AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​​ ಗೆಲ್ಲೋದು ಅರವಿಂದ್​; ಮುಂದಿನ ವಾರ ಶಂಕರ್​ ಎಲಿಮಿನೇಟ್! ಹಿರಿಯ ನಟಿಯ ಭವಿಷ್ಯ ನಿಜವಾಗತ್ತಾ?

Bigg Boss Kannada: ಚಂದ್ರಕಲಾ ಮೋಹನ್​ ಅವರ ನಿರ್ಗಮನದ ಬಳಿಕ ಸದ್ಯ 13 ಜನರ ನಡುವೆ ಪೈಪೋಟಿ ಮುಂದುವರಿದಿದೆ. ಚಂದ್ರಕಲಾ ಮೋಹನ್​ ಅವರ ಪ್ರಕಾರ ಟಾಪ್​ 3 ಸ್ಪರ್ಧಿಗಳಾಗಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಮತ್ತು ಅರವಿಂದ್​ ಹಣಾಹಣಿ ನಡೆಸಲಿದ್ದಾರೆ.

ಬಿಗ್​ ಬಾಸ್​​ ಗೆಲ್ಲೋದು ಅರವಿಂದ್​; ಮುಂದಿನ ವಾರ ಶಂಕರ್​ ಎಲಿಮಿನೇಟ್! ಹಿರಿಯ ನಟಿಯ ಭವಿಷ್ಯ ನಿಜವಾಗತ್ತಾ?
ಶಂಕರ್​ ಅಶ್ವತ್ಥ್​ - ಅರವಿಂದ್​ ಕೆಪಿ
Follow us
ಮದನ್​ ಕುಮಾರ್​
|

Updated on: Mar 29, 2021 | 1:08 PM

ಪ್ರತಿ ದಿನವೂ ಬಿಗ್​ ಬಾಸ್​ ಮನೆಯಲ್ಲಿ ಆಟದ ಸ್ವರೂಪ ಬದಲಾಗುತ್ತಿದೆ. ದಿನ ಕಳೆದಂತೆಲ್ಲ ವಾತಾವರಣ ಗಂಭೀರವಾಗುತ್ತಿದೆ. ಸದ್ಯ ನಾಲ್ಕು ವಾರಗಳು ಮುಗಿದಿವೆ. ನಾಲ್ಕು ಜನರ ಎಲಿಮಿನೇಷನ್​ ಆಗಿದೆ. ಧನುಶ್ರೀ, ನಿರ್ಮಲಾ ಚೆನ್ನಪ್ಪ, ಗೀತಾ ಭಾರತಿ ಭಟ್​ ಹಾಗೂ ಚಂದ್ರಕಲಾ ಮೋಹನ್​ ಮನೆಯಿಂದ ಹೊರಬಂದಾಗಿದೆ. ಹಾಗಾದರೆ ಮುಂದಿನ ವಾರ ಔಟ್​ ಆಗುವವರು ಯಾರು? ಅಂತಿಮವಾಗಿ ವಿನ್​ ಆಗುವವರು ಯಾರು ಎಂಬ ಪ್ರಶ್ನೆಗೆ ಚಂದ್ರಕಲಾ ಮೋಹನ್​ ಅವರು ಭವಿಷ್ಯ ನುಡಿದಿದ್ದಾರೆ.

ಚಂದ್ರಕಲಾ ಮೋಹನ್​ ಅವರ ನಿರ್ಗಮನದ ಬಳಿಕ ಸದ್ಯ 13 ಜನರ ನಡುವೆ ಪೈಪೋಟಿ ಮುಂದುವರಿದಿದೆ. ಚಂದ್ರಕಲಾ ಮೋಹನ್​ ಅವರ ಪ್ರಕಾರ ಟಾಪ್​ 3 ಸ್ಪರ್ಧಿಗಳಾಗಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಮತ್ತು ಅರವಿಂದ್​ ಹಣಾಹಣಿ ನಡೆಸಲಿದ್ದಾರೆ. ಅಂತಿಮವಾಗಿ ಅರವಿಂದ್​ ವಿನ್​ ಆಗಲಿದ್ದಾರೆ ಎಂಬುದು ಅವರ ಅಭಿಪ್ರಾಯ. ಈವರೆಗೂ ಈ ಮೂವರು ಆಟ ಆಡುತ್ತಿರುವ ವೈಖರಿಯನ್ನು ಗಮನಿಸಿ ಚಂದ್ರಕಲಾ ಅವರು ಈ ಹೇಳಿಕೆ ನೀಡಿದ್ದಾರೆ.

