AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ಬಿಗ್​ ಬಾಸ್​ ಮನೆಯಿಂದ ಹೊರಬಿದ್ದ ಶಂಕರ್​ ಅಶ್ವತ್ಥ್​? ಹಿರಿಯ ಸ್ಪರ್ಧಿಯೇ ಈ ವಾರ ಟಾರ್ಗೆಟ್​ ಆಗಿದ್ದೇಕೆ?

Bigg Boss Elimination: ಈ ಬಾರಿ ಬಿಗ್​ ಬಾಸ್​ ಮನೆಗೆ ಪ್ರವೇಶ ಪಡೆದ ಸ್ಪರ್ಧಿಗಳಲ್ಲಿ ಶಂಕರ್​ ಅಶ್ವತ್ಥ್​ ವಯಸ್ಸಿನಲ್ಲಿ ಹಿರಿಯರಾಗಿದ್ದರು. ಇದು ಅವರಿಗೆ ಪ್ಲಸ್​ ಮತ್ತು ಮೈನಸ್​ ಎರಡೂ ಆಗಿತ್ತು.

BBK8: ಬಿಗ್​ ಬಾಸ್​ ಮನೆಯಿಂದ ಹೊರಬಿದ್ದ ಶಂಕರ್​ ಅಶ್ವತ್ಥ್​? ಹಿರಿಯ ಸ್ಪರ್ಧಿಯೇ ಈ ವಾರ ಟಾರ್ಗೆಟ್​ ಆಗಿದ್ದೇಕೆ?
ಶಂಕರ್​ ಅಶ್ವತ್ಥ್​ - ಬಿಗ್​ ಬಾಸ್​
ಮದನ್​ ಕುಮಾರ್​
|

Updated on: Apr 04, 2021 | 12:10 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಅಖಾಡ ಇನ್ನಷ್ಟು ರಂಗೇರಿದೆ. ಐದು ವಾರಗಳ ಪಯಣದಲ್ಲಿ ಹಲವರ ಬಣ್ಣ ಬಯಲಾಗಿದೆ. ಪ್ರತಿ ವಾರ ಒಬ್ಬೊಬ್ಬರು ಎಲಿಮಿನೇಟ್​ ಆಗುತ್ತಿದ್ದು, ಐದನೇ ವಾರದಲ್ಲಿ ಹಿರಿಯ ನಟ ಶಂಕರ್​ ಅಶ್ವತ್ಥ್​ ಅವರು ಬಿಗ್​ ಬಾಸ್​ ಮನೆಯಿಂದ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ವಾರ ನಾಮಿನೇಷನ್​ನಲ್ಲಿ ಶಂಕರ್​ ಹೆಸರು ಇತ್ತು. ಅವರ ಪರ್ಫಾರ್ಮೆನ್ಸ್​ ಕೂಡ ಕಳಪೆ ಆಗಿತ್ತು. ಪರಿಣಾಮವಾಗಿ ಬಿಗ್​ ಬಾಸ್​ನಲ್ಲಿ ಅವರ ಪಯಣ ಅಂತ್ಯವಾಗಿದೆ ಎನ್ನಲಾಗಿದೆ.

ಈ ಬಾರಿ ಬಿಗ್​ ಬಾಸ್​ ಮನೆಗೆ ಪ್ರವೇಶ ಪಡೆದ ಸ್ಪರ್ಧಿಗಳಲ್ಲಿ ಶಂಕರ್​ ಅಶ್ವತ್ಥ್​ ವಯಸ್ಸಿನಲ್ಲಿ ಹಿರಿಯರಾಗಿದ್ದರು. ಇದು ಅವರಿಗೆ ಪ್ಲಸ್​ ಮತ್ತು ಮೈನಸ್​ ಎರಡೂ ಆಗಿತ್ತು. ಹಿರಿಯರು ಎಂಬ ಕಾರಣಕ್ಕೆ ಎಲ್ಲರೂ ಅವರಿಗೆ ಗೌರವ ನೀಡುತ್ತಿದ್ದರು. ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದರು. ಆದರೆ ಅನೇಕ ಟಾಸ್ಕ್​ಗಳಲ್ಲಿ ವಯಸ್ಸಿನ ನೆಪವೊಡ್ಡಿ ಕೆಲವು ವಿನಾಯಿತಿಯನ್ನೂ ಪಡೆದುಕೊಳ್ಳುತ್ತಿದ್ದರು. ಇದು ಕೆಲವರ ಅಸಮಾಧಾನಕ್ಕೆ ಕಾರಣ ಆಗಿತ್ತು.

