ಕುಂದಾಪ್ರ ಕನ್ನಡ ನಿಘಂಟು: ಕುಂದಾಪುರ ಕನ್ನಡದ ಭಾಷಿ ಅಳಿಯದೆ ಉಳಿಯಲು ಒಂದು ಹೊಸ ಪ್ರಯತ್ನ

ಪಂಜು ಗಂಗೊಳ್ಳಿಯವರ ಪ್ರಧಾನ ಸಂಪಾದಕತ್ವದಲ್ಲಿ ಜನವರಿ 26ರಂದು ಬಿಡುಗಡೆಯಾಗುತ್ತಿರುವ ಈ ಕುಂದಾಪ್ರ ಕನ್ನಡ ನಿಘಂಟು ನಿಜಕ್ಕೂ ಕುಂದಾಪುರ ಕನ್ನಡದ ಹಲವು ಶಬ್ದಳನ್ನು ಒಟ್ಟಿಗೆ ಸೇರಿಸಿ ಜನರ ಮನೆಯನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದೆ.

ಕುಂದಾಪ್ರ ಕನ್ನಡ ನಿಘಂಟು: ಕುಂದಾಪುರ ಕನ್ನಡದ ಭಾಷಿ ಅಳಿಯದೆ ಉಳಿಯಲು ಒಂದು ಹೊಸ ಪ್ರಯತ್ನ
ಕುಂದಾಪ್ರ ಕನ್ನಡ ನಿಘಂಟು
Follow us
preethi shettigar
| Updated By: ರಶ್ಮಿ ಕಲ್ಲಕಟ್ಟ

Updated on: Jan 17, 2021 | 7:47 PM

ಇಲ್ಲಿ ಮಾತನಾಡುವ ಕನ್ನಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡದ ಜೊತೆಗೆ ಹುಟ್ಟಿಕೊಂಡ ಪ್ರಾದೇಶಿಕ ಭಾಷೆಗಳಲ್ಲಿ ಇದು ಕೂಡ ಒಂದು. ಇದರ ಹಿರಿಮೆಗೆ ಅದರದ್ದೇ ಆದ ಒಂದು ಮೌಲ್ಯವಿದೆ. ಹಾಗಿದ್ದರೆ ಕುಂದಾಪುರ ಕನ್ನಡ ನಮ್ ಬಾಷಿ ಎನ್ನುವ ಜನರ ನಡುವೆ ಈ ಭಾಷೆಯನ್ನು ಅಳಿಯದ ಹಾಗೆ ಉಳಿಸುವ ಪ್ರಯತ್ನದಲ್ಲಿ ಒಂದು ಹೊಸ ಪರಿಕಲ್ಪನೆಗೆ ಈಗ ಈ ಕುಂದಾಪುರ ಭಾಷೆ ಸಾಕ್ಷಿಯಾಗುತ್ತಿದೆ. ಅರೇ ಅದ್ಯಾವ ಹೊಸ ವಿಷಯ ಎಂದು ಹುಬ್ಬೇರಿಸುವವರಿಗೆ ಉತ್ತರ ಇಲ್ಲಿದೇ ನೋಡಿ.

ಬಾಷಿ ಅಂದ್ರ್ ಬದ್ಕ್, ನಿಜ ಭಾಷೆ ಎಂದರೆ ಬದುಕು ಆ ಭಾಷೆ ಒಂದೊಂದು ಮನೆಯ ಹೊಸ್ತಿಲಿನ ಒಳಗೆ ಒಂದೊಂದು ತರನಾಗಿರುತ್ತದೆ. ಅನ್ಯ ಭಾಷೆ ಮಾತನಾಡುವುದು ಒಂದು ರೀತಿಯದ್ದಾದರೆ, ಕನ್ನಡ ಭಾಷೆಯನ್ನೇ ಹಲವು ನೆಲೆಗಟ್ಟುಗಳಲ್ಲಿ ಮಾತನಾಡುವವರ ಗುಂಪು ಇದೆ. ಮಲೆನಾಡಿನ ಕನ್ನಡಕ್ಕೂ, ಉತ್ತರ ಕನ್ನಡದ ಕನ್ನಡಕ್ಕೂ, ಕುಂದಾಪುರ ಕನ್ನಡಕ್ಕೂ ವ್ಯತಾಸವಿದೆ. ಈ ರೀತಿಯಾಗಿ ಕುಂದಾಪುರ ಕನ್ನಡ ಮಾತನಾಡುವವರಿಗೆ ಈಗ ಒಂದು ಸಿಹಿ ಸುದ್ದಿ ಇದೆ.

