Radhe Movie Review: ‘ರಾಧೆ’ ನೋಡಿ ಏನು ಹೇಳಿದ್ರು ಸಲ್ಮಾನ್​ ಖಾನ್​ ಫ್ಯಾನ್ಸ್​? ಇಲ್ಲಿದೆ ಟ್ವಿಟರ್​ ವಿಮರ್ಶೆ

Salman Khan: ಇದು ಮಾಸ್​ ಮನರಂಜನೆ ನೀಡುವ ಸಿನಿಮಾ. ಭರ್ಜರಿ ಆ್ಯಕ್ಷನ್​ ಜೊತೆಗೆ ಪವರ್​ಫುಲ್​ ಆದಂತಹ ಡೈಲಾಗ್​ಗಳಿವೆ. ಸಲ್ಮಾನ್​ ಖಾನ್​ ಮತ್ತು ವಿಲನ್​ ರಣದೀಪ್​ ಹೂಡ ನಟನೆ ಪರಿಣಾಮಕಾರಿ ಆಗಿದೆ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ.

Radhe Movie Review: ‘ರಾಧೆ’ ನೋಡಿ ಏನು ಹೇಳಿದ್ರು ಸಲ್ಮಾನ್​ ಖಾನ್​ ಫ್ಯಾನ್ಸ್​? ಇಲ್ಲಿದೆ ಟ್ವಿಟರ್​ ವಿಮರ್ಶೆ
ಸಲ್ಮಾನ್​ ಖಾನ್​ - ದಿಶಾ ಪಠಾಣಿ
Follow us
ಮದನ್​ ಕುಮಾರ್​
|

Updated on: May 13, 2021 | 11:58 AM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ರಾಧೆ: ಯುವರ್ ಮೋಸ್ಟ್​ ವಾಂಟೆಡ್​ ಭಾಯ್​’ ಚಿತ್ರ ತೆರೆಕಂಡಿದೆ. ಈದ್​ ಹಬ್ಬದ ಪ್ರಯುಕ್ತ ಮೇ 13ರಂದು ವಿಶ್ವಾದ್ಯಂತ ಇರುವ ಸಲ್ಮಾನ್​ ಖಾನ್​ ಫ್ಯಾನ್ಸ್​​ಗೆ ಮನರಂಜನೆ ನೀಡುವ ಸಲುವಾಗಿ ರಾಧೆ ರಿಲೀಸ್​ ಆಗಿದೆ. ಲಾಕ್​ಡೌನ್​ ಇಲ್ಲದೇ ಇರುವ ದೇಶ, ನಗರಗಳ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇನ್ನುಳಿದಂತೆ ಓಟಿಟಿ ಪ್ಲಾಟ್​ಫಾರ್ಮ್​ಗಳ ಮೂಲಕ ಪ್ರೇಕ್ಷಕರು ರಾಧೆ ಸಿನಿಮಾವನ್ನು ನೋಡುತ್ತಿದ್ದಾರೆ. ಈಗಾಗಲೇ ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ವಿಮರ್ಶೆಯನ್ನೂ ಜನರು ತಿಳಿಸುತ್ತಿದ್ದಾರೆ.

ದೊಡ್ಡ ಪರದೆಯಲ್ಲಿ ರಿಲೀಸ್​ ಮಾಡಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡೇ ಈ ಸಿನಿಮಾ ತಯಾರಾಗಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಓಟಿಟಿ ಮೊರೆ ಹೋಗಬೇಕಾಯಿತು. ಸಲ್ಮಾನ್​ ಖಾನ್​ಗೆ ಜೋಡಿಯಾಗಿ ದಿಶಾ ಪಠಾಣಿ ಅಭಿನಯಿಸಿದ್ದು, ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ಈ ಮೊದಲೇ ಬಿಡುಗಡೆಯಾದ ಟ್ರೇಲರ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಪೂರ್ತಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಚಿತ್ರದ ಆ್ಯಕ್ಷನ್​ ದೃಶ್ಯಗಳಿಗೆ ಹೆಚ್ಚು ಪ್ರಶಂಸೆ ಸಿಗುತ್ತಿದೆ.

ಈ ಚಿತ್ರ ದುಬೈನಲ್ಲಿ ಪ್ರೀಮಿಯರ್​ ಆಗಿದೆ. ಅಲ್ಲಿರುವ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ‘ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್​ ಇದೆ. ಸಲ್ಮಾನ್​ ಖಾನ್​ ಅತ್ಯುತ್ತಮವಾಗಿ ಮಾಡಿದ್ದಾರೆ. ಈ ಸಿನಿಮಾದ ಸೆಕೆಂಡ್​ ಹಾಫ್​ ತುಂಬ ಸಸ್ಪನ್ಸ್​ ಆಗಿದೆ’ ಎಂದು ದುಬೈನಲ್ಲಿರುವ ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ.

