ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡಿ: ಅಭಿಮಾನಿಗಳ ಬಳಿ ಅಕ್ಷಯ್ ಕುಮಾರ್ ಮನವಿ
ಅಳಿಲಿನಂತೆ ನಾನೂ ಕೂಡ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನನ್ನ ಅಳಿಲು ಸೇವೆ ನೀಡುತ್ತಿದ್ದೇನೆ. ನಿಮ್ಮ ಕೈಲಾದಷ್ಟು ಹಣ ನೀಡಿ ಎಂದು ಅಭಿಮಾನಿಗಳ ಬಳಿ ಅಕ್ಷಯ್ ಕೋರಿದ್ದಾರೆ.
ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಅಡಿಗಲ್ಲು ಹಾಕಿದ್ದರು. ಸದ್ಯ, ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇತ್ತ, ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡುವಂತೆ ನಟ ಅಕ್ಷಯ್ ಕುಮಾರ್ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಅಕ್ಷಯ್ ಕುಮಾರ್ ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಮಾಡಿ ಹಾಕಿದ್ದಾರೆ. ನಿನ್ನೆ ರಾತ್ರಿ ನನ್ನ ಮಗಳಿಗೆ ಕಥೆಯೊಂದನ್ನು ಹೇಳಿದ್ದೆ ಎಂದು ಅಕ್ಷಯ್ ಕುಮಾರ್ ಮಾತು ಆರಂಭಿಸಿದ್ದಾರೆ. ಒಂದು ಕಡೆ ವಾನರ ಸೇನೆ. ಮತ್ತೊಂದು ಕಡೆಯಲ್ಲಿ ಲಂಕೆ. ಇಬ್ಬರ ನಡುವೆ ಮಹಾ ಸಾಗರ. ವಾನರ ಸೇನೆ ದೊಡ್ಡದೊಡ್ಡ ಕಲ್ಲುಗಳನ್ನು ಎತ್ತಿಕೊಂಡು ಸಮುದ್ರಕ್ಕೆ ಹಾಕುತ್ತಿತ್ತು. ಶ್ರೀ ರಾಮ ಚಂದ್ರ ದಂಡೆಯಲ್ಲಿ ನಿಂತು ಎಲ್ಲವನ್ನೂ ನೋಡುತ್ತಿದ್ದರು. ಈ ವೇಳೆ ರಾಮನ ಕಣ್ಣಿಗೆ ಒಂದು ಅಳಿಲು ಬಿದ್ದಿತ್ತು.
ಈ ಅಳಿಲು ನೀರಿಗೆ ತೆರಳುತ್ತಿತ್ತು. ಮತ್ತೆ ದಡಕ್ಕೆ ಬಂದು ಮರಳಿನಲ್ಲಿ ಹೊರಳಾಡುತ್ತಿತ್ತು. ರಾಮ ಸೇತುವೆಗೆ ಹಾಕಿದ ಕಲ್ಲುಗಳ ಮೇಲೆ ಓಡಾಡಿ ಮರಳನ್ನು ಕೆಡವುತ್ತಿತ್ತು. ಇದರಿಂದ ಅಚ್ಚರಿಗೊಂಡ ರಾಮ, ಅಳಿಲಿನ ಬಳಿ ತೆರಳಿ ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದ. ಆಗ ಅಳಿಲು ತನ್ನ ಚಿಕ್ಕ ಸೇವೆಯ ಬಗ್ಗೆ ಹೇಳಿಕೊಂಡಿತ್ತು. ಅದೇ ರೀತಿ ನಾನು ಕೂಡ ಅಯೋಧ್ಯೆ ನಿರ್ಮಾಣಕ್ಕೆ ನನ್ನ ಅಳಿಲು ಸೇವೆ ನೀಡುತ್ತಿದ್ದೇನೆ. ನಿಮ್ಮ ಕೈಲಾದಷ್ಟು ಹಣ ನೀಡಿ ಎಂದು ಅಭಿಮಾನಿಗಳ ಬಳಿ ಅಕ್ಷಯ್ ಕೋರಿದ್ದಾರೆ.
बहुत खुशी की बात है कि अयोध्या में हमारे श्री राम के भव्य मंदिर का निर्माण शुरू हो चूका है…अब योगदान की बारी हमारी है l मैंने शुरुआत कर दी है, उम्मीद है आप भी साथ जुड़ेंगे l जय सियाराम ?? pic.twitter.com/5SvzgfBVCf
— Akshay Kumar (@akshaykumar) January 17, 2021
ರಾಮ ಮಂದಿರ ನಿರ್ಮಾಣಕ್ಕೆ ದೇಶದ 5,25,000 ಗ್ರಾಮಗಳಲ್ಲಿ ಹಣ ಸಂಗ್ರಹ ಮಾಡುವ ಕಾರ್ಯ ಆರಂಭಗೊಂಡಿದೆ. ಜನವರಿ 15ರಿಂದ ಫೆಬ್ರವರಿ 27ರ ವರೆಗೆ ಹಣ ಸಂಗ್ರಹಣೆ ಕಾರ್ಯ ನಡೆಯಲಿದೆ.
Ram Temple Construction Fund ರಾಮ ಮಂದಿರ ನಿರ್ಮಾಣ ನಿಧಿ ಅಭಿಯಾನ: RSSಗೆ ಸಾಥ್ ನೀಡಿದ ಸುಮಲತಾ