ನಮ್ಮ ಭಾಷೆ ಸದಾ ಕಾಲ ಇರಬೇಕು ಎಂದಿಗೂ ಅದು ತನ್ನ ಮಹತ್ವವನ್ನು ಕಳೆದುಕೊಳ್ಳಬಾರದು ಎನ್ನುವುದು ಪ್ರತಿಯೊಬ್ಬ ಭಾಷಾ ಪ್ರಿಯರ ಅನಿಸಿಕೆಯಾಗಿರುತ್ತದೆ. ಆದರೆ ಕೇವಲ ಭಾಷಾ ಪ್ರೀತಿ ಇದ್ದರೆ ಸಾಲದು ಆ ಭಾಷೆಯನ್ನು ಮುಂದಿನ ಪೀಳಿಗೆಯವರಿಗೆ ತಲುಪುವಂತೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿಯೇ ಕುಂದಾಪುರ ಕನ್ನಡದ ನಿಘಂಟು ಬಿಡುಗಡೆಯಾಗುತ್ತಿದ್ದು, 1000ಕ್ಕೂ ಹೆಚ್ಚು ಶಬ್ದಗಳು ಮತ್ತು 1700ಕ್ಕೂ ಹೆಚ್ಚು ನುಡಿಗಟ್ಟುಗಳನ್ನು ಇದು ಒಳಗೊಂಡಿದೆ.

ಪಂಜು ಗಂಗೊಳ್ಳಿಯವರ ಪ್ರಧಾನ ಸಂಪಾದಕತ್ವದಲ್ಲಿ ಜನವರಿ 26ರಂದು ಬಿಡುಗಡೆಯಾಗುತ್ತಿರುವ ಈ ಕುಂದಾಪ್ರ ಕನ್ನಡ ನಿಘಂಟು ನಿಜಕ್ಕೂ ಕುಂದಾಪುರ ಕನ್ನಡದ ಹಲವು ಶಬ್ದಳನ್ನು ಒಟ್ಟಿಗೆ ಸೇರಿಸಿ ಜನರ ಮನೆಯನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಕೇವಲ ₹400ರೂಪಾಯಿಗೆ ಈ ಪುಸ್ತಕ ಮಾರಾಟವಾಗಲು ಸಿದ್ಧವಾಗಿದ್ದು, ಜನರಿಗೆ ಕಡಿಮೆ ಬೆಲೆಗೆ ಪುಸ್ತಕ ಸಿಗಲಿ ಎನ್ನುವುದು ಪಂಜು ಗಂಗೊಳ್ಳಿಯವರ ಉದ್ದೇಶ.