ಮುಂದಿನ ವಾರ ಎಲಿಮಿನೇಟ್​ ಆಗುವವರು ಯಾರು ಎಂದು ಸುದೀಪ್​ ಕೇಳಿದ ಪ್ರಶ್ನೆಗೆ ಶಂಕರ್​ ಅಶ್ವತ್ಥ್​ ಅಥವಾ ಶಮಂತ್​ ಎಂದು ಚಂದ್ರಕಲಾ ಉತ್ತರ ನೀಡಿದ್ದಾರೆ. ಅವರಿಬ್ಬರೂ ಅಲ್ಲದಿದ್ದರೆ ನಿಧಿ ಸುಬ್ಬಯ್ಯ ಹೊರಗೆ ಬರಬೇಕು. ಮನೆಯೊಳಗೆ ತಾರತಮ್ಯ ಮಾಡುತ್ತಿರುವ ಕಾರಣದಿಂದ ನಿಧಿ ಸುಬ್ಬಯ್ಯ ಔಟ್​ ಆಗಬೇಕು ಎಂದು ಚಂದ್ರಕಲಾ ಹೇಳಿದ್ದಾರೆ. ನಿಧಿ ಯಾವ ರೀತಿ ತಾರತಮ್ಯ ಮಾಡುತ್ತಾರೆ ಎಂದು ಸುದೀಪ್​ ಮರುಪ್ರಶ್ನೆ ಹಾಕಿದ್ದಾರೆ.

‘ಎಲ್ಲರೂ ತನ್ನದೇ ಮಾತು ಕೇಳಿಸಿಕೊಳ್ಳಬೇಕು, ತನ್ನದೇ ನಡೆಯಬೇಕು ಅಂತ ನಿಧಿ ಬಯಸುತ್ತಾರೆ. ಶುಭಾ ಪೂಂಜಾ ಜೊತೆ ಅವರು ಮಾತನಾಡುವಾಗ ಬೇರೆಯವರ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನೆಲ್ಲ ನಾನು ಗಮನಿಸಿದ್ದೇನೆ. ಅವರ ರೀತಿ ಆಟ ಆಡೋಕೆ ನನಗೆ ಇಷ್ಟ ಆಗಲ್ಲ. ಅದಕ್ಕಾಗಿ ನಾನು ಹಿಂದುಳಿದೆ ಎನಿಸುತ್ತದೆ’ ಎಂದು ಚಂದ್ರಕಲಾ ಹೇಳಿದ್ದಾರೆ. ಶುಭಾ ಪೂಂಜಾ ಎಂದರೆ ಚಂದ್ರಕಲಾಗೆ ಹೆಚ್ಚು ಇಷ್ಟ. ‘ಅವಳನ್ನು ನಾನು ಮಿಸ್​ ಮಾಡಿಕೊಳ್ಳುತ್ತೇನೆ. ಮುಕ್ತವಾಗಿ ಮಾತನಾಡುತ್ತಾಳೆ. ಅವಳಿಗೆ ಒಳ್ಳೆಯ ಮನಸ್ಸಿದೆ’ ಎಂದು ಅವರು ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಇದ್ದಾಗ ತಮ್ಮ ಬದುಕಿನ ಕೆಲವು ಕಷ್ಟದ ಕಥೆಗಳನ್ನು ಚಂದ್ರಕಲಾ ಹೇಳಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ ಸ್ವಂತ ತಂದೆಯಿಂದಲೇ ಕೆಟ್ಟ ನಡವಳಿಕೆಯನ್ನು ಎದುರಿಸಬೇಕಾಯಿತು ಎಂದು ಅವರು ಹೇಳಿದ್ದನ್ನು ಕೇಳಿ ಎಲ್ಲರೂ ಕಣ್ಣೀರು ಹಾಕಿದ್ದರು. ‘ಯಾವುದಕ್ಕೂ ಇನ್ಮುಂದೆ ಅಳಬಾರದು ಎಂಬುದು ನನಗೆ ಮನವರಿಕೆ ಆಗಿದೆ. ಸಣ್ಣ ಪುಟ್ಟ ವಿಚಾರಕ್ಕೆ ಅಳುವುದು ಸರಿಯಲ್ಲ. ಎಲ್ಲವನ್ನೂ ನಾನು ಧೈರ್ಯವಾಗಿ ಎದುರಿಸಬೇಕು ಎಂಬುದನ್ನು ಬಿಗ್​ ಬಾಸ್​ನಿಂದ ಕಲಿತಿದ್ದೇನೆ’ ಎಂದು ಹೇಳುವ ಮೂಲಕ ಚಂದ್ರಕಲಾ ಅವರು ಬಿಗ್​ ಬಾಸ್​ಗೆ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ: ‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!

13ನೇ ವಯಸ್ಸಿಗೆ ಮದುವೆ, 14ಕ್ಕೆ ಮಗು! ಇದು ಬಿಗ್​ ಬಾಸ್​ ಚಂದ್ರಕಲಾ ರಿಯಲ್​ ಲೈಫ್​ ಕಷ್ಟದ ಕಥೆ!