ಡಾ. ರಾಜ್ ರೀತಿ ನೇತ್ರದಾನಕ್ಕೆ ಮುಂದಾದ ಶಿವಣ್ಣ! ನಾರಾಯಣ ನೇತ್ರಾಲಯದಲ್ಲಿ ನೋಂದಣಿ

ನೇತ್ರದಾನದ ಮಹತ್ವವನ್ನು ಸಾರುವ ‘ಅಕ್ಷಿ’ ಚಿತ್ರಕ್ಕೆ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಘೋಷಣೆ ಆಯಿತು. ಆ ಚಿತ್ರತಂಡವನ್ನು ನಾರಾಯಣ ನೇತ್ರಾಲಯದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಶಿವಣ್ಣ ‘ಅಕ್ಷಿ’ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹೇಳಿದರು.

ಡಾ. ರಾಜ್ ರೀತಿ ನೇತ್ರದಾನಕ್ಕೆ ಮುಂದಾದ ಶಿವಣ್ಣ! ನಾರಾಯಣ ನೇತ್ರಾಲಯದಲ್ಲಿ ನೋಂದಣಿ
ಶಿವರಾಜ್​ಕುಮಾರ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Mar 30, 2021 | 5:23 PM

ಅಭಿಮಾನಿಗಳ ನೆಚ್ಚಿನ ‘ಹ್ಯಾಟ್ರಿಕ್ ಹೀರೋ’, ನಟ ಶಿವರಾಜ್​ಕುಮಾರ್ ಅವರು ಮಂಗಳವಾರ (ಮಾ.30) ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ. ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಕಣ್ಣುಗಳ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ‘ಅಪ್ಪಾಜಿಯ ವಿಡಿಯೋ ನೋಡಿದಾಗ ಭಾವುಕನಾದೆ. ಅಪ್ಪಾಜಿ ಇವತ್ತು ಇಲ್ಲ ಅನ್ನೋದನ್ನ ನಾನು ನಂಬಲ್ಲ. ಅವರ ಕಣ್ಣುಗಳ ಮೂಲಕ ಅವರು ಜೀವಂತವಾಗಿದ್ದಾರೆ’ ಎಂದಿದ್ದಾರೆ ಶಿವಣ್ಣ.

2006ರಲ್ಲಿ ವರನಟ ಡಾ. ರಾಜ್​ಕುಮಾರ್ ಮರಣದ ನಂತರ ಅವರ ಕಣ್ಣುಗಳನ್ನು ಇದೇ ಆಸ್ಪತ್ರೆಯಲ್ಲಿ ದಾನ ಮಾಡಲಾಗಿತ್ತು. 1994ರಲ್ಲಿ ಡಾ. ರಾಜ್​ಕುಮಾರ್ ಐ ಬ್ಯಾಂಕ್ ಸ್ಥಾಪನೆಗೊಂಡಿತ್ತು. ಸ್ವತಃ ಅಣ್ಣಾವ್ರು ಅದನ್ನು ಉದ್ಘಾಟಿಸಿದ್ದರು. ಈಗ ನೇತ್ರದಾನದ ಪ್ರತಿಜ್ಞೆ ಮಾಡುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಶಿವರಾಜ್​ಕುಮಾರ್​ ಮಾದರಿ ಆಗಿದ್ದಾರೆ.

ನೇತ್ರದಾನದ ಮಹತ್ವವನ್ನು ಸಾರುವ ‘ಅಕ್ಷಿ’ ಚಿತ್ರಕ್ಕೆ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಘೋಷಣೆ ಆಯಿತು. ಆ ಚಿತ್ರತಂಡವನ್ನು ನಾರಾಯಣ ನೇತ್ರಾಲಯದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಶಿವಣ್ಣ ‘ಅಕ್ಷಿ’ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹೇಳಿದರು.

ಅಕ್ಷಿ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿರೋದು ದೊಡ್ಡ ವಿಚಾರ. ಇದು ಬರೀ ಪ್ರಶಸ್ತಿಗೆ ಸೀಮಿತವಾಗಬಾರದು. ಎಲ್ಲರೂ ಬಂದು ಸಿನಿಮಾ ನೋಡಬೇಕು. ಹೊಡಿಯೋದು, ರೊಮ್ಯಾನ್ಸ್ ಮಾಡೋದು ಮಾತ್ರ ಸಿನಿಮಾ ಅಲ್ಲ. ಇಂಥ ಸಿನಿಮಾ ನೋಡಬೇಕು. ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದಕ್ಕೆ ಖುಷಿ ಇದೆ. ಚಿತ್ರದಲ್ಲಿ ದೊಡ್ಡದು, ಸಣ್ಣದು ಯಾವುದೂ ಇಲ್ಲ. ನಾನು ಈ ಚಿತ್ರ ನೋಡ್ತಿನಿ, ಎಲ್ಲರೂ ನೋಡಿ’ ಎಂದು ಶಿವರಾಜ್​ಕುಮಾರ್ ಹೇಳಿದರು.

2006ರ ಏಪ್ರಿಲ್ 12ರಂದು ಮೇರುನಟ ನಿಧನರಾದಾಗ ಅವರ ನೇತ್ರದಾನ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಲ್ಲೂ ಹರಡಿತು. ಆ ಸಂದರ್ಭದಲ್ಲಿ ಮನೋಜ್ ಕುಮಾರ್ (ಅಕ್ಷಿ ಚಿತ್ರದ ನಿರ್ದೇಶಕ) ಕಾಲೇಜು ವಿದ್ಯಾರ್ಥಿ ಆಗಿದ್ದರು. ಆಗಲೇ ಅವರಿಗೆ ನೇತ್ರದಾನದ ಕುರಿತು ಜನರಿಗೆ ತಿಳಿಸಿ ಹೇಳಬೇಕು ಎಂಬ ಗುರಿ ಮೂಡಿತ್ತು. ಅದನ್ನು ‘ಅಕ್ಷಿ’ ಸಿನಿಮಾದ ಮೂಲಕ ಅವರು ಈಡೇರಿಸಿಕೊಂಡಿದ್ದಾರೆ. ಇಳಾ ವಿಟ್ಲ, ಗೋವಿಂದೇ ಗೌಡ ಹಾಗೂ ಇಬ್ಬರು ಮಕ್ಕಳು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: National Film Awards 2019: ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ‘ಅಕ್ಷಿ’ ಚಿತ್ರಕ್ಕೂ ಡಾ. ರಾಜ್​ಕುಮಾರ್​​ಗೂ ಇದೆ ಸಂಬಂಧ!

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್