ಮುಂಬೈಯಲ್ಲಿ ಇರುವಾಗ ಈ ನಿಘಂಟಿನ ಮೂಲ ಹುಟ್ಟಿಕೊಂಡಿತು. ಅಂದರೆ ನಾನು ಮುಂಬೈ ಅಲ್ಲಿ ಇರುವಾಗ ಒಂದೊಮ್ಮೆ ಜುಲೈ ತಿಂಗಳ ವೇಳೆ ಜೋರಾಗಿ ಮಳೆ ಬರುತ್ತಲಿತ್ತು. ಆಗ ನನ್ನ ಕುಂದಾಪುರ ಮೂಲದ ಒಬ್ಬ ಸ್ನೇಹಿತ ಜಿರಾಪತಿ ಮಳೆ ಬರುತ್ತಾ ಇದೆ ಮರೆಯಾ ಅಂದ. ಹಾಗಂದಾಗ ನಾನು ಕುಂದಾಪುರ ಮೂಲದವನಾದರೂ ಅದರ ಸರಿಯಾದ ಅರ್ಥ ನನಗೆ ಆರಂಭದಲ್ಲಿ ಗೊತ್ತಾಗಲಿಲ್ಲ. ಆಗ ನನ್ನ ಸ್ನೇಹಿತ ಬಾಬು ಶಿವು ಪೂಜಾರಿ ಚಿರಾಪುಂಜಿಯ ಅಪಭ್ರಂಶ ಎಂದು ಹೇಳಿದರು. ನನಗೆ ಆ ಶಬ್ದದ ಅರ್ಥ ಕುತೂಹಲ ಹುಟ್ಟಿಸಿದ್ದು, ಹಾಗಿದ್ದರೆ ಕುಂದಾಪುರದಲ್ಲಿ ಅರ್ಥವೇ ತಿಳಿಯದ ಪದಗಳೆಷ್ಟು ಇರಬಹುದು ಎಂಬ ನೆಲಗಟ್ಟಿನಲ್ಲಿ ಇದು ಪ್ರಾರಂಭವಾಯಿತು ಅಂತಾರೆ ವ್ಯಂಗ್ಯ ಚಿತ್ರಕಾರರಾದ ಪಂಜು ಗಂಗೊಳ್ಳಿ.

ಭಾಷೆ ಎಂದರೆ ಬದುಕು

ನಾನು ಈ ರೀತಿಯ ಪದಗಳ  ಹುಡುಕಾಟ  ಶುರುಮಾಡಿದ್ದು ಜುಲೈ 2001ರಲ್ಲಿ. ಹೀಗೆ ಹುಡುಕುವಾಗ ಹಲವಾರು ಹೊಸ ಪದಗಳ ಪರಿಚಯವಾಯಿತು. ಅಂಥ ಪದಗಳಲ್ಲೊಂದು ಹರ್ಮೈಕಾ . ಅಂದರೆ ಹರಿ ಮತ್ತು ಮಯಾಕ, ಹರಿ ಅಂದರೆ ವಿಷ್ಣು, ಮಯಾಕ-ಚಮತ್ಕಾರ. ಅಷ್ಟೇ ಪ್ರಮುಖವಾದ ಇನ್ನೊಂದು ಪದ ಜ್ವಾಗಳಾ. ಇದನ್ನು ಪಂಜು ಗಂಗೊಳ್ಳಿ ಅವರ ಸಂದರ್ಶನದ ವೇಳೆ ಹಾಸ್ಯವಾಗಿ ಅವಳ್ ಜ್ವಾಗಳಾ ಆಯ್ತ್ ಈಗಾ ನಿನ್ ಜ್ವಾಗಳಾ ಶುರು ಮಾಡ್ದಾಯಾ ಅಂದರು. ಆದರೆ ಈ ಪದಕ್ಕೆ ಮುಖ್ಯ ಅರ್ಥ ಇದೆ ಎಂಬುವುದು ತಿಳಿದಿದ್ದು, ಹಿಂದೆ ಮಗು ಸತ್ತಾಗ ಮಗು ಸತ್ತಿದೆ ಎನ್ನುತ್ತಿರಲಿಲ್ಲಾ ಜ್ವಾಗಳಾ ಎಂದು ಕರೆಯುತ್ತಿದ್ದರು. ಈ ರೀತಿಯ ಹಲವು ಶಬ್ಧಗಳು ನನ್ನನ್ನು ನಿಘಂಟು ರಚನೆ ಮಾಡುವ ಕಡೆಗೆ ಕರೆದುಕೊಂಡು ಹೋಯ್ತು.