‘ಬಾಡಿಗಾರ್ಡ್​, ಕಿಕ್​, ವಾಂಡೆಟ್​ ಸಿನಿಮಾಗಳಿಗಿಂತಲೂ ರಾಧೆ ಚೆನ್ನಾಗಿದೆ. ಈಗ ಆಯ್ಕೆ ನಿಮ್ಮದು. ದ್ವೇಷಿಸುವವರ ಮಾತು ಕೇಳಬೇಡಿ. ನೀವೇ ಒಮ್ಮೆ ನೋಡಿ. ಖಂಡಿತಾ ರಾಧೆ ಇಷ್ಟವಾಗಲಿದೆ’ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ಸಲ್ಮಾನ್​ ಖಾನ್​ ಫ್ಯಾನ್ಸ್​ ಅಲ್ಲದವರಿಗೂ ಈ ಚಿತ್ರ ಇಷ್ಟ ಆಗುತ್ತದೆ. ಯಾಕೆಂದರೆ ಇದು ರೇಸ್​ 3 ಅಥವಾ ದಬಂಗ್​ 3 ಚಿತ್ರಗಳ ರೀತಿ ಇಲ್ಲ. ಇದು ವಾಡೆಂಟ್​ ಮತ್ತು ರೆಡಿ ಸಿನಿಮಾಗಳ ಕಾಂಬಿನೇಷನ್​ ರೀತಿ ಇದೆ. ಸಿನಿಮಾದ ಅವಧಿ ಕಡಿಮೆ ಇರುವುದು ಬೆಸ್ಟ್​ ವಿಷಯ ಆಗಿದೆ’ ಎಂಬ ವಿಮರ್ಶೆ ಟ್ವಿಟರ್​ನಲ್ಲಿ ವ್ಯಕ್ತವಾಗಿದೆ. ಇದೊಂದು ಪಕ್ಕಾ ಮಸಾಲಾ ಸಿನಿಮಾ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಸಲ್ಮಾನ್​ ನಟನೆಯ ಸಿನಿಮಾಗಳಲ್ಲಿ ಅಭಿಮಾನಿಗಳು ಬಯಸಬಹುದಾದ ಎಲ್ಲ ಅಂಶಗಳನ್ನು ರಾಧೆ ಒಳಗೊಂಡಿದೆ.

‘ಇದು ಮಾಸ್​ ಮನರಂಜನೆ ನೀಡುವ ಸಿನಿಮಾ. ಭರ್ಜರಿ ಆ್ಯಕ್ಷನ್​ ಜೊತೆಗೆ ಪವರ್​ಫುಲ್​ ಆದಂತಹ ಡೈಲಾಗ್​ಗಳಿವೆ. ಸಲ್ಮಾನ್​ ಖಾನ್​ ಮತ್ತು ವಿಲನ್​ ರಣದೀಪ್​ ಹೂಡ ನಟನೆ ಪರಿಣಾಮಕಾರಿ ಆಗಿದೆ. ಸೆಕೆಂಡ್​ ಹಾಫ್​ ತುಂಬ ಮಾಸ್​ ಆಗಿದೆ. ಸೂಪರ್​ ಮನರಂಜನೆ ನೀಡುತ್ತದೆ’ ಎಂದು ಸಲ್ಲು ಫ್ಯಾನ್ಸ್​ ಟ್ವೀಟ್​ ಮಾಡಿದ್ದಾರೆ. ಡ್ರಗ್​​ ಮಾಫಿಯಾದ ಕುರಿತ ಕಥೆ ಈ ಚಿತ್ರದಲ್ಲಿದೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಜಾಕಿ ಶ್ರಾಫ್​ ಅಭಿನಯಿಸಿದ್ದಾರೆ.

ಇದನ್ನೂ ಓದಿ: 

Salman Khan: ರಾಧೆ ಚಿತ್ರಕ್ಕೆ 21 ಕಡೆ ಕತ್ತರಿ; ಸಲ್ಮಾನ್​ ಖಾನ್​ ಸಿನಿಮಾದಲ್ಲಿ ಅಂಥದ್ದೇನಿದೆ?

ರಾಧೆ ನಿಮ್ಮನ್ನು ರಂಜಿಸೋದು ಕೇವಲ 114 ನಿಮಿಷ; ಇದು ಸಲ್ಮಾನ್ ನಟನೆಯ ಅತಿ ಸಣ್ಣ ಚಿತ್ರ!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