AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Setu: ರಾಮ ಸೇತುವೆ ವಿಚಾರದಲ್ಲಿ ಮುಂದುವರಿಯಲು ಅಭಿಮಾನಿಗಳ ಅಭಿಪ್ರಾಯ ಕೇಳುತ್ತಿರುವ ನಟ ಅಕ್ಷಯ್​ ಕುಮಾರ್​!

Akshay Kumar: ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾದ ಲುಕ್​ನೊಂದಿಗೆ ‘ರಾಮ್​ ಸೇತು’ಗಾಗಿ ಅಕ್ಷಯ್​ ಕುಮಾರ್​ ಶೂಟಿಂಗ್​ ಆರಂಭಿಸಿದ್ದಾರೆ. ಸ್ವಲ್ಪ ಉದ್ದ ಕೂದಲು, ಗಂಭೀರ ಮುಖಭಾವ, ಅದಕ್ಕೆ ಒಪ್ಪುವಂತಹ ಕನ್ನಡಕ ಧರಿಸಿ ಅಕ್ಕಿ ಪೋಸ್ ನೀಡಿದ್ದಾರೆ.

Ram Setu: ರಾಮ ಸೇತುವೆ ವಿಚಾರದಲ್ಲಿ ಮುಂದುವರಿಯಲು ಅಭಿಮಾನಿಗಳ ಅಭಿಪ್ರಾಯ ಕೇಳುತ್ತಿರುವ ನಟ ಅಕ್ಷಯ್​ ಕುಮಾರ್​!
ಅಕ್ಷಯ್​ ಕುಮಾರ್​ - ರಾಮ್​ ಸೇತು
Follow us
ಮದನ್​ ಕುಮಾರ್​
|

Updated on: Mar 31, 2021 | 8:49 AM

ಬಾಲಿವುಡ್​ನ ಬೇರೆಲ್ಲ ನಟರನ್ನೂ ಹಿಂದಿಕ್ಕಿ ತಮ್ಮದೇ ಆದ ಚಾರ್ಮ್​ ಕಾಪಾಡಿಕೊಂಡಿರುವ ನಟ ಅಕ್ಷಯ್​ ಕುಮಾರ್​ ಅವರು ಸದ್ಯ ‘ರಾಮ್​ ಸೇತು’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ಮುಹೂರ್ತ ನೆರವೇರಿಸಿ ಶೂಟಿಂಗ್​ ಆರಂಭಿಸಲಾಗಿತ್ತು. ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಎನ್ನುವಾಗ ಅಕ್ಷಯ್​ ಕುಮಾರ್​ ಅವರು ಈ ಸಿನಿಮಾ ಕುರಿತಂತೆ ಅಭಿಮಾನಿಗಳ ಸಲಹೆ ಕೇಳುತ್ತಿದ್ದಾರೆ!

ಅಭಿಮಾನಿಗಳ ಬಳಿ ಅಕ್ಷಯ್​ ಕುಮಾರ್​ ಸಲಹೆ ಕೇಳುತ್ತಿದ್ದಾರೆ ಎಂದಮಾತ್ರಕ್ಕೆ ಅವರಿಗೆ ಏನೋ ಗೊಂದಲ ಕಾಡುತ್ತಿದೆ ಎಂದೇನಲ್ಲ. ಸದ್ಯ ಅವರು ಈ ಸಿನಿಮಾದಲ್ಲಿ ತಮ್ಮ ಲುಕ್​ ಹೇಗಿರಲಿದೆ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆ ಲುಕ್​ ಬಗ್ಗೆ ಫ್ಯಾನ್ಸ್​ ಕಡೆಯಿಂದ ಪ್ರತಿಕ್ರಿಯೆ ಪಡೆಯಲು ಕಾಯುತ್ತಿದ್ದಾರೆ. ಈ ಕುರಿತಂತೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಮಾಡಿದ್ದಾರೆ.

‘ನನ್ನ ಪಾಲಿನ ಒಂದು ವಿಶೇಷ ಸಿನಿಮಾದ ಪಯಣ ಇಂದು ಶುರುವಾಗಿದೆ. ರಾಮ್​ ಸೇತು ಶೂಟಿಂಗ್​ ಆರಂಭ ಮಾಡಿದ್ದೇವೆ. ಒಬ್ಬ ಪುರಾತತ್ವಶಾಸ್ತ್ರಜ್ಞನಾಗಿ ಈ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ನನ್ನ ಲುಕ್​ ಹೇಗಿದೆ ಎಂಬುದನ್ನು ನಿಮ್ಮಿಂದ ಕೇಳಿ ತಿಳಿದುಕೊಳ್ಳಲು ಬಯಸುತ್ತೇನೆ. ನಿಮ್ಮ ಅಭಿಪ್ರಾಯ ನನಗೆ ಯಾವಾಗಲೂ ಮುಖ್ಯವಾಗುತ್ತದೆ’ ಎಂದು ಅಕ್ಷಯ್​ ಕುಮಾರ್​ ಪೋಸ್ಟ್​ ಮಾಡಿದ್ದಾರೆ.

ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾದ ಲುಕ್​ನೊಂದಿಗೆ ‘ರಾಮ್​ ಸೇತು’ಗಾಗಿ ಅಕ್ಷಯ್​ ಕುಮಾರ್​ ಶೂಟಿಂಗ್​ ಆರಂಭಿಸಿದ್ದಾರೆ. ಸ್ವಲ್ಪ ಉದ್ದ ಕೂದಲು, ಗಂಭೀರ ಮುಖಭಾವ, ಅದಕ್ಕೆ ಒಪ್ಪುವಂತಹ ಕನ್ನಡಕ ಧರಿಸಿ ಅಕ್ಕಿ ಪೋಸ್ ನೀಡಿದ್ದಾರೆ. ಅಭಿಮಾನಿಗಳಿಗೆ ಈ ಲುಕ್​ ತುಂಬ ಇಷ್ಟವಾಗಿದೆ. ರಾಮ ಸೇತು ನಿಜವೋ ಅಥವಾ ಕಾಲ್ಪನಿಕವೋ ಎಂಬ ಚರ್ಚೆ ಬಹಳ ಕಾಲದಿಂದಲೂ ನಡೆಯುತ್ತಲೇ ಇದೆ. ಅದೇ ಅಂಶವನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ತಯಾರಾಗುತ್ತಿದೆ.

View this post on Instagram

A post shared by Akshay Kumar (@akshaykumar)

2020ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​ ಈ ಚಿತ್ರವನ್ನು ಘೋಷಿಸಿದರು. ಆಗಿನಿಂದಲೇ ‘ರಾಮ್​ ಸೇತು’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತು. ಈ ಚಿತ್ರಕ್ಕೆ ಕೇಪ್​ ಆಫ್​ ಗುಡ್​ ಫಿಲ್ಮ್ಸ್​, ಅಬಂಡಾನ್ಷಾ ಎಂಟರ್​ಟೇನ್​ಮೆಂಟ್​, ಅಮೇಜಾನ್​ ಪ್ರೈಂ ವಿಡಿಯೋ ಮತ್ತು ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಗಳು ಬಂಡವಾಳ ಹೂಡುತ್ತಿವೆ.

ಇದನ್ನೂ ಓದಿ: ರಾಮ ಸೇತು ವಿಚಾರಕ್ಕೆ ಕೈ ಹಾಕಿದ ಅಮೇಜಾನ್​ ಪ್ರೈಂ! ಅಕ್ಷಯ್​ ಕುಮಾರ್​ ಮೇಲೆ ದೊಡ್ಡ ಜವಾಬ್ದಾರಿ

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