2001ರಲ್ಲಿ ಶುರುವಾದ ಈ ಕೆಲಸ 20 ವರ್ಷ ತೆಗೆದುಕೊಂಡಿದ್ದು, ಒಬ್ಬನಿಂದ ಶುರುವಾದ ಈ ಪಯಣ ನಂತರದ ದಿನಗಳಲ್ಲಿ ಹಲವಾರು ನನ್ನ ಸ್ನೇಹಿತರು ಸೇರಿಕೊಳ್ಳುತ್ತಾ ಹೊದರು. ಊರಿಗೂ ಕೂಡ ನಾಲ್ಕೈದು ಬಾರಿ ಬಂದು ಸುಮ್ಮನೆ ಊರಲ್ಲಿ ತಿರುಗಾಟ ಆರಂಭಿಸಿದೆ. ಆಗ ನನಗೆ ಇನ್ನೊಂದು ವಿಷಯ ತಿಳಿಯಿತು. ಅಂದರೆ ಕುಂದಾಪುರ ಕನ್ನಡಕ್ಕೂ, ಗಂಗೊಳ್ಳಿಯಲ್ಲಿ ಮಾತನಾಡುವ ಕುಂದಾಪುರ ಕನ್ನಡಕ್ಕೂ ವ್ಯತ್ಯಾಸ ಇದೆ. ಹಾಗೆ ಬೈಂದೂರಿನಲ್ಲಿ ಮಾತನಾಡುವುದಕ್ಕೂ ಕೊಲ್ಲೂರಿನಲ್ಲಿ ಮಾತನಾಡುವ ಕುಂದಾಪುರ ಕನ್ನಡಕ್ಕೂ ಭಿನ್ನತೆ ಇದೆ. ಇಷ್ಟು ಸಣ್ಣ ಜಾಗದಲ್ಲಿ ಈ ಕುಂದಾಪುರ ಕನ್ನಡ ಇದ್ದರು ಕೂಡ ಶ್ರೀಮಂತವಾಗಿದೆ. ಊರು ಊರಿಗೆ, ಜಾತಿ ಜಾತಿಗೆ ಈ ಭಾಷೆ ಭಿನ್ನವಾಗಿದೆ ಎಂದು ತಮ್ಮ ಅನುಭವವನ್ನು ಪಂಜು ಗಂಗೊಳ್ಳಿ ಹಂಚಿಕೊಂಡರು.

ಈ ಎಲ್ಲಾ ಕಾರಣಗಳಿಂದಾಗಿ ಕುಂದಾಪ್ರ ನಿಘಂಟಿನಲ್ಲಿ ಸುಮಾರು 10000 ಪದಗಳನ್ನು ಬರೆಯಲಾಗಿದೆ. ಅಂದರೆ ಶಿಷ್ಟ ಕನ್ನಡದಲ್ಲಿ ಬಳಕೆ ಆಗದೇ ಬರಿ ಕುಂದಾಪುರ ಕನ್ನಡದಲ್ಲಿ ಮಾತ್ರವೇ ಬಳಕೆಯಲ್ಲಿರುವ ಪದಗಳನ್ನು ಪಟ್ಟಿ ಮಾಡಲಾಗಿದೆ. ಹಾಗೆ ನೋಡಬೇಕೆಂದರೆ ಇದೊಂದು ಪ್ರತ್ಯೇಕ ಭಾಷೆ ಅಲ್ಲ, ಇದೊಂದು ಹಳೆಗನ್ನಡ ನಂತರದಲ್ಲಿ ಕುಂದಾಪುರ ಪ್ರಾದೇಶಿಕತೆ ಪಡೆದುಕೊಳ್ಳುತ್ತಾ ಹೋಯಿತು. ಈಗ ಜನವರಿ 26ರಂದು ಮೊದಲ ಭಾಗವನ್ನು ಬಿಡುಗಡೆ ಮಾಡುತ್ತಿದ್ದೇವೆ ಇದರಲ್ಲಿ 10000ಕ್ಕೂ ಹೆಚ್ಚು ಕುಂದಾಪುರ ಕನ್ನಡ ಶಬ್ದಗಳು ಮತ್ತು 1700 ನುಡಿಗಟ್ಟುಗಳು ಇರಲಿದೆ. ಇನ್ನು ಇದಾದ ನಂತರ ಎರಡನೇ ಭಾಗವನ್ನು ಬಿಡುಗಡೆ ಮಾಡುತ್ತೇವೆ. ಅದರಲ್ಲಿ ಕೇವಲ ಹಾಡುಗಳು ಇರಲಿದೆ ಎಂದು ಪಂಜು ಗಂಗೊಳ್ಳಿ ತಿಳಿಸಿದ್ದಾರೆ.