ಇತರ ಸ್ಪರ್ಧಿಗಳ ಜೊತೆಗೆ ವಯಸ್ಸಿನ ಅಂತರ ಇರುವುದರಿಂದ ಶಂಕರ್​ ಅಶ್ವತ್ಥ್​ ಅವರು ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಅದು ಸಹ ಅವರಿಗೆ ಮೈನಸ್​ ಆಯಿತು. ಇನ್ನು, ಸತತ ಎರಡು ವಾರ ಶಂಕರ್​ ಅಶ್ವತ್ಥ್​ ಅವರು ಕಳಪೆ ಪ್ರದರ್ಶನ ನೀಡಿದರು. ಮನೆಯ ಎಲ್ಲ ಸದಸ್ಯರು ಅವರಿಗೆ ಕಳಪೆ ಹಣೆಪಟ್ಟಿ ನೀಡಿದ್ದರಿಂದ ಎರಡು ಬಾರಿ ಅವರು ಜೈಲಿಗೆ ಹೋಗಬೇಕಾಯಿತು. ಟಾಸ್ಕ್​ವೊಂದರಲ್ಲಿ ದಿವ್ಯಾ ಸುರೇಶ್​ ಮತ್ತು ವೈಷ್ಣವಿ ನಡುವೆ ಪೈಪೋಟಿ ನಡೆಯುತ್ತಿತ್ತು. ಸ್ವಿಮಿಂಗ್​ ಪೂಲ್​ನಲ್ಲಿ ಇಬ್ಬರೂ ನಿಂತುಕೊಂಡಿರುವಾಗ ಆ ಆಟವನ್ನು ನಿಲ್ಲಿಸಲು ಶಂಕರ್​ ಅಶ್ವತ್ಥ್​ ಪೂಲ್​ಗೆ ಹಾರಿದರು. ಅವರ ಈ ವರ್ತನೆಯಿಂದ ಅನೇಕರಿಗೆ ಬೇಸರ ಆಗಿತ್ತು.

ಶಂಕರ್​ ಅಶ್ವತ್ಥ್​ ಅವರು ಈ ರೀತಿ ನಡೆದುಕೊಂಡ ವಿಚಾರ ಶನಿವಾರದ ಎಪಿಸೋಡ್​ನಲ್ಲಿ ಚರ್ಚೆ ಆಯಿತು. ಕಿಚ್ಚ ಸುದೀಪ್​ ಕೂಡ ಈ ಬಗ್ಗೆ ತಕರಾರು ತೆಗೆದರು. ತಾವು ಮಾಡಿದ್ದೇ ಸರಿ ಎಂದು ಮೊದಲಿಗೆ ಶಂಕರ್​ ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದರು. ಅಲ್ಲದೆ, ಸುದೀಪ್​ ಎದುರು ಜೋರು ಧ್ವನಿಯಲ್ಲಿ ಮಾತನಾಡಿದರು. ಇದು ಎಲ್ಲರಿಗೂ ಅಚ್ಚರಿ ಎನಿಸಿತು. ಆದರೂ ಶಂಕರ್​ ಅಶ್ವತ್ಥ್​ ಆ ರೀತಿ ಆಕ್ರಮಣಕಾರಿಯಾಗಿ ಆಟ ಆಡಿದ್ದು ಸರಿ ಅಲ್ಲ ಎಂದು ಸುದೀಪ್​ ಹೇಳಿದರು.

ದಿನದಿಂದ ದಿನಕ್ಕೆ ಟಾಸ್ಕ್​ಗಳ ಸ್ವರೂಪ ತೀವ್ರವಾಗುತ್ತಲೇ ಇದೆ. ವಯಸ್ಸಿನ ಕಾರಣದಿಂದ ಶಂಕರ್​ ಅಶ್ವತ್ಥ್​ ಅವರು ಟಾಸ್ಕ್​ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಕಷ್ಟ ಆಗುತ್ತಿದೆ. ಹಾಗಂತ ಅವರಿಗೆ ಪದೇಪದೇ ವಿನಾಯಿತಿ ನೀಡುವುದು ಆಟದ ನಿಯಮಕ್ಕೆ ವಿರುದ್ಧವಾಗುತ್ತದೆ. ಆ ಎಲ್ಲ ಕಾರಣಗಳಿಗಾಗಿ ಶಂಕರ್​ ಅಶ್ವತ್ಥ್​ ಎಲಿಮಿನೇಟ್​ ಆಗಿರಬಹುದು ಎಂಬುದು ಹಲವರ ಅಭಿಪ್ರಾಯ.

ಸದ್ಯ 13 ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್​ ಅವರು ದೊಡ್ಮನೆಗೆ ಪ್ರವೇಶ ಪಡೆದಿದ್ದಾರೆ. ಅವರ ಆಗಮನದಿಂದಾಗಿ ಮನೆಯ ವಾತಾವರಣದಲ್ಲಿ ಬದಲಾವಣೆ ಬಂದಿದೆ. ಸದ್ಯ ಕ್ಯಾಪ್ಟನ್​ ಆಗಿ ಮಂಜು ಪಾವಗಡ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ

ಬಿಗ್​ ಬಾಸ್​ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಬಗ್ಗೆ ಶಂಕರ್​ ಅಶ್ವತ್ಥ್ ಬೇಸರ!

(Bigg Boss Kannada 8 Elimination: Actor Shankar Ashwath reportedly eliminated in 5th week of BBK8)

ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