‘ಆ ಡೋರ್​ ಓಪನ್​ ಆದರೆ ಸಾವಿನ ಕದ ತೆರೆದಂತಾಗುತ್ತದೆ’: ಮಂಜು ಪಾವಗಡ ಹೀಗೆ ಬೆಚ್ಚಿ ಬಿದ್ದಿದ್ಯಾಕೆ?

ಮಂಜು ಅವರಿಗೆ ಮನೆಯಿಂದ ಹೊರ ಹೋಗುವ ಆತಂಕ ಕಾಡಿದೆ. ಭಾನುವಾರ (ಮಾರ್ಚ್​ 28) ಚಂದ್ರಕಲಾ ಮೋಹನ್​ ಹೊರ ಹೋದ ನಂತರ ಮನೆಯ ಕೆಲವರು ಸ್ಪರ್ಧಿಗಳ ಜತೆ ಮಂಜು ಈ ಬಗ್ಗೆ ಮಾತನಾಡಿದ್ದಾರೆ.

‘ಆ ಡೋರ್​ ಓಪನ್​ ಆದರೆ ಸಾವಿನ ಕದ ತೆರೆದಂತಾಗುತ್ತದೆ’: ಮಂಜು ಪಾವಗಡ ಹೀಗೆ ಬೆಚ್ಚಿ ಬಿದ್ದಿದ್ಯಾಕೆ?
ಬಿಗ್ ​ಬಾಸ್​ ಮನೆ
Follow us
| Updated By: ಮದನ್​ ಕುಮಾರ್​

Updated on: Mar 30, 2021 | 7:28 AM

ಬಿಗ್​ ಬಾಸ್​ ಮನೆಯಿಂದ ನಾಲ್ಕನೇ ಸ್ಪರ್ಧಿಯಾಗಿ ಚಂದ್ರಕಲಾ ಮೋಹನ್​ ಹೊರ ಹೋಗಿದ್ದಾರೆ. ಈಗ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಂತಾಗಿದೆ. ಈ ಎಲ್ಲಾ ಸ್ಪರ್ಧಿಗಳು ನಾಲ್ಕು ವಾರದ ಎಲಿಮಿನೇಷನ್​ ಪ್ರಕ್ರಿಯೆಯನ್ನು ನೋಡಿದ್ದಾರೆ. ಇದು ಮನೆಯ ಅನೇಕರಿಗೆ ಆತಂಕ ಮೂಡಿಸಿದೆ. ಈ ಬಗ್ಗೆ ಮಂಜು ಪಾವಗಡ ಕೂಡ ಆತಂಕ ಹೊರ ಹಾಕಿದ್ದಾರೆ. ಬಿಗ್​ ಬಾಸ್ ಮನೆಯಲ್ಲಿ ಮಂಜು ಪಾವಗಡ ಸ್ಟ್ರಾಂಗೆಸ್ಟ್​ ಕ್ಯಾಂಡಿಡೇಟ್​ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ನಾಲ್ಕನೇ ವಾರದ ಎಲಿಮಿನೇಷನ್​ನಲ್ಲಿ ಮೊದಲು ಸೇಫ್​ ಆಗಿದ್ದು ಅವರೇ. ಅಂದರೆ, ಅತಿ ಹೆಚ್ಚು ವೋಟ್​ ಬಿದ್ದಿದ್ದು ಅವರಿಗೆ. ಹೀಗಾಗಿ, ಅವರನ್ನು ತುಳಿಯೋ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.

ಈ ಮಧ್ಯೆಯೂ ಅವರಿಗೆ ಮನೆಯಿಂದ ಹೊರ ಹೋಗುವ ಆತಂಕ ಕಾಡಿದೆ. ಭಾನುವಾರ (ಮಾರ್ಚ್​ 28) ಚಂದ್ರಕಲಾ ಮೋಹನ್​ ಹೊರ ಹೋದ ನಂತರ ಅವರು ಮನೆಯ ಕೆಲವರು ಸ್ಪರ್ಧಿಗಳ ಜತೆ ಈ ಬಗ್ಗೆ ಮಾತನಾಡಿದ್ದಾರೆ.

