಾದ ಹೇಳಿದ್ದಾರೆ. ಇನ್ನೂ ಕೆಲವರು ತಾವು ಆಸ್ಪತ್ರೆಗೆ ದಾಖಲಾದಾಗ ನರ್ಸ್ಗಳು ಯಾವ ರೀತಿಯಲ್ಲಿ ಸೇವೆ ನೀಡಿದರು ಎಂಬುದನ್ನು ವಿವರಿಸಿದ್ದಾರೆ.
ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರಿಗೆ ಏಪ್ರಿಲ್ನಲ್ಲಿ ಕೊವಿಡ್ ಪಾಸಿಟಿವ್ ಆಗಿರತ್ತು. ಇದನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ‘ಇಂದು ಬೆಳಿಗ್ಗೆ ನನಗೆ ಕೋವಿಡ್-19 ಪಾಸಿಟಿವ್ ಆಗಿದೆ. ಎಲ್ಲ ನಿಯಮಗಳನ್ನು ಪಾಲಿಸಿ ನಾನು ತಕ್ಷಣ ಐಸೊಲೇಟ್ ಆಗಿದ್ದೇನೆ. ಸದ್ಯ ಹೋಮ್ ಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ನೀವಾಗಿಯೇ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಎಚ್ಚರಿಕೆ ವಹಿಸಿ ಎಂದು ವಿನಂತಿಸಿಕೊಳ್ಳುತ್ತೇನೆ. ಶೀಘ್ರದಲ್ಲೇ ನಾನು ಗುಣಮುಖನಾಗಿ ಬರುತ್ತೇನೆ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದರು. ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ: Akshay Kumar: ನಟ ಅಕ್ಷಯ್ ಕುಮಾರ್ಗೆ ಕೊರೊನಾ ಪಾಸಿಟಿವ್! ಹೋಮ್ ಕ್ವಾರಂಟೈನ್ನಲ್ಲಿ ಕಿಲಾಡಿ