AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಎಗರಿದ್ರೆ ನೀನು ಸತ್ತೋಗ್ತಿದ್ದೆ; ಪ್ರಶಾಂತ್​ಗೆ ಖಡಕ್​ ಎಚ್ಚರಿಕೆ ನೀಡಿದ ಅರವಿಂದ್

ಈ ಆಟ ಆಡುವಾಗ ಪ್ರಶಾಂತ್​ ಸಂಬರಗಿ ಸ್ವಲ್ಪ ಕ್ರೂರವಾಗಿ ವರ್ತಿಸಿರುವುದು ಮನೆಯವರ ಗಮನಕ್ಕೆ ಬಂದಿದೆ. ಪ್ರತಿ ಸ್ಪರ್ಧಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು, ಅವರ ಮೇಲೆ ಆಕ್ರಮಣಕಾರಿಯಾಗಿ ನಡೆದುಕೊಳ್ಳುವುದು ಮಾಡುತ್ತಿದ್ದರು.

ನಾನು ಎಗರಿದ್ರೆ ನೀನು ಸತ್ತೋಗ್ತಿದ್ದೆ; ಪ್ರಶಾಂತ್​ಗೆ ಖಡಕ್​ ಎಚ್ಚರಿಕೆ ನೀಡಿದ ಅರವಿಂದ್
ಅರವಿಂದ್​-ಪ್ರಶಾಂತ್​
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: Mar 31, 2021 | 7:40 AM

Share

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯಲು ಬಿಗ್​ ಬಾಸ್ ಮನೆಯಲ್ಲಿ​ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ ವೇಳೆ ಮನೆಯ ಸ್ಟ್ರಾಂಗ್​ ಕಂಟೆಸ್ಟೆಂಟ್​ಗಳಾದ ಅರವಿಂದ್​ ಕೆ.ಪಿ ಹಾಗೂ ಪ್ರಶಾಂತ್​ ಸಂಬರಗಿ ನಡುವೆ ಗಂಭೀರ ಮಾತಿನ ಚಕಮಕಿ ನಡೆದಿದೆ. ಈ ಮಾತಿನ ಚಕಮಕಿ ಮಿತಿಮೀರಿ ಪ್ರಶಾಂತ್​ಗೆ ಅರವಿಂದ್ ಎಚ್ಚರಿಕೆ ಕೂಡ ನೀಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಎರಡು ಟೀಂಗಳನ್ನು ಮಾಡಲಾಗಿದೆ. ಒಂದು ಟೀಂಗೆ ದಿವ್ಯಾ ಕ್ಯಾಪ್ಟನ್​ ಆದರೆ, ಮತ್ತೊಂದು ತಂಡಕ್ಕೆ ಶುಭಾ ಪೂಂಜಾ ಕ್ಯಾಪ್ಟನ್​. ಇಟ್ಟಿಗೆ ಸಂಗ್ರಹಿಸಿ ಗೋಪುರ ಕಟ್ಟಿ ಅದನ್ನು ಕಾಯ್ದುಕೊಳ್ಳಬೇಕು. ಸಾಮಾನ್ಯ ಬಣ್ಣದ ಇಟ್ಟಿಗೆಗೆ 1 ಅಂಕ, ಕಲರ್​ ಫುಲ್​ ಇಟ್ಟಿಗೆಗೆ 3 ಅಂಕ.

ಈ ಆಟ ಆಡುವಾಗ ಪ್ರಶಾಂತ್​ ಸಂಬರಗಿ ಸ್ವಲ್ಪ ಕ್ರೂರವಾಗಿ ವರ್ತಿಸಿರುವುದು ಮನೆಯವರ ಗಮನಕ್ಕೆ ಬಂದಿದೆ. ಪ್ರತಿ ಸ್ಪರ್ಧಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು, ಅವರ ಮೇಲೆ ಆಕ್ರಮಣಕಾರಿಯಾಗಿ ನಡೆದುಕೊಳ್ಳುವುದು ಮಾಡುತ್ತಿದ್ದರು. ಇದು ಅರವಿಂದ್​ ಗಮನಕ್ಕೆ ಬಂದಿದೆ.

ಆರಂಭದಲ್ಲಿ ಸುಮ್ಮನೆ ಇದ್ದ ಅರವಿಂದ್​ ನಂತರ ಸಿಟ್ಟಾಗಿದ್ದಾರೆ. ಪ್ರಶಾಂತ್​ ಎರಗೋಕೆ ಬಂದಾಗ, ಏನು ಎರಗೋಕೆ ಬರ್ತೀಯಾ? ನಾನು ಎಗರಿದ್ರೆ ನೀನು ಸತ್ತೋಗ್ತಿದ್ದೆ ಎಂದು ಪ್ರಶಾಂತ್​ಗೆ ಅರವಿಂದ್ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಆಗ ಪ್ರಶಾಂತ್​ ಇದೆಲ್ಲವೂ ಆಟದಲ್ಲಿ ಒಂದು. ನಾನು ಆಟ ಆಡುತ್ತಿದ್ದೆ ಅಷ್ಟೇ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅರವಿಂದ್, ನೀವು ಆಡುವುದನ್ನು ನಾನು ನೋಡಿದ್ದೇನೆ ಎಂದು ಕೊಂಕಾಗಿ ಉತ್ತರಿಸಿದ್ದಾರೆ.

ಹಲ್ಲು ಕಳೆದುಕೊಂಡ ಮಂಜು:

ಈ ಗೇಮ್​ ಆಡುವಾಗ ರಾಜೀವ್​ ಕೈಗೆ ಮಂಜು ಮುಖ ಡಿಕ್ಕಿಯಾಗಿದೆ. ಈ ಹೊಡೆತ ಎಷ್ಟು ಗಟ್ಟಿಯಾಗಿತ್ತು ಎಂದರೆ ಮಂಜು ಅವರ ಬಾಯಲ್ಲಿದ್ದ ಒಂದು ಹಲ್ಲು ಮುರಿದೇ ಹೋಗಿದೆ. ಅಷ್ಟೇ ಅಲ್ಲ, ಅವರ ಬಾಯಿ ಇಂದ ರಕ್ತ ಕೂಡ ಹರಿದು ಬಂದಿದೆ. ಇನ್ನು, ಕಳಚಿ ಬಿದ್ದ ಹಲ್ಲು, ರಾಜೀವ್​ ಕೈ ಒಳಗೆ ನಾಟಿತ್ತು.

ಇದನ್ನೂ ಓದಿ: ಬಿಗ್​ ಬಾಸ್​ಗೆ ವೈಲ್ಡ್​ ಕಾರ್ಡ್​ ಎಂಟ್ರಿ? ಪ್ರಶಾಂತ್​ ಸಂಬರಗಿ ಬಳಿ ಇದೆ ಖತರ್ನಾಕ್​ ಐಡಿಯಾ!

ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಸೆಲ್ಫಿ, ಆಟೋಗ್ರಾಫ್​ಗಾಗಿ ಸಿರಾಜ್ ಹಿಂದೆ ಬಿದ್ದ ಫ್ಯಾನ್ಸ್
ಸೆಲ್ಫಿ, ಆಟೋಗ್ರಾಫ್​ಗಾಗಿ ಸಿರಾಜ್ ಹಿಂದೆ ಬಿದ್ದ ಫ್ಯಾನ್ಸ್