AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಬಗ್ಗೆ ಶಂಕರ್​ ಅಶ್ವತ್ಥ್ ಬೇಸರ!

ಬಿಗ್​ ಬಾಸ್ ಮನೆಯಲ್ಲಿ ಹೆಣ್ಮಕ್ಳಿಗೆ ಯಾವುದೇ ಕೊರತೆ ಮಾಡಿಲ್ಲ. ಈಗ ಹೋಗಿರುವ ಸ್ಪರ್ಧಿಗಳು ವೀಕ್​ ಇದ್ದರೇ ಹೊರತು ಇಲ್ಲಿ ಯಾರೂ ಉದ್ದೇಶ ಪೂರ್ವಕವಾಗಿ ಹೆಣ್ಮಕ್ಳನ್ನು ಟಾರ್ಗೆಟ್​ ಮಾಡುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರು ಸುದೀಪ್​.

ಬಿಗ್​ ಬಾಸ್​ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಬಗ್ಗೆ ಶಂಕರ್​ ಅಶ್ವತ್ಥ್ ಬೇಸರ!
ಶಂಕರ್​ ಅಶ್ವತ್ಥ್​
ರಾಜೇಶ್ ದುಗ್ಗುಮನೆ
|

Updated on: Mar 29, 2021 | 10:11 PM

Share

ಬಿಗ್​ ಬಾಸ್​ ಮನೆಯಲ್ಲಿ ನಾಲ್ಕು ಮಹಿಳಾ ಸ್ಪರ್ಧಿಗಳೇ ಮನೆಯಿಂದ ಹೊರ ಹೋಗಿದ್ದಾರೆ. ದಿನ ಕಳೆದಂತೆ ಮಹಿಳಾ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಈ ವಿಚಾರದ ಬಗ್ಗೆ ಶುಭಾ ಪೂಂಜಾ-ನಿಧಿ ಸುಬ್ಬಯ್ಯ ಚರ್ಚೆ ಕೂಡ ಮಾಡಿದ್ದರು. ಈ ಬಗ್ಗೆ ಕಿಚ್ಚ ಸುದೀಪ್​ ಖಡಕ್​ ಎಚ್ಚರಿಕೆ ಕೂಡ ನೀಡಿದ್ದರು. ಈಗ ಮಹಿಳಾ ಸ್ಪರ್ಧಿಗಳ ಬಗ್ಗೆ ಶಂಕರ್​ ಅಶ್ವತ್ಥ್​ ಬೇಸರ ಹೊರ ಹಾಕಿದ್ದಾರೆ. ಉತ್ತಮ ಆಟ ಎಂದು ಬಂದಾಗ ನಾವು ಪ್ರತಿ ಬಾರಿ ರಾಜೀವ್​, ಮಂಜು, ಅರವಿಂದ್​ ಅವರ ಹೆಸರನ್ನು ಆಯ್ಕೆ ಮಾಡುತ್ತೇವೆ. ಆದರೆ, ಅವರು ಒಂದು ಬಾರಿಯಾದರೂ ನಮ್ಮ ಹೆಸರನ್ನು ಎತ್ತಿಕೊಂಡರಾ? ಗಂಡುಮಕ್ಕಳು ಟಾಸ್ಕ್​ ಆಧಾರದಮೇಲೆ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಅವರ ಹೆಸರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ನಾವು ಬಕೆಟ್​ ಹಿಡ್ಯಲ್ಲ. ಇದ್ದಿದ್ದು ಇದ್ದಂಗೆ ಹೇಳ್ತೀವಿ. ಮನೆಯಲ್ಲಿ ಬರೀ ಹೆಣ್ಮಕ್ಳೇ ಹೋಗ್ತಿದಾರೆ ಎಂದು ನಿಧಿ ಬೇಸರ ಹೊರ ಹಾಕಿದ್ದರು. ಅಲ್ಲದೆ, ಇನ್ಮುಂದೆ ಹೆಣ್ಣುಮಕ್ಕಳನ್ನು ಮಾತ್ರ ಬೆಂಬಲಿಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಯಿತು.

ಆದರೆ, ಈ ಬಗ್ಗೆ ಸುದೀಪ್​ ಎಚ್ಚರಿಕೆ ನೀಡಿದ್ದರು. ಬಿಗ್​ ಬಾಸ್ ಮನೆಯಲ್ಲಿ ಹೆಣ್ಮಕ್ಳಿಗೆ ಯಾವುದೇ ಕೊರತೆ ಮಾಡಿಲ್ಲ. ಈಗ ಹೋಗಿರುವ ಸ್ಪರ್ಧಿಗಳು ವೀಕ್​ ಇದ್ದರೇ ಹೊರತು ಇಲ್ಲಿ ಯಾರೂ ಉದ್ದೇಶ ಪೂರ್ವಕವಾಗಿ ಹೆಣ್ಮಕ್ಳನ್ನು ಟಾರ್ಗೆಟ್​ ಮಾಡುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರು. ಇದಕ್ಕೆ ಶಂಕರ್​ ಅಶ್ವತ್ಥ್​ ಕೂಡ ಧ್ವನಿಗೂಡಿಸಿದ್ದರು.

ನಾಲ್ಕನೇ ವಾರದ ಎಲಿಮಿನೇಷನ್​ ನಂತರ ಶಂಕರ್​ ಅಶ್ವತ್ಥ್​ ಈ ವಿಚಾರವಾಗಿ ಮನೆ ಮಂದಿ ಜತೆ ಮಾತನಾಡಿದ್ದಾರೆ. ಎಲಿಮಿನೇಷನ್​ ವೇಳೆ ನಾಲ್ಕೈದು ಜನ ಇದ್ದಾಗ ಸೇವ್​ ಆಗೋದು ಚಂದ್ರಕಲಾ ಎಂದು ಹೆಣ್ಮಕ್ಳು ಹೇಳಿದ್ದರು. ಕೊನೆಯಲ್ಲಿ ಇಬ್ಬರೇ ಉಳಿದಾಗ ಚಂದ್ರಕಲಾ ಬದಲು ವಿಶ್ವನ ಹೆಸರನ್ನು ಹೇಳಿದ್ದರು. ಅವರಲ್ಲೇ ಈ ಬಗ್ಗೆ ಕ್ಲ್ಯಾರಿಟಿ ಇಲ್ಲ. ಇದು ಸರಿ ಅಲ್ಲ ಎಂದು ಮನೆಯಲ್ಲಿರುವ ಮಹಿಳೆಯರ ಬಗ್ಗೆ ಬೇಸರ ಹೊರ ಹಾಕಿದರು.

ಇದನ್ನೂ ಓದಿ: ನಿನ್ನೆ-ಮೊನ್ನೆ ಬಂದ ಬಚ್ಚಾ ಎಂದಿದ್ದ ಶಂಕರ್​ ಅಶ್ವತ್ಥ್​ ವಿರುದ್ಧ ಮನೆ ಮಂದಿಯೆಲ್ಲಾ ಒಟ್ಟಾಗಿ ತಿರುಗಿ ಬಿದ್ರು!

ಬಿಗ್​ ಬಾಸ್​​ ಗೆಲ್ಲೋದು ಅರವಿಂದ್​; ಮುಂದಿನ ವಾರ ಶಂಕರ್​ ಎಲಿಮಿನೇಟ್! ಹಿರಿಯ ನಟಿಯ ಭವಿಷ್ಯ ನಿಜವಾಗತ್ತಾ?

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್