ಬಿಗ್ ಬಾಸ್ಗೆ ವೈಲ್ಡ್ ಕಾರ್ಡ್ ಎಂಟ್ರಿ? ಪ್ರಶಾಂತ್ ಸಂಬರಗಿ ಬಳಿ ಇದೆ ಖತರ್ನಾಕ್ ಐಡಿಯಾ!
Bigg Boss Kannada Wild Card Entry: ಪ್ರಶಾಂತ್ ಸಂಬರಗಿ ಬಗ್ಗೆ ಎಲ್ಲರಿಗೂ ಅನುಮಾನ ಇದೆ. ಅವರು ಯಾವಾಗ ಯಾವ ರೀತಿ ಗೇಮ್ ಚೇಂಜ್ ಮಾಡುತ್ತಾರೆ ಎಂಬುದನ್ನು ಊಹಿಸುವುದು ಕೂಡ ಕಷ್ಟ ಆಗಿದೆ.
ಬಿಗ್ ಬಾಸ್ ಮನೆಗೆ ಕಾಲಿಡುವುದಕ್ಕೂ ಮುನ್ನವೇ ಹೊರಜಗತ್ತಿನಲ್ಲಿ ಸಿಕ್ಕಾಪಟ್ಟೆ ಕಿರಿಕ್ ಮಾಡಿಕೊಂಡಿದ್ದರು ಪ್ರಶಾಂತ್ ಸಂಬರಗಿ. ಅದೇ ಕಾರಣಕ್ಕಾಗಿ ಅವರಿಗೆ ಸಿಕ್ಕಾಪಟ್ಟೆ ಪ್ರಚಾರ ಸಿಕ್ಕಿತ್ತು. ಆ ಪ್ರಚಾರದ ಬಲದಿಂದಲೇ ಅವರು ಬಿಗ್ ಬಾಸ್ನಲ್ಲಿ ಸ್ಪರ್ಧಿಸುವ ಚಾನ್ಸ್ ಪಡೆದುಕೊಂಡರು. ಸದ್ಯ ದೊಡ್ಮನೆಯೊಳಗೆ ಪ್ರಶಾಂತ್ ಪ್ರಬಲ ಸ್ಪರ್ಧಿಯಾಗಿ ಮುಂದುವರಿಯುತ್ತಿದ್ದಾರೆ. ಅವರ ಬಗ್ಗೆ ಇನ್ನುಳಿದ ಸದಸ್ಯರು ಸದಾ ಅನುಮಾನದ ನೋಟ ಬೀರುತ್ತಿರುತ್ತಾರೆ.
ಗುಂಪುಗಾರಿಕೆ ಮಾಡುವಲ್ಲಿ ಪ್ರಶಾಂತ್ ಸಂಬರಗಿ ಸಿಕ್ಕಾಪಟ್ಟೆ ತಂತ್ರಗಾರಿಕೆ ತೋರುತ್ತಿದ್ದಾರೆ. ಎಲ್ಲರ ಮೈಂಡ್ ವಾಶ್ ಮಾಡುವ ಮೂಲಕ ತಮಗೆ ಬೇಕಾದ ಸ್ಪರ್ಧಿಗಳನ್ನು ತಮ್ಮತ್ತ ಸೆಳೆದುಕೊಂಡು ಗುಂಪು ರಚಿಸುತ್ತಿದ್ದಾರೆ. ಇದು ಎಲ್ಲರ ಗಮನಕ್ಕೂ ಬಂದಿದೆ. ಒಂದು ವೇಳೆ ಬಿಗ್ ಬಾಸ್ ಮನೆಗೆ ಯಾರಾದರೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದರೆ ಅವರನ್ನು ಕೂಡ ಪ್ರಶಾಂತ್ ಬುಟ್ಟಿಗೆ ಹಾಕಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಮನೆಯ ಸದಸ್ಯರಿಂದ ವ್ಯಕ್ತವಾಗಿದೆ.