ನಾವು ಒಂದು ತಿಂಗಳು ಬಿಗ್​ ಬಾಸ್​ ಮನೆಯಲ್ಲಿ ಕಳೆದಿದ್ದೇವೆ. ಹೀಗಾಗಿ, ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳ ಜತೆ ಒಂದು ಆಳವಾದ ಬಂಧ ಬೆಳೆದಿದೆ. ಈಗ ಮನೆಯಿಂದ ಹೊರ ಹೋಗುತ್ತಾರೆ ಎಂದರೆ ಖಂಡಿತವಾಗಿಯೂ ಬೇಸರ ಆಗಿಯೇ ಆಗುತ್ತದೆ ಎನ್ನುವ ಅಭಿಪ್ರಾಯವನ್ನು ಮಂಜು ವ್ಯಕ್ಯಪಡಿಸಿದರು. ಅಷ್ಟೇ ಅಲ್ಲ, ಮನೆಯವರನ್ನೆಲ್ಲ ಒಳಗೆ ನಿಲ್ಲಿಸಿ, ತಾವು ಗಾರ್ಡನ್​ ಏರಿಯಾಗೆ ಬಂದರು.

ಈ ಮೌನ ನೋಡಿ ನಮಗೆ ತುಂಬಾನೇ ಭಯ ಆಗುತ್ತಿದೆ. ಬಿಗ್​ ಬಾಸ್ ಮನೆಯಿಂದ ಹೊರ ಹೋಗುವ ಬಾಗಿಲನ್ನು ನೋಡಿದರೇ ಭಯ ಆಗುತ್ತದೆ. ಆ ಡೋರ್​ ಓಪನ್​ ಆದರೆ ಸಾವಿನ ಕದ ತೆರೆದಂತಾಗುತ್ತದೆ ಎಂದು ಆತಂಕ ಹೊರ ಹಾಕಿದರು. ಅಲ್ಲದೆ, ನಾನು ಎಲಿಮಿನೇಟ್​ ಆದರೆ, ಮನೆಯಿಂದ ಹೊರ ಹೋಗಲ್ಲ ಎಂದು ಕೂಡ ಹೇಳಿದರು.

ಚಂದ್ರಕಲಾ ಮೋಹನ್ ನಾಲ್ಕನೇ ವಾರ ಎಲಿಮಿನೇಟ್​ ಆಗಿದ್ದಾರೆ. ಈ ಮೂಲಕ ನಾಲ್ಕನೇ ಸ್ಪರ್ಧಿಯಾಗಿ ಅವರು ಬಿಗ್​ ಬಾಸ್​ ಮನೆಯಿಂದ ಹೊರ ನಡೆದಿದ್ದಾರೆ. ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಚಂದ್ರಕಲಾ ಮೋಹನ್​ ಈ ಬಾರಿ ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಎರಡನೇ ಹಿರಿಯ ಸ್ಪರ್ಧಿ ಆಗಿದ್ದರು. ಚಂದ್ರಕಲಾ ಯಾರ ಜತೆಯೂ ಬೆರೆಯುತ್ತಿರಲಿಲ್ಲ. ಹೀಗಾಗಿ, ಅವರು ಮನೆಯವರ ಜತೆ ಹೆಚ್ಚು ಕನೆಕ್ಟ್​ ಆಗಿಲ್ಲ. ಈ ಕಾರಣಕ್ಕೆ ಅವರಿಗೆ ಕಡಿಮೆ ಮತ ಬಿದ್ದಿದೆ.

ಇದನ್ನೂ ಓದಿ: ಬಿಗ್​ ಬಾಸ್​​ ಗೆಲ್ಲೋದು ಅರವಿಂದ್​; ಮುಂದಿನ ವಾರ ಶಂಕರ್​ ಎಲಿಮಿನೇಟ್! ಹಿರಿಯ ನಟಿಯ ಭವಿಷ್ಯ ನಿಜವಾಗತ್ತಾ?

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