Akshay Kumar: ನಟ ಅಕ್ಷಯ್ ಕುಮಾರ್ಗೆ ಕೊರೊನಾ ಪಾಸಿಟಿವ್! ಹೋಮ್ ಕ್ವಾರಂಟೈನ್ನಲ್ಲಿ ಕಿಲಾಡಿ
Covid-19: ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಅಕ್ಷಯ್ ಕುಮಾರ್ ಅವರು ಸೋಶಿಯಲ್ ಮೀಡಿಯಾ ಮೂಲಕ ಪ್ರಯತ್ನಿಸಿದ್ದರು. ಈಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿದೆ. ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ. ಅಲ್ಲದೆ, ಎಲ್ಲರೂ ಸುರಕ್ಷಿತವಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ. ಸದಾ ಶೂಟಿಂಗ್, ಡಬ್ಬಿಂಗ್ ಎಂದು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ‘ರಾಮ್ ಸೇತು’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಈಗ ಅವರು ಕ್ವಾರಂಟೈನ್ ಆಗಿದ್ದಾರೆ.
‘ಇಂದು ಬೆಳಿಗ್ಗೆ ನನಗೆ ಕೋವಿಡ್-19 ಪಾಸಿಟಿವ್ ಆಗಿದೆ. ಎಲ್ಲ ನಿಯಮಗಳನ್ನು ಪಾಲಿಸಿ ನಾನು ತಕ್ಷಣ ಐಸೊಲೇಟ್ ಆಗಿದ್ದೇನೆ. ಸದ್ಯ ಹೋಮ್ ಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ನೀವಾಗಿಯೇ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಎಚ್ಚರಿಕೆ ವಹಿಸಿ ಎಂದು ವಿನಂತಿಸಿಕೊಳ್ಳುತ್ತೇನೆ. ಶೀಘ್ರದಲ್ಲೇ ನಾನು ಗುಣಮುಖನಾಗಿ ಬರುತ್ತೇನೆ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಕೋವಿಡ್-19 ಹಾವಳಿಯಿಂದ ಇಡೀ ದೇಶವೇ ಲಾಕ್ಡೌನ್ ಆಗಿ ಕಷ್ಟ ಅನುಭವಿಸುತ್ತಿದ್ದ ದಿನಗಳಲ್ಲಿ ಅಕ್ಷಯ್ ಕುಮಾರ್ ಅವರು ಬರೋಬ್ಬರಿ 25 ಕೋಟಿ ರೂಪಾಯಿಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದರು. ಆಗ ಅವರಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೆ, ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಅವರು ಸೋಶಿಯಲ್ ಮೀಡಿಯಾ ಮೂಲಕ ಪ್ರಯತ್ನಿಸಿದ್ದರು. ಈಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಅಕ್ಷಯ್ ಕುಮಾರ್ ಬೇಗ ಗುಣಮುಖರಾಗಲಿ ಎಂದು ಕೋಟ್ಯಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಸಿನಿಮಾ ಕೆಲಸಗಳನ್ನು ತುಂಬ ವೇಗವಾಗಿ ಮುಗಿಸುವುದರಲ್ಲಿ ಅಕ್ಷಯ್ ಕುಮಾರ್ ಫೇಮಸ್. ಲಾಕ್ಡೌನ್ ಸಡಿಲಿಕೆ ನಂತರ ಅವರು ‘ಬೆಲ್ ಬಾಟಂ’ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದರು. ಇತ್ತೀಚೆಗಷ್ಟೇ ‘ರಾಮ್ ಸೇತು’ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದರು. ಆದರೆ ಈಗ ಕೋವಿಡ್ ಪಾಸಿಟಿವ್ ಆಗಿರುವುದರಿಂದ ಕ್ವಾರಂಟೈನ್ ಆಗಿ ವಿಶ್ರಾಂತಿ ತೆಗೆದುಕೊಳ್ಳುವುದು ಅನಿವಾರ್ಯ ಆಗಿದೆ.
— Akshay Kumar (@akshaykumar) April 4, 2021
ಅನೇಕ ಸೆಲೆಬ್ರಿಟಿಗಳಿಗೆ ಇತ್ತೀಚೆಗೆ ಕೋವಿಡ್-19 ಸೋಂಕು ತಗುಲಿದೆ. ಆಲಿಯಾ ಭಟ್, ರಣಬೀರ್ ಕಪೂರ್, ಪರೇಶ್ ರಾವಲ್, ಆಮೀರ್ ಖಾನ್, ಆರ್. ಮಾಧವನ್, ಮನೋಜ್ ಭಾಜಪಾಯಿ ಸೇರಿದಂತೆ ಹಲವರಿಗೆ ಪಾಸಿಟಿವ್ ಆಗಿತ್ತು.
ಇದನ್ನೂ ಓದಿ: Ram Setu: ರಾಮ ಸೇತುವೆ ವಿಚಾರದಲ್ಲಿ ಮುಂದುವರಿಯಲು ಅಭಿಮಾನಿಗಳ ಅಭಿಪ್ರಾಯ ಕೇಳುತ್ತಿರುವ ನಟ ಅಕ್ಷಯ್ ಕುಮಾರ್!
(Akshay Kumar tested positive for coronavirus and now is home quarantine)