AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ವಾರ ಅರವಿಂದ್ ಜತೆ ಮಾತಾಡ್ಬಾರದು; ದಿವ್ಯಾ ಉರುಡುಗಗೆ ಸುದೀಪ್​ ಹೊಸ ಕಂಡೀಷನ್​!

ವೀಕೆಂಡ್​ನಲ್ಲಿ ಸುದೀಪ್​ ಅವರು ಅರವಿಂದ್​ಗೆ, ಬಾತ್​ರೂಂನಲ್ಲಿ ಅತಿ ಹೆಚ್ಚು ಸಮಯ ಕಳೆಯುವವರು ಯಾರು? ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಅರವಿಂದ್​, ದಿವ್ಯಾ ಅವರ ಹೆಸರನ್ನು ತೆಗೆದುಕೊಂಡಿದ್ದರು.

ಒಂದು ವಾರ ಅರವಿಂದ್ ಜತೆ ಮಾತಾಡ್ಬಾರದು; ದಿವ್ಯಾ ಉರುಡುಗಗೆ ಸುದೀಪ್​ ಹೊಸ ಕಂಡೀಷನ್​!
ದಿವ್ಯಾ ಉರುಡುಗ-ಅರವಿಂದ್ ಕೆಪಿ
ರಾಜೇಶ್ ದುಗ್ಗುಮನೆ
|

Updated on:Mar 28, 2021 | 9:36 PM

Share

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ನಡುವೆ ಪ್ರೀತಿ ಮೊಳೆತಿದೆ ಎನ್ನುವ ವಿಚಾರ ಭಾರೀ ಚರ್ಚೆ ಆಗುತ್ತಿದೆ. ವೀಕ್ಷಕರ ವಲಯದಲ್ಲೂ ಈ ವಿಚಾರ ಈಗ ಹಾಟ್​ ಟಾಪಿಕ್​. ಹೀಗಿರುವಾಗಲೇ ಒಂದು ವಾರ ಅರವಿಂದ್ ಜತೆ ಮಾತಾಡಬಾರದು ಎನ್ನುವ ಕಂಡೀಷನ್​ ಅನ್ನು ದಿವ್ಯಾಗೆ ಸುದೀಪ್​ ಹಾಕಿದ್ದಾರೆ! ಅರವಿಂದ್​ ಮತ್ತು ದಿವ್ಯಾ ಉರುಡುಗ ನಡುವೆ ಪ್ರೀತಿ ಚಿಗುರಿದೆ ಎಂಬುದು ಬಹುತೇಕರ ಅಭಿಪ್ರಾಯ. ಅವರಿಬ್ಬರ ಮಧ್ಯೆ ಇರುವ ಆಪ್ತತೆ ನೋಡಿದರೆ ಎಂಥವರಿಗೂ ಈ ಅನುಮಾನ ಬಂದೇ ಬರುತ್ತದೆ. ಅಷ್ಟೇ ಅಲ್ಲದೇ, ಮನೆ ಮಂದಿ ಎಲ್ಲರೂ ಈ ವಿಚಾರವನ್ನು ಪದೇ ಪದೇ ಪ್ರಸ್ತಾಪ ಮಾಡುತ್ತಲೇ ಇರುತ್ತಾರೆ. ಆಪ್ತತೆ ಬೆಳೆದಿರುವ ವಿಚಾರವನ್ನು ಇಬ್ಬರೂ ಒಪ್ಪಿಕೊಂಡಿದ್ದರು.

ವೀಕೆಂಡ್​ನಲ್ಲಿ ಸುದೀಪ್​ ಅವರು ಅರವಿಂದ್​ಗೆ, ಬಾತ್​ರೂಂನಲ್ಲಿ ಅತಿ ಹೆಚ್ಚು ಸಮಯ ಕಳೆಯುವವರು ಯಾರು? ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಅರವಿಂದ್​, ದಿವ್ಯಾ ಉರುಡುಗ ಮತ್ತು ವೈಷ್ಣವಿ ನಡುವೆ ಈ ವಿಚಾರಕ್ಕೆ ಕಾಂಪಿಟೇಷನ್​ ಇದೆ. ಇಬ್ಬರೂ ಬಾತ್​ರೂಂಗೆ ಹೋದರೆ ಬೇಗ ಬರುವುದೇ ಇಲ್ಲ ಎಂದಿದ್ದರು. ಇಬ್ಬರಲ್ಲಿ ಅತಿ ಹೆಚ್ಚು ಸಮಯ ಕಳೆಯುವವರು ಯಾರು ಎಂದು ಕೇಳಿದರು ಸುದೀಪ್​. ಆಗ ದಿವ್ಯಾ ಹೆಸರನ್ನು ಎತ್ತಿಕೊಂಡರು ಅರವಿಂದ್​.

ಇದಕ್ಕೆ ದಿವ್ಯಾ ಹಾಗೆಲ್ಲ ಇಲ್ಲವೇ ಇಲ್ಲ ಎಂದರು. ಅದಕ್ಕೆ ಉತ್ತರಿಸಿದ ಸುದೀಪ್​, ಹೌದು, ಇದೆಲ್ಲ ಬರೀ ಸುಳ್ಳು. ನಾಳೆಯಿಂದ ನೀವು ಅರವಿಂದ ಪಕ್ಕ ಕೂರಬೇಡಿ. ಜಾಗ ಬದಲಿಸಿ. ಇಷ್ಟೆಲ್ಲ ಸುಳ್ಳು ಹೇಳುತ್ತಾರೆ ಎಂದು ಪಕ್ಕ ಕೂರಲೇಬೇಡಿ. ಅವರ ಜತೆ ಮಾತಾಡಬೇಡಿ. ಅರವಿಂದ್​ ಜತೆ ನೀವು ಒಂದು ವಾರಗಳ ಕಾಲ ಒಂದೇ ಒಂದು ಶಬ್ದ ಕೂಡ ಮಾತನಾಡಬಾರದು ಎಂದು ಕಂಡೀಷನ್​ ಹಾಕಿದರು. ಇದನ್ನು ಕೇಳಿ ಈ ಜೋಡಿ ಕಂಗಾಲಾಗಿತ್ತು. ನಂತರ ಸುದೀಪ್​ ಹಾಗೆ ಮಾಡಲ್ಲ ಎಂದು ಹೇಳುವ ಮೂಲಕ ಇಬ್ಬರನ್ನೂ ನಿರಾಳ ಮಾಡಿದರು.

ಇದನ್ನೂ ಓದಿ: ತಪ್ಪು ಮಾಡಿದರೂ ಪ್ರಶಾಂತ್​ ಸಂಬರಗಿ ಬೆನ್ನು ತಟ್ಟಿದ ಸುದೀಪ್​! ಕಿಚ್ಚ ಮಾಡಿದ್ದು ಸರೀನಾ?

Published On - 9:00 pm, Sun, 28 March 21

ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಸೆಲ್ಫಿ, ಆಟೋಗ್ರಾಫ್​ಗಾಗಿ ಸಿರಾಜ್ ಹಿಂದೆ ಬಿದ್ದ ಫ್ಯಾನ್ಸ್
ಸೆಲ್ಫಿ, ಆಟೋಗ್ರಾಫ್​ಗಾಗಿ ಸಿರಾಜ್ ಹಿಂದೆ ಬಿದ್ದ ಫ್ಯಾನ್ಸ್