ಪಂಜು ಗಂಗೊಳ್ಳಿ ಸಂಪಾದಕತ್ವದ ಕುಂದಾಪ್ರ ಕನ್ನಡ ನಿಘಂಟು

ಭಾಷೆ ಮೇಲಿರುವ ಪ್ರೀತಿಯೇ ಪ್ರೇರಣೆ

ಮರೆತು ಹೋದ ಎಲ್ಲಾ ಕುಂದಾಪುರ ಕನ್ನಡದ ಪದಗಳನ್ನು ಒಟ್ಟಿಗೆ ಸೇರಿಸುವ ಪ್ರಯತ್ನವಾಗಿದ್ದು, ಇದನ್ನು ಮಾಡಲು ಪ್ರಮುಖ ಸ್ಪೂರ್ತಿ ಈ ಭಾಷೆ ಮೇಲೆ ಇರುವ ಪ್ರೀತಿ ಮತ್ತು ಕಾಳಜಿ. ಇಂಗ್ಲಿಷ್ ಶಬ್ದ ನಮ್ಮ ಕನ್ನಡವನ್ನೇ ಕಸಿದುಕೊಂಡಿದೆ. ಹೀಗಾಗಿ ಈ ನಿಘಂಟು ಅಗತ್ಯ ಎನಿಸಿದ್ದು, ನಾವು ದಿನನಿತ್ಯ ಕಂದಾಪುರ ಕನ್ನಡದ 100 ಶಬ್ದಗಳನ್ನು ಬಳಸಬಹುದು ಇನ್ನೂ ಉಳಿದವುಗಳು ಅಳಿಯದಂತೆ ಉಳಿಯಲು ಖಂಡಿತಾ ಈ ನುಡಿಗಟ್ಟು ಸಹಾಯಕವಾಗುತ್ತದೆ. ಒಂದು ಶಬ್ದಕ್ಕಾಗಿ ನಾನು 4 ವರ್ಷ ಅಲೆದಾಡಿದ್ದೇನೆ. ಹಜಾನ್ ಹರಿದ್ ಎಂಬ ಪದವನ್ನು ನಮ್ಮ ಮನೆಯಲ್ಲಿ ಸಣ್ಣ ಮಕ್ಕಳಿಗೆ ಲಘು ಬೈಗುಳದ ರೀತಿಯಲ್ಲಿ ಇದನ್ನು ಬಳಸುತ್ತಿದ್ದರು. ಆದರೆ ಅದರ ಸರಿಯಾದ ಅರ್ಥ ಯಾರಿಗೂ ಗೊತ್ತಿಲ್ಲ. ಕಡೆಗೆ ತಿಳಿಯಿತು ಗಂಗೊಳ್ಳಿಯಲ್ಲಿ ಈ ಪದವನ್ನು ಬಳಸುತ್ತಾರೆ. ಹಜಾ ಎಂದರೆ ಸೊಕ್ಕಿದ ಹಸುವಿನ ಕುತ್ತಿಗೆಗೆ ಕುಂಟೆ ನೇತು ಹಾಕುವುದು ಅಂದರೆ ಕಡಿವಾಣದಲ್ಲಿ ಇಲ್ಲದ ಮಕ್ಕಳು ಎಂದು ಕರೆಯಲಾಗುತ್ತದೆ ಎಂದು ಪಂಜು ಗಂಗೊಳ್ಳಿ ಹೇಳಿದರು.

