AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಕೋಟಿ ರೂ. ದೇಣಿಗೆ ನೀಡಿದ ಸೂರ್ಯ-ಕಾರ್ತಿ; ಕೊವಿಡ್​ ಸಂಕಷ್ಟದಲ್ಲಿ ನೆರವಾದ ಸ್ಟಾರ್​ ಕಲಾವಿದರು

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ ಅವರನ್ನು ಸೂರ್ಯ ಮತ್ತು ಕಾರ್ತಿ ಬುಧವಾರ (ಮೇ 12) ಭೇಟಿ ಆಗಿದ್ದಾರೆ. ಈ ವೇಳೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅವರು ಈ ಹಣವನ್ನು ಕೊಟ್ಟಿದ್ದಾರೆ.

1 ಕೋಟಿ ರೂ. ದೇಣಿಗೆ ನೀಡಿದ ಸೂರ್ಯ-ಕಾರ್ತಿ; ಕೊವಿಡ್​ ಸಂಕಷ್ಟದಲ್ಲಿ ನೆರವಾದ ಸ್ಟಾರ್​ ಕಲಾವಿದರು
ಕಾರ್ತಿ - ಸೂರ್ಯ
Follow us
ಮದನ್​ ಕುಮಾರ್​
|

Updated on: May 13, 2021 | 8:14 AM

ಮಹಾಮಾರಿ ಕೊರೊನಾ ವೈರಸ್ ಕಾಟಕ್ಕೆ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಸರಿಯಾದ ಸಮಯಕ್ಕೆ ಬೆಡ್ ಸಿಗದೇ, ಆಕ್ಸಿಜನ್​ ಕೊರತೆಯಿಂದ ಕೊವಿಡ್​ ಸೋಂಕಿತರು ಪ್ರಾಣ ಬಿಡುವಂತಾಗಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಅನೇಕರು ಸಹಾಯ ಮಾಡುತ್ತಿದ್ದಾರೆ. ಎನ್​ಜಿಓಗಳು, ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳು ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ಕಾಲಿವುಡ್​ ನಟರಾದ ಸೂರ್ಯ ಮತ್ತು ಕಾರ್ತಿ ಕೂಡ ಈಗ ದೊಡ್ಡ ಮೊತ್ತದ ದೇಣಿಗೆ ನೀಡಿದ್ದಾರೆ. ಒಂದು ಕೋಟಿ ರೂ. ನೀಡುವ ಮೂಲಕ ಅವರು ಜನರ ಕಣ್ಣೀರು ಒರೆಸಲು ಮುಂದಾಗಿದ್ದಾರೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ ಅವರನ್ನು ಸೂರ್ಯ ಮತ್ತು ಕಾರ್ತಿ ಬುಧವಾರ (ಮೇ 12) ಭೇಟಿ ಆಗಿದ್ದಾರೆ. ಈ ವೇಳೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅವರು ಈ ಹಣವನ್ನು ಕೊಟ್ಟಿದ್ದಾರೆ. ಕೊವಿಡ್​ನಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ಸಹಾಯ ಆಗಲಿ ಎಂಬ ಉದ್ದೇಶದಿಂದ ಅವರು ದೇಣಿಗೆ ನೀಡಿದ್ದಾರೆ. ಈ ವೇಳೆ 2ಡಿ ಎಂಟರ್​ಟೇನ್​ಮೆಂಟ್​ನ ರಾಜಶೇಖರ್​ ಪಾಂಡಿಯನ್​ ಕೂಡ ಜೊತೆಯಿದ್ದರು.

ಇಡೀ ದೇಶಕವೇ ಕೊರೊನಾದಿಂದ ಕಷ್ಟ ಪಡುತ್ತಿರುವ ಈ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಮುಂದೆ ಬಂದು ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಯ್ಲಿ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅಲ್ಲದೆ, ಜನರಿಂದ ಹತ್ತಾರು ಕೋಟಿ ರೂ. ಸಂಗ್ರಹ ಆಗುವಂತೆ ಮಾಡಿದ್ದಾರೆ. ಅಕ್ಷಯ್ ಕುಮಾರ್​, ಅಮಿತಾಭ್​ ಬಚ್ಚನ್​, ಪ್ರಿಯಾಂಕಾ ಚೋಪ್ರಾ, ನಿಕ್​ ಜೋನಸ್​ ಮುಂತಾದ ಸ್ಟಾರ್​ಗಳು ಕೂಡ ಜನರ ಸಹಾಯಕ್ಕೆ ಧಾವಿಸಿದ್ದಾರೆ.

ಇನ್ನು, ನಟ ಸೋನು ಸೂದ್​ ಮಾಡುತ್ತಿರುವ ಕಾರ್ಯವಂತೂ ವಿಶ್ವಾದ್ಯಂತ ಸುದ್ದಿ ಆಗುತ್ತಿದೆ. ವಿದೇಶದಿಂದ ಆಕ್ಸಿಜನ್​ ಪ್ಲಾಂಟ್​ಗಳನ್ನು ತರಿಸಿ, ಜನರಿಗೆ ಆಕ್ಸಿಜನ್​ ನೀಡುವಷ್ಟರ ಮಟ್ಟಿಗೆ ಅವರ ಸಮಾಜಸೇವೆ ನಡೆಯುತ್ತಿದೆ. ಕನ್ನಡದಲ್ಲಿಯೂ ಅನೇಕ ಸ್ಟಾರ್​ಗಳ ದೇಣಿಗೆ ನೀಡುತ್ತಿದ್ದಾರೆ. ಚಿತ್ರರಂಗದ ಕಾರ್ಮಿಕರಿಗೆ, ಬಡ ಕಲಾವಿದರಿಗೆ ನೆರವಾಗಲು ಉಪೇಂದ್ರ ಮುಂದೆ ಬಂದಿದ್ದಾರೆ. ಅವರ ಕಾರ್ಯಕ್ಕೆ ಅನೇಕರು ಕೈ ಜೋಡಿಸಿದ್ದಾರೆ. ನಟಿ ಮಾನ್ಯಾ, ಸಾಧುಕೋಕಿಲ, ಬಿ, ಸರೋಜಾದೇವಿ, ಶೋಭರಾಜ್​, ಪವನ್​ ಒಡೆಯರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾಗುವಷ್ಟು ದೇಣಿಗೆ ನೀಡಿದ್ದಾರೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್​ ಪೊನ್ನಣ್ಣ ತಮ್ಮದೇ ಹೆಲ್ಪ್​ಲೈನ್​ ಆರಂಭಿಸಿ ಜನಸೇವೆ ಮಾಡುತ್ತಿದ್ದಾರೆ.

ಇದನ್ನೂ ಓದಿ:

Sonu Sood: ಕೊರೊನಾ ಸೋಂಕಿತರ ನೆರವಿಗಾಗಿ ಮತ್ತೊಂದು ಸಾಹಸಕ್ಕೆ ಮುಂದಾದ ರಿಯಲ್​ ಹೀರೋ ಸೋನು ಸೂದ್​

ಉಪೇಂದ್ರ ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಕೈ ಜೋಡಿಸಿದ ಸಾಧುಕೋಕಿಲ, ಸರೋಜಾದೇವಿ ಮುಂತಾದ ಸೆಲೆಬ್ರಿಟಿಗಳು

ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