ವೈಲ್ಡ್ ಕಾರ್ಡ್ ಮೂಲಕ ಬರುವವರನ್ನು ಬಾಗಿಲಿನಲ್ಲಿಯೇ ಪ್ರಶಾಂತ್ ಕ್ಯಾಚ್ ಹಾಕಿಕೊಳ್ಳುತ್ತಾರೆ. ಹೆಗಲ ಮೇಲೆ ಕೈ ಹಾಕಿಕೊಂಡು, ಪಕ್ಕಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಮನೆಯಲ್ಲಿ ತನ್ನನ್ನು ಬಿಟ್ಟರೆ ಬೇರೆ ಯಾವನೂ ಸರಿಯಿಲ್ಲ. ಅದರಲ್ಲೂ ಆ ಮಂಜು ಸಹವಾಸ ಮಾಡಲೇಬೇಡಿ ಎಂದು ಮೈಂಡ್ ವಾಶ್ ಮಾಡುತ್ತಾರೆ ಎಂದು ಮನೆಮಂದಿಯಲ್ಲಿ ಊಹಿಸಿಕೊಂಡಿದ್ದಾರೆ. ಅದನ್ನು ಪ್ರಶಾಂತ್ ಸಂಬರಗಿಯ ಎದುರಿನಲ್ಲಿಯೇ ಎಲ್ಲರೂ ಹೇಳಿಕೊಂಡು ನಕ್ಕಿದ್ದಾರೆ. ಪ್ರಶಾಂತ್ ಹೇಗೆ ಮಾಡಬಹುದು ಎಂಬುದನ್ನು ಅರವಿಂದ್ ಕೆ.ಪಿ. ಅಭಿನಯಿಸಿ ತೋರಿಸಿದ್ದಾರೆ.
ಬಿಗ್ ಬಾಸ್ನಲ್ಲಿ ಪ್ರಶಾಂತ್ ಗುಂಪುಗಾರಿಕೆ ಮಾಡುತ್ತಿರುವುದು ವೀಕ್ಷಕರ ಗಮನಕ್ಕೆ ಬಂದಿದೆ ಕೂಡ. ಮಂಜು ಪರವಾಗಿ ಹೆಚ್ಚು ಜನರು ಮಾತನಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ ಬಳಿಕ ಪ್ರಶಾಂತ್ ಬಹುತೇಕರ ಬಳಿಗೆ ತೆರಳಿ ಚಾಡಿ ಹೇಳಿದ್ದಾರೆ. ಅದರ ಪರಿಣಾಮವಾಗಿ ಮಂಜು ಬಗ್ಗೆ ಇದ್ದ ಅಭಿಪ್ರಾಯವೇ ಬಹುತೇಕರಲ್ಲಿ ಬದಲಾಗುವಂತಾಯಿತು.
ಇನ್ನು, ತಮ್ಮ ಗ್ರೂಪಿಸಂ ಪ್ಲ್ಯಾನ್ ಬಗ್ಗೆ ಶಮಂತ್ ಬಳಿ ಪ್ರಶಾಂತ್ ಹೇಳಿಕೊಂಡಿದ್ದಾರೆ. ‘ವಿಶ್ವ, ರಘು, ನಾನು, ನೀನು ಹಾಗೂ ವೈಷ್ಣವಿ ಸೂಪರ್ ಗ್ಯಾಂಗ್. ನಮ್ಮೆಲ್ಲರ ಆಲೋಚನೆ ಒಂದೇ ರೀತಿ ಇದೆ. ನಾವು ಆರಾಮಾಗಿ ಮಾತನಾಡಿಕೊಂಡು ಇರಬಹುದು. ಮಂಜನ ಗ್ಯಾಂಗ್ನಿಂದ ನಾವು ವಿಶ್ವನನ್ನು ಎಳೆದುಕೊಳ್ಳಬೇಕು’ ಎಂದು ಪ್ರಶಾಂತ್ ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಬಗ್ಗೆ ಶಂಕರ್ ಅಶ್ವತ್ಥ್ ಬೇಸರ!
ಬಿಗ್ ಬಾಸ್ ಗೆಲ್ಲೋದು ಅರವಿಂದ್; ಮುಂದಿನ ವಾರ ಶಂಕರ್ ಎಲಿಮಿನೇಟ್! ಹಿರಿಯ ನಟಿಯ ಭವಿಷ್ಯ ನಿಜವಾಗತ್ತಾ?
Published On - 1:28 pm, Tue, 30 March 21