ನಟ ಚಂದು ಗೌಡ ಮತ್ತು ಕಿರಣ್​ ರಾಜ್ ಮನೆಗೆ ಬಂತು ಐಷಾರಾಮಿ ಕಾರು!

ಸಾಕಷ್ಟು ಕಿರುತೆರೆ ನಟರು ಐಷಾರಾಮಿ ಕಾರು ಖರೀದಿಸಿ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈಗ ಕನ್ನಡದ ಖ್ಯಾತ ನಟರಾದ ಕಿರಣ್​ ರಾಜ್​ ಹಾಗೂ ಚಂದು ಬಿ. ಗೌಡ ಸೇರ್ಪಡೆ ಆಗಿದ್ದಾರೆ.

ನಟ ಚಂದು ಗೌಡ ಮತ್ತು ಕಿರಣ್​ ರಾಜ್ ಮನೆಗೆ ಬಂತು ಐಷಾರಾಮಿ ಕಾರು!
ಚಂದು ಗೌಡ ಮತ್ತು ಕಿರಣ್​ ರಾಜ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Mar 29, 2021 | 3:40 PM

ಕಿರುತೆರೆ ರಂಗ ಈಗ ಬದಲಾಗಿದೆ. ಧಾರಾವಾಹಿಗೆ ಬೇಡಿಕೆ ಹೆಚ್ಚಿದಂತೆ ಅಲ್ಲಿ ನಟಿಸುವ ಕಲಾವಿದರ ಸಂಭಾವನೆ ಕೂಡ ಜಾಸ್ತಿ ಆಗಿದೆ. ಕಿರುತೆರೆಯಲ್ಲಿ ನಟಿಸುವ ಸಾಕಷ್ಟು ಕಲಾವಿದರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಹೀಗಾಗಿ, ಸಾಕಷ್ಟು ಕಿರುತೆರೆ ನಟರು ಐಷಾರಾಮಿ ಕಾರು ಖರೀದಿಸಿ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈಗ ಕನ್ನಡದ ಖ್ಯಾತ ನಟರಾದ ಕಿರಣ್​ ರಾಜ್​ ಹಾಗೂ ಚಂದು ಬಿ. ಗೌಡ ಸೇರ್ಪಡೆ ಆಗಿದ್ದಾರೆ. ಕನ್ನಡತಿ ಧಾರಾವಾಹಿ ಮೂಲಕ ಹರ್ಷ ಎಂದೇ ಖ್ಯಾತಿ ಪಡೆದವರು ಕಿರಣ್​ ರಾಜ್​. ಈ ಮೊದಲು ಇವರು ಹಿಂದಿ ಧಾರಾವಾಹಿಯಲ್ಲೂ ಕೂಡ ನಟಿಸಿದ್ದಾರೆ. ಕನ್ನಡತಿಯಲ್ಲಿ ಹರ್ಷನಾಗಿ ಕಾಣಿಸಿಕೊಳ್ಳುವ ಮೂಲಕ ಮನೆ ಮಾತಾಗಿದ್ದಾರೆ. ಧಾರಾವಾಹಿಯ ನಟಿ ಭುವಿ ಜತೆಗಿನ ಪ್ರೇಮಕತೆ ಎಲ್ಲರಿಗೂ ಇಷ್ಟವಾಗುತ್ತಿದೆ. ಹೀಗಾಗಿ, ಕಿರಣ್​ ರಾಜ್​ ಬೇಡಿಕೆ ಹೆಚ್ಚುತ್ತಿದೆ.

ಈಗ ಕಿರಣ್​ ರಾಜ್​ ಐಷಾರಾಮಿ ಮರ್ಸಿಡಿಸ್​ ಬೆಂಜ್​ ಕಾರನ್ನು ಖರೀದಿಸಿದ್ದಾರೆ. ಚಾಮರಾಜ ನಗರದ ದೇವಸ್ಥಾನಕ್ಕೆ ತೆರಳಿ ಅವರು ಪೂಜೆ ಕೂಡ ಮಾಡಿಸಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ.

View this post on Instagram

A post shared by Kiran Raj (@itskiranraj)

ಇನ್ನು, ಚಂದು ಬಿ. ಗೌಡ ಕಿರುತೆರೆ ಹಾಗೂ ಹಿರಿತೆರೆ ಎರಡಲ್ಲೂ ಮಿಂಚಿದವರು. ಗೃಹ ಲಕ್ಷ್ಮಿ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಚಂದು ನಂತರ ಲಕ್ಷ್ಮೀ ಬಾರಮ್ಮದಲ್ಲೂ ನಟಿಸಿದ್ದರು. 2018ರಲ್ಲಿ ತೆರೆಕಂಡ ಅಟೆಮ್ಟ್​ ಟು ಮರ್ಡರ್​ ಚಿತ್ರದ ಮೂಲಕ ಹಿರಿತೆರೆಗೂ ಕಾಲಿಟ್ಟರು. ಇತ್ತೀಚೆಗೆ ತೆರಕಂಡ ರಾಬರ್ಟ್​ ಸಿನಿಮಾದಲ್ಲೂ ಒಂದು ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಈಗ ಚಂದು ಆಡಿ ಕ್ಯೂ7 ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋಗನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಿನ ಆರಂಭಿಕ ಬೆಲೆ 69.27 ಲಕ್ಷ ರೂಪಾಯಿ (ಎಕ್ಸ್​ ಶೋ ರೂಂ) ಇದೆ. ಇವರಿಗೂ ಕೂಡ ಅಭಿನಂದನೆಯ ಸುರಿಮಳೆ ಹರಿದು ಬಂದಿದೆ.

ಇದನ್ನೂ ಓದಿ: ಗೀತಾ ಧಾರಾವಾಹಿ ನಟಿ ಭವ್ಯಾ ಗೌಡಗೆ ಬೆಳ್ಳಿತೆರೆ ಆಫರ್​; ಸಿನಿಮಾ ಯಾವುದು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