ಪ್ರಕಟಣೆಗೆ ಸಂಬಂಧಿಸಿದ ಜವಾಬ್ದಾರಿಯನ್ನು ನನ್ನ ಗೆಳೆಯರಾದ ರಾಜಾರಾಮ್ ಅವರು ತೆಗೆದುಕೊಂಡಿದ್ದರಿಂದ ಬಹಳ ಉಪಯೋಗವಾಗಿದೆ. ನಾವು ಪುಸ್ತಕ ಬರೆದರು ಕೂಡ ಅದು ಜನರ ಕೈ ಸೇರಿದಾಗ ಮಾತ್ರ ಅದಕ್ಕೆ ಒಂದು ಪ್ರತಿಫಲ ಸಿಕ್ಕಿದ ಹಾಗೆ ಆಗುತ್ತದೆ. ಈ ನಿಟ್ಟಿನಲ್ಲಿ ರಾಜಾರಾಮ್ ಬಹಳಷ್ಟು ರಿಸ್ಕ್ ತೆಗೆದುಕೊಂಡಿದ್ದಾರೆ. ಕುಂದಾಪುರ ಕನ್ನಡಿಗರ ಮನೆಗಳಿಗೆ ಇದನ್ನು ತಲುಪಿಸುವ ಜವಾಬ್ದಾರಿಯನ್ನು ಅವರೇ ಸ್ವತಃ ತೆಗೆದುಕೊಂಡಿದ್ದಾರೆ. ನೊ ಲೊಸ್ ನೊ ಪ್ರಾಫಿಟ್ ನಿಟ್ಟಿನಲ್ಲಿ 400ರೂ. ಬೆಲೆ ನಿಗದಿ ಮಾಡಿದ್ದು, ಇದು 725ಪುಟಗಳನ್ನು ಹೊಂದಿದ ನಿಘಂಟಾಗಿದೆ ಎಂದು ಪಂಜು ಗಂಗೊಳ್ಳಿ ಹೇಳಿದರು.

ಉಡುಪಿ ಜಿಲ್ಲೆ ಕುಂದಾಪುರ ಮೂಲದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನೀಡುವ ಹಿಗ್ಗು- ಅರಿವಿನ ಮಾಲೆ ಪುಸ್ತಕ ದತ್ತಿ ಪ್ರಶಸ್ತಿಗೂ ಕೂಡ ಈ ಕುಂದಾಪುರ ಕನ್ನಡ ನಿಘಂಟು ಆಯ್ಕೆಯಾಗಿದ್ದು, ಈ ದತ್ತಿಯ 2 ಲಕ್ಷ ರೂಪಾಯಿಗಳನ್ನು ಟ್ರಸ್ಟ್ ಬಹಳ ಹೆಮ್ಮೆಯಿಂದ ಕುಂದಾಪುರ ಕನ್ನಡ ನಿಘಂಟಿನ ಪ್ರಕಟಣೆಗೆ ಬಳಸಿದ್ದು, ಈ ಟ್ರಸ್ಟಿನ ಕರಾವಳಿ ಕಟ್ಟು ಚಟುವಟಿಕೆಗಳ ಭಾಗವಾಗಿ ಈ ಪುಸ್ತಕ ಪ್ರಕಟಗೊಳ್ಳಲಿದೆ. ಮುದ್ರಣ ಪೂರ್ವ ಖರೀದಿಗೂ ರಿಯಾಯತಿ ದರದಲ್ಲಿ ಈ ಪುಸ್ತಕ ಲಭ್ಯವಾಗಲಿದೆ. ಪುಸ್ತಕದ ಪ್ರಕಟಪೂರ್ವ ಮಾರಾಟವನ್ನು ಬುಕ್​ ಬ್ರಹ್ಮ ತಂಡ ನಿಭಾಯಿಸುತ್ತಿದ್ದು, ಪುಸ್ತಕ ಖರೀದಿಗೆ ಆಸಕ್ತರು ದೂರವಾಣಿ ಸಂಖ್ಯೆ 8495024253ಗೆ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮೂಲಕ ಪಾವತಿ ಮಾಡಬಹುದು. ಆ ಮೂಲಕ ಪುಸ್ತಕದ ಬಿಡುಗಡೆ ದಿನದಂದೇ ನಿಘಂಟನ್ನು ಮನೆಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ.

ಒಟ್ಟಿನಲ್ಲಿ ಭಾಷೆಯನ್ನು ಉಳಿಸುವಲ್ಲಿ ಯಾರೇ ಪ್ರಯತ್ನಪಟ್ಟರು ಕೂಡ ಅದು ಹೆಮ್ಮೆಯ ವಿಚಾರವಾಗಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಇಂತಹ ವಿಚಾರಗಳು ಹೆಚ್ಚು ಆಗಲಿ ಎನ್ನುವುದೇ ನಮ್ಮ ಆಶಯ.

‘ಶ್ರೀ ಕಥಾಮಂಜರಿ’ ಗದ್ಯ ಕಾವ್ಯ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು